ಸಾಂದರ್ಭಿಕ ಚಿತ್ರ 
ರಾಜ್ಯ

ಡಿಜಿಟಲ್ ವೇದಿಕೆಗಳಲ್ಲಿ ಸುಳ್ಳು ಸುದ್ದಿ, ದ್ವೇಷ ಭಾಷಣ ತಡೆಗೆ ಹೊಸ ವಿಧೇಯಕ: ಮೂರು ವರ್ಷ ಜೈಲು ಶಿಕ್ಷೆ!

ದ್ವೇಷದ ಭಾಷಣ ಫೋಸ್ಟ್ ಮಾಡಲು ಹಣಕಾಸಿನ ಬೆಂಬಲ ಒದಗಿಸುವವರು, ಅಂತಹ ವೇದಿಕೆಗಳಿಗೆ ಸಹಾಯ ಮಾಡುವ ವ್ಯಕ್ತಿಗಳು ಕೂಡಾ ಪ್ರಾಥಮಿಕ ಅಪರಾಧಿಗಳಂತೆಯೇ ದಂಡವನ್ನು ಎದುರಿಸಬಹುದು.

ಬೆಂಗಳೂರು: ರಾಜ್ಯದಲ್ಲಿ ಡಿಜಿಟಲ್ ವೇದಿಕೆಗಳಲ್ಲಿ ಸುಳ್ಳು ಸುದ್ದಿ, ದ್ವೇಷ ಭಾಷಣ ತಡೆಗೆ ಹೊಸ ಕಾನೂನು ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ (ತಡೆಗಟ್ಟುವಿಕೆ ನಿಯಂತ್ರಣ) ವಿಧೇಯಕ 2025ರಡಿ ಇಂತಹ ಅಪರಾಧ ಮಾಡಿದವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ರೂ 5,000 ದಂಡವನ್ನು ವಿಧಿಸಲಾಗುತ್ತದೆ. ಉದ್ದೇಶಿತ ಮಸೂದೆಯು ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳನ್ನು ಜಾಮೀನು ರಹಿತ ಮತ್ತು ಅರಿಯಲಾಗದ ಅಪರಾಧಗಳೆಂದು ವರ್ಗೀಕರಿಸುತ್ತದೆ.

ದ್ವೇಷ ಭಾಷಣ ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ಭಾಷಣೆ, ನಿವಾಸ, ಅಂಗವೈಕಲ್ಯ, ಬುಡಕಟ್ಟು ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವ ಅಥವಾ ಪ್ರಚಾರ ಮಾಡುವ ವ್ಯಕ್ತಿ ಅಥವಾಗ ಗುಂಪಿಗೆ ಮೂರು ವರ್ಷಗಳ ಕಾಲ ಶಿಕ್ಷೆ ವಿಧಿಸಬಹುದು ಅಥವಾ 5 ಸಾವಿರ ದಂಡದ ಜೊತೆಗೆ ಶಿಕ್ಷೆ ವಿಧಿಸಲು ಪ್ರಸ್ತಾಪಿಸಲಾಗಿದೆ.

ಹೊಸ ಮಸೂದೆಯಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಗಳು, ಸರ್ಚ್ ಇಂಜಿನ್‌ಗಳು, ಟೆಲಿಕಾಂ ಆಪರೇಟರ್‌ಗಳು, ಆನ್‌ಲೈನ್ ಮಾರುಕಟ್ಟೆ ಸ್ಥಳಗಳು ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರಂತಹ ಡಿಜಿಟಲ್ ಮಧ್ಯವರ್ತಿಗಳು ಅವರು ಪೋಸ್ಟ್ ಮಾಡುವ ವಿಷಯಕ್ಕೆ ಜವಾಬ್ದಾರರಾಗಿರುತ್ತಾರೆ.

ಈ ಪ್ಲಾಟ್‌ಫಾರ್ಮ್‌ಗಳು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ಪಾವತಿಸಬೇಕಾಗುತ್ತದೆ. ದ್ವೇಷದ ಭಾಷಣ ಫೋಸ್ಟ್ ಮಾಡಲು ಹಣಕಾಸಿನ ಬೆಂಬಲ ಒದಗಿಸುವವರು, ಅಂತಹ ವೇದಿಕೆಗಳಿಗೆ ಸಹಾಯ ಮಾಡುವ ವ್ಯಕ್ತಿಗಳು ಕೂಡಾ ಪ್ರಾಥಮಿಕ ಅಪರಾಧಿಗಳಂತೆಯೇ ದಂಡವನ್ನು ಎದುರಿಸಬಹುದು.

ಕೋಮುಗಲಭೆಯ ಅಪಾಯವಿರುವ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಹೇಳಿಕೆ ತಡೆಗಟ್ಟುವ ಆದೇಶಗಳನ್ನು ನೀಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗುವುದು. ಈ ಆದೇಶಗಳು ಸಭೆಗಳು, ಮೆರವಣಿಗೆಗಳು, ಧ್ವನಿವರ್ಧಕಗಳ ಬಳಕೆ ಅಥವಾ ಭಯವನ್ನು ಪ್ರಚೋದಿಸುವ ಯಾವುದೇ ಕ್ರಿಯೆಯನ್ನು ನಿಷೇಧಿಸಬಹುದು. ಅಂತಹ ನಿರ್ಬಂಧಗಳನ್ನು ಆರಂಭದಲ್ಲಿ 30 ದಿನಗಳವರೆಗೆ ವಿಧಿಸಬಹುದು, ಅವಶ್ಯಕತೆಯ ಆಧಾರದ ಮೇಲೆ 60 ದಿನಗಳವರೆಗೆ ವಿಸ್ತರಿಸಬಹುದು.

ಈ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ, ಮಸೂದೆಯು ಜಾಗೃತಿ ಅಭಿಯಾನಗಳು, ಸರ್ಕಾರಿ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮಗಳಿಗೆ ಕರೆ ನೀಡಲಾಗಿದೆ. ಇದರ ಹೊಣೆಗಾರಿಕೆಯನ್ನು ಮಾನವ ಹಕ್ಕುಗಳ ಆಯೋಗ ಅಥವಾ ಮಹಿಳಾ ಆಯೋಗದಂತಹ ರಾಜ್ಯ ಆಯೋಗಗಳಿಗೆ ನಿಯೋಜಿಸಬಹುದು. ಮಸೂದೆಯಡಿ ಉತ್ತಮ ನಂಬಿಕೆಯಿಂದ ಕಾರ್ಯನಿರ್ವಹಿಸುವ ಸರ್ಕಾರಿ ಅಧಿಕಾರಿಗಳು ಕಾನೂನು ಕ್ರಮದಿಂದ ರಕ್ಷಿಸಲ್ಪಡುತ್ತಾರೆ. ರಾಜ್ಯ ಶಾಸಕಾಂಗದ ಮೇಲ್ವಿಚಾರಣೆಯೊಂದಿಗೆ ಶಾಸನವನ್ನು ಜಾರಿಗೊಳಿಸಲು ನಿಯಮಗಳು ಮತ್ತು ನಿಬಂಧನೆಗಳನ್ನು ರೂಪಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವನ್ನು ಈ ವಿಧೇಯಕ ನೀಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT