ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಲೋಕಾಯುಕ್ತ ನ್ಯಾಯಮೂರ್ತಿಗಳ ಭೇಟಿ 
ರಾಜ್ಯ

ಬೆಂಗಳೂರಿನ ಕೆರೆಗಳ ನೀರು ಕೃಷಿಗೂ ಯೋಗ್ಯವಲ್ಲ: ಲೋಕಾಯುಕ್ತ ಪರಿಶೀಲನೆ ವೇಳೆ ಬಹಿರಂಗ!

ಕೈಗಾರಿಕೆಗಳು ಮತ್ತು ಅಪಾರ್ಟ್ಮೆಂಟ್‌ಗಳು ಭೂಗತ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದಾಗಿ ವೃಷಭಾವತಿ ನದಿಗೆ ಸಂಸ್ಕರಿಸದ ಕೊಳಚೆ ನೀರನ್ನು ಬಿಡುತ್ತಿವೆ .

ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿವಿಧ ವಲಯಗಳ ಅಡಿಯಲ್ಲಿ ಬರುವ ಬೆಂಗಳೂರು ಮತ್ತು ಸುತ್ತಮುತ್ತಲಿನ 2,020 ಕೆರೆಗಳ ನೀರಿನ ಗುಣಮಟ್ಟವು 'D' ಮತ್ತು 'E' ವರ್ಗಗಳಿಗೆ ಸೇರಿದ್ದು, ಅವು ಕೃಷಿಗೆ ಸಹ ಯೋಗ್ಯವಾಗಿಲ್ಲ ಎಂಬ ವಿಷಯ ಬಹಿರಂಗವಾಗಿದೆ.

ಲೋಕಾಯುಕ್ತ ಅಧಿಕಾರಿಗಳು ಬುಧವಾರ KSPCB ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಈ ವಿಷಯ ತಿಳಿದು ಬಂದಿದೆ. ಕೈಗಾರಿಕೆಗಳು ಮತ್ತು ಅಪಾರ್ಟ್ಮೆಂಟ್‌ಗಳು ಭೂಗತ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದಾಗಿ ವೃಷಭಾವತಿ ನದಿಗೆ ಸಂಸ್ಕರಿಸದ ಕೊಳಚೆ ನೀರನ್ನು ಬಿಡುತ್ತಿವೆ ಆದರೆ ಈ ಸಂಬಂಧ ಬಿಬಿಎಂಪಿ ಮತ್ತು BWSSB ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಜಲಾನಯನ ಪ್ರದೇಶದಲ್ಲಿನ ನೀರಿನ ಗುಣಮಟ್ಟವನ್ನು 'D' ಮತ್ತು 'E' ಎಂದು ವರ್ಗೀಕರಿಸಲಾಗಿದೆ ಎಂದು ತಿಳಿಸಿದರು.

ಕಳೆದ ಹಲವಾರು ವರ್ಷಗಳಿಂದ ಪರೀಕ್ಷಾ ಫಲಿತಾಂಶಗಳು ಪ್ರತಿ ತಿಂಗಳು ಒಂದೇ ಆಗಿದ್ದರೂ, ಅದನ್ನು ಪರಿಹರಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಮತ್ತು KSPCB ಎರಡೂ ಸಂಸ್ಥೆಗಳ ವಿರುದ್ಧ ಗಾಳಿ ಮತ್ತು ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆಗಳು ಮತ್ತು ಪರಿಸರ (ರಕ್ಷಣೆ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿಲ್ಲ.

ಬಿಡಿಎ ಮತ್ತು ಬಿಬಿಎಂಪಿ ಮಿತಿಯಲ್ಲಿ ವೃಷಭಾವತಿ ನದಿಯ ಉದ್ದಕ್ಕೂ 50 ಮೀಟರ್ ಬಫರ್ ವಲಯವಿದೆ ಎಂದು ಕೆಎಸ್‌ಪಿಸಿಬಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ, ಆದರೆ ವೈಜವಾಗಿ 500 ಮೀಟರ್ ಬಫರ್ ವಲಯಕ್ಕೆ ವಿರುದ್ಧವಾಗಿ ವಿನಾಯಿತಿ ಇದ್ದ ಕಾರಣ, ಅವರು 50 ಮೀಟರ್ ಒಳಗೆ ಅಕ್ರಮ ನಿರ್ಮಾಣಗಳನ್ನು ತಡೆಯಲಿಲ್ಲ. ನ್ಯಾಯಾಲಯಗಳು ಸ್ವಯಂಪ್ರೇರಿತ ಪ್ರಕರಣಗಳನ್ನು ಕೈಗೆತ್ತಿಕೊಂಡಿರುವ ಕೆಲವು ಕೆರೆಗಳನ್ನು ಹೊರತುಪಡಿಸಿದರೆ, ಹೆಚ್ಚಿನ ಕೆರೆಗಳು ತೀವ್ರವಾಗಿ ಕಲುಷಿತಗೊಂಡಿವೆ ಮತ್ತು ಅತಿಕ್ರಮಣಗೊಂಡಿವೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರು ಆರ್‌ಆರ್ ನಗರ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಕೆಎಸ್‌ಪಿಸಿಬಿ ಅಧಿಕಾರಿಗಳೇ ಇದನ್ನು ಬಹಿರಂಗಪಡಿಸಿದರು.

ಆನೇಕಲ್ ವಲಯದಲ್ಲಿ 35 ಕೆರೆಗಳು, ಬೊಮ್ಮನಹಳ್ಳಿ ವಲಯದಲ್ಲಿ 40 ಕೆರೆಗಳು, ಬೆಂಗಳೂರು ದಕ್ಷಿಣ ವಲಯದಲ್ಲಿ 35 ಕೆರೆಗಳು, ಕೋಲಾರ, ಚಿಕ್ಕಬಳ್ಳಾಪುರ, ಮಹದೇವಪುರ ಮತ್ತು ಹೊಸಕೋಟೆ ಒಳಗೊಂಡ ಬೆಂಗಳೂರು ಪೂರ್ವ ವಲಯದಲ್ಲಿ 1,772 ಕೆರೆಗಳು, ಬೆಂಗಳೂರು ನಗರ ವಲಯದಲ್ಲಿ 24 ಕೆರೆಗಳು, ಬೆಂಗಳೂರು ನಗರ ಪೂರ್ವ ವಲಯದಲ್ಲಿ 8 ಕೆರೆಗಳು, ಸರ್ಜಾಪುರ ವಲಯದಲ್ಲಿ 16 ಕೆರೆಗಳು, ಮಹದೇವಪುರ ವಲಯದಲ್ಲಿ 40 ಕೆರೆಗಳು, ಹೊಸಕೋಟೆ ಮತ್ತು ದೇವನಹಳ್ಳಿ ವಲಯದಲ್ಲಿ 12 ಕೆರೆಗಳು, ಬೆಂಗಳೂರು ನಗರ ಪಶ್ಚಿಮ ವಲಯದಲ್ಲಿ 2 ಕೆರೆಗಳು, ಬೆಂಗಳೂರು ನಗರ ದಕ್ಷಿಣ ವಲಯದಲ್ಲಿ 6 ಕೆರೆಗಳು ಮತ್ತು ಬೆಂಗಳೂರು ಉತ್ತರ ವಲಯದಲ್ಲಿ 30 ಕೆರೆಗಳು ಈ ‘ಡಿ’ ಮತ್ತು ‘ಇ’ ವರ್ಗಗಳಲ್ಲಿ ನೀರಿನ ಗುಣಮಟ್ಟ ಹೊಂದಿರುವ ಜಲಮೂಲಗಳಲ್ಲಿ ಸೇರಿವೆ.

ಕೆಎಸ್‌ಪಿಸಿಬಿ ಅಧಿಕಾರಿಗಳು ತಮ್ಮ ಕಾನೂನುಬದ್ಧ ಆದಾಯವನ್ನು ಮೀರಿ ಯುಪಿಐ ವಹಿವಾಟುಗಳನ್ನು ಮಾಡಿದ್ದಾರೆ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಅವರ ಹಣಕಾಸು ಹೇಳಿಕೆಗಳನ್ನು ನ್ಯಾಯಮೂರ್ತಿ ವೀರಪ್ಪ ಅವರು ಕೋರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT