ಸಂಗ್ರಹ ಚಿತ್ರ  
ರಾಜ್ಯ

ಹಕ್ಕಿ ಜ್ವರ ಭೀತಿ: ಚಿಕನ್-ಮೊಟ್ಟೆಯಿಂದ ದೂರ ಉಳಿದ ಬೆಂಗಳೂರಿಗರು; ಭಯಪಡುವ ಅಗತ್ಯವಿಲ್ಲ 'ತಿನ್ನಿ' ಎಂದ ಅಧಿಕಾರಿಗಳು!

ಆಂಧ್ರಪ್ರದೇಶದಲ್ಲಿ ಪ್ರಕರಣಗಳು ವರದಿಯಾದ ನಂತರ ಕೆಲವು ಗ್ರಾಹಕರು ಕೋಳಿಗೆ ಪರ್ಯಾಯ ಆಯ್ಕೆ ಮಾಡಲು ಪ್ರಾರಂಭಿಸಿದರು, ಹೀಗಾಗಿ ಬೆಲೆಗಳ ಮೇಲಿನ ಪರಿಣಾಮ ಬೀರಿದೆ

ಬೆಂಗಳೂರು: ರಾಯಚೂರು, ಚಿಕ್ಕಬಳ್ಳಾಪುರ ಮತ್ತು ಬಳ್ಳಾರಿಯ ಕೋಳಿಗಳಲ್ಲಿ ಹಕ್ಕಿ ಜ್ವರದ ಪ್ರಕರಣಗಳು ವರದಿಯಾಗಿರುವುದರಿಂದ, ಬೆಂಗಳೂರಿನಾದ್ಯಂತ ಕೋಳಿ ಮಾರಾಟ ಮತ್ತು ಬೆಲೆಗಳು ಕುಸಿದಿವೆ.

ಆಂಧ್ರಪ್ರದೇಶದಲ್ಲಿ ಪ್ರಕರಣಗಳು ವರದಿಯಾದ ನಂತರ ಕೆಲವು ಗ್ರಾಹಕರು ಕೋಳಿಗೆ ಪರ್ಯಾಯ ಆಯ್ಕೆ ಮಾಡಲು ಪ್ರಾರಂಭಿಸಿದರು, ಹೀಗಾಗಿ ಬೆಲೆಗಳ ಮೇಲಿನ ಪರಿಣಾಮ ಬೀರಿದೆ. ಪ್ರತಿ ಕೆಜಿಗೆ ಸುಮಾರು 25-30 ರೂ.ಗಳಷ್ಟು ಇಳಿಕೆಯಾಗಿದೆ. ಕರ್ನಾಟಕದ ಜಿಲ್ಲೆಗಳಲ್ಲಿ ಪ್ರಕರಣಗಳ ವರದಿಗಳ ನಂತರ ಬೆಂಗಳೂರಿನಲ್ಲಿ ಕೋಳಿ ಮಾರಾಟದಲ್ಲಿ ಭಾರಿ ಕುಸಿತ ಉಂಟಾಗಿದೆ.

ರಂಜಾನ್ ಇದೀಗ ಪ್ರಾರಂಭವಾಗಿರುವುದರಿಂದ, ಇದು ಸಾಮಾನ್ಯವಾಗಿ ಗರಿಷ್ಠ ಮಾರಾಟದ ಅವಧಿಯಾಗಿರುವುದರಿಂದ ಹೆಚ್ಚಿನ ನಷ್ಟವಾಗುವ ಸಾಧ್ಯತೆಯಿದೆ ಎಂದು ಮಾರಾಟಗಾರರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಬೇಸಿಗೆಯಲ್ಲಿ ಕೋಳಿ ತಿನ್ನುವುದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬ ಸಾಮಾನ್ಯ ನಂಬಿಕೆ ಬೆಂಗಳೂರಿನ ಮಾಂಸ ಮಾರುಕಟ್ಟೆಗಳಲ್ಲಿ ಬೇಡಿಕೆ ಕುಸಿತಕ್ಕೆ ಕಾರಣವಾಗಿದೆ ಎಂದು ಅನೇಕ ಮಾರಾಟಗಾರರು ತಿಳಿಸಿದ್ದಾರೆ.

ಆದರೆ ಪ್ರತಿ ಬೇಸಿಗೆಯಲ್ಲಿ ಈ ರೀತಿ ಬೆಲೆ ಕುಸಿತ ಆಗುವುದಿಲ್ಲ. ಈ ವರ್ಷ, ಕೋಳಿ ಬೆಲೆ ಪ್ರತಿ ಕೆಜಿಗೆ 30 ರೂ.ಗಳವರೆಗೆ ಕುಸಿದಿವೆ. ಪ್ರಸ್ತುತ, ಕೆಲವು ಸ್ಥಳಗಳಲ್ಲಿ ಕೋಳಿ ಮಾಂಸವನ್ನು ಕೆಜಿಗೆ 140-150 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ, ಆದರೆ ಜೆಸಿ ನಗರ, ಶಿವಾಜಿನಗರ, ಫ್ರೇಜರ್ ಟೌನ್, ಕಾಕ್ಸ್ ಟೌನ್, ಆರ್‌ಟಿ ನಗರ ಮುಂತಾದ ಪ್ರದೇಶಗಳಲ್ಲಿ ಕೋಳಿ ಅಂಗಡಿಗಳು ಹೆಚ್ಚಾಗಿದ್ದು, ಮಾರಾಟವು ಕೆಜಿಗೆ 70-80 ರೂ.ಗಳಿಗೆ ಇಳಿದಿದೆ ಎಂದು ಮಾಹಿತಿ ನೀಡಿದ್ದಾರೆ.

ಹಕ್ಕಿ ಜ್ವರ ಹರಡಿದ ನಂತರ ರೈತರು ಮತ್ತು ಕೋಳಿ ಕಂಪನಿಗಳು ಗಮನಾರ್ಹ ನಷ್ಟ ಅನುಭವಿಸಿವೆ ಎಂದು ಕೆಆರ್ ಮಾರುಕಟ್ಟೆಯ ಶೇರ್ಶಾ ಎಂ, ಹೇಳಿದರು. ಹಕ್ಕಿ ಜ್ವರದ ಬಗ್ಗೆಗಿನ ಅನಗತ್ಯ ಭಯವು ಮತ್ತಷ್ಟು ನಷ್ಟಕ್ಕೆ ಕಾರಣವಾಗಿದ. ವಿಶೇಷವಾಗಿ ರಂಜಾನ್ ಸಮಯದಲ್ಲಿ, ಗರಿಷ್ಠ ವ್ಯಾಪಾರ ಅವಧಿ ಎಂದು ಪರಿಗಣಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ಕೋಳಿ ರೈತರು ಮತ್ತು ಬ್ರಾಯ್ಲರ್‌ಗಳ ಸಂಘದ ಪ್ರತಿನಿಧಿಗಳು, ಕೋಳಿ ಸಾಕಣೆದಾರರ ಸಮನ್ವಯ ಸಂಘವು ಸರ್ಕಾರದೊಂದಿಗೆ ಗ್ರಾಹಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು. ಇಲ್ಲಿಯವರೆಗೆ ಯಾವುದೇ ಅಧಿಕೃತ ಸಲಹೆ ಇಲ್ಲದಿದ್ದರೂ, ರಾಜ್ಯ ಸರ್ಕಾರವು ಅಂತರ-ರಾಜ್ಯ ಕೋಳಿ ಸಾಗಣೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಇದರ ಜೊತೆಗೆ ಪಶುಸಂಗೋಪನಾ ಇಲಾಖೆಯು ಇತ್ತೀಚೆಗೆ ಭಯಪಡಲು ಯಾವುದೇ ಕಾರಣವಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೋಳಿ ಅಥವಾ ಮೊಟ್ಟೆಗಳನ್ನು ಸುರಕ್ಷಿತವಾಗಿ ಬೇಯಿಸಿದರೆ ಅವುಗಳನ್ನು ಸೇವಿಸುವುದರಿಂದ ಯಾವುದೇ ಹಾನಿ ಇಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 70 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನದಲ್ಲಿ ಕುದಿಸುವುದು ಅಥವಾ ಹುರಿಯುವುದರಿಂದ ಆಹಾರ ಸುರಕ್ಷಿತವಾಗಿರುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT