ಸಚಿವ ಮಧು ಬಂಗಾರಪ್ಪ 
ರಾಜ್ಯ

ಭಾಷಾ ನೀತಿ ಕುರಿತು ಕನ್ನಡಕ್ಕೆ ಆದ್ಯತೆ ನೀಡಿಯೇ ತೀರ್ಮಾನ: ಸಚಿವ ಮಧು ಬಂಗಾರಪ್

ಭಾಷಾ ನೀತಿ ಕುರಿತಂತೆ ಕನ್ನಡಕ್ಕೆ ಆದ್ಯತೆ ನೀಡಿಯೇ ತೀರ್ಮಾನ ಕೈಗೊಳ್ಳುತ್ತೇವೆ. ಬೇರೆ ಭಾಷೆಗೆ ಅಗೌರವ ಕೊಡುವುದಲ್ಲ. ಎಲ್ಲ ಭಾಷೆಯನ್ನು ಕಲಿಯಬೇಕು. ಆದರೆ ಕನ್ನಡವನ್ನು ಕಡ್ಡಾಯ ಮಾಡಲೇಬೇಕು.

ಶಿವಮೊಗ್ಗ: ಭಾಷಾ ನೀತಿ ಕುರಿತು ಕನ್ನಡಕ್ಕೆ ಆದ್ಯತೆ ನೀಡಿಯೇ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಭಾನುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾಷಾ ನೀತಿ ಕುರಿತಂತೆ ಕನ್ನಡಕ್ಕೆ ಆದ್ಯತೆ ನೀಡಿಯೇ ತೀರ್ಮಾನ ಕೈಗೊಳ್ಳುತ್ತೇವೆ. ಬೇರೆ ಭಾಷೆಗೆ ಅಗೌರವ ಕೊಡುವುದಲ್ಲ. ಎಲ್ಲ ಭಾಷೆಯನ್ನು ಕಲಿಯಬೇಕು. ಆದರೆ ಕನ್ನಡವನ್ನು ಕಡ್ಡಾಯ ಮಾಡಲೇಬೇಕು ಎಂದು ಹೇಳಿದರು.

ಬೇರೆ ರಾಜ್ಯದ ಮಕ್ಕಳು ಎಂಟನೇ ತರಗತಿಗೆ ವರ್ಗಾವಣೆ ಆಗಿ ಇಲ್ಲಿಗೆ ಬರುತ್ತಾರೆ. ಅವರ ಜೀವನದಲ್ಲೇ ಕನ್ನಡ ಕಲಿತಿರುವುದಿಲ್ಲ. ಅವರಿಗೆ ಒಂದೇ ಬಾರಿ ಕನ್ನಡ ಕಲಿಯಿರಿ ಎಂದರೆ ಆಗುವುದಿಲ್ಲ. ಅವರಿಗೆ ಕನ್ನಡ ಕಲಿಸಬೇಕು. ಇದು ಸೂಕ್ಷ್ಮ ವಿಚಾರ. ಪಾಲಿಸಿ ಮಾಡುವಾಗ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಮಾಡುತ್ತೇವೆ. ಎಸ್‌ಇಪಿ ಬರುವುದರಿಂದ ನೋಡಿಕೊಂಡು ಮಾಡುತ್ತೇವೆ ಎಂದು ತಿಳಿಸಿದರು,

ಎನ್​ಇ‌ಪಿ ಹಾಗೂ ಎಸ್​ಇಪಿ ಬಗ್ಗೆ ಗೂಂದಲವಿದೆ. ನಾವು ಎಸ್​ಇಪಿ ಅಂತ ಕೇಳುತ್ತಿದ್ದೇವೆ. ಈಗ ಮೊದಲಿನಂತೆ ಕಲಿಕೆ ಇರಲಿದೆ. ಬೇರೆ ಭಾಷೆ ಹೇರಿಕೆಯ ಕುರಿತು ನಾವು ಹುಷಾರಾಗಿರಬೇಕಾಗುತ್ತದೆ. ಕನ್ನಡವನ್ನು ಬಡವಾಗಲು ಈಗ ಅಲ್ಲ ಮುಂದೂ ಸಹ ಬಿಡುವುದಿಲ್ಲ. ಇದೆಲ್ಲಾ ತಾಂತ್ರಿಕವಾಗಿ ಇರುತ್ತದೆ ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026, RCB vs SRH: ಕಿಂಗ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್; ಉದ್ಘಾಟನಾ ಪಂದ್ಯ ಗೆದ್ದು ಬೀಗಿದ ಬೆಂಗಳೂರು

ಕುವೈತ್, ದುಬೈ ಮೇಲೆ ಇರಾನ್ ಕ್ಷಿಪಣಿ ದಾಳಿ; ಗಲ್ಫ್ ರಾಷ್ಟ್ರಗಳಿಗೆ ಅಧ್ಯಕ್ಷರ ಎಚ್ಚರಿಕೆ

ಸೌದಿ ದೊರೆ ಜತೆ ಪ್ರಧಾನಿ ಮೋದಿ ಮಾತುಕತೆ; ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಚರ್ಚೆ

IPL 2026: ಚೊಚ್ಚಲ ಪಂದ್ಯದಲ್ಲೇ RCB ಪರ 3 ವಿಕೆಟ್ ಕಬಳಿಸಿದ ಜಾಕೋಬ್ ಡಫಿ!

ಉತ್ತರ ಪ್ರದೇಶ: ಐಸ್ ಕ್ರೀಮ್ ಮಾರಾಟಗಾರನ ಶಿರಚ್ಛೇದ; ತಲೆಯನ್ನು ಮನೆಗೆ ಕೊಂಡೊಯ್ದು ಅಡುಗೆ!

SCROLL FOR NEXT