ರಶ್ಮಿಕಾ ಮಂದಣ್ಣ - ರವಿ ಗಣಿಗ 
ರಾಜ್ಯ

ಫಿಲಂ ಫೆಸ್ಟಿವಲ್‌ಗೆ ಒಲ್ಲೆ ಎಂದ ರಶ್ಮಿಕಾ ಮಂದಣ್ಣ: ಸಾರ್ವಜನಿಕವಾಗಿ ಸಾಕ್ಷ್ಯ ಬಿಡುಗಡೆ ಮಾಡುತ್ತೇನೆ- ರವಿ ಗಣಿಗ

ಆಮಂತ್ರಣವಿದ್ದರೂ ರಶ್ಮಿಕಾ ಚಿತ್ರೋತ್ಸವಕ್ಕೆ ಹಾಜರಾಗಿಲ್ಲ. ಹೀಗಾಗಿ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದ್ದರು.

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ತಮ್ಮ ಸರ್ಕಾರದಿಂದ ರಶ್ಮಿಕಾ ಮಂದಣ್ಣ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಅವರು ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರವಿ ಗಣಿಗ ಆರೋಪಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ರವಿ ಗಣಿಗ, ರಶ್ಮಿಕಾ ಮಂದಣ್ಣ ಅವರ ತಂಡವು ನಮ್ಮ ಆಹ್ವಾನವನ್ನು ತಿರಸ್ಕರಿಸಿರುವುದಕ್ಕೆ ನಮ್ಮ ಬಳಿ ಪುರಾವೆ ಇದೆ ಎಂದಿದ್ದಾರೆ.

'ಇದು ರಶ್ಮಿಕಾ ಅವರ ಹೇಳಿಕೆಯಲ್ಲ, ಬದಲಿಗೆ ರಶ್ಮಿಕಾ ಅವರ ತಂಡದ ಹೇಳಿಕೆ. ನಾವು ರಶ್ಮಿಕಾ ಅವರನ್ನು ಬೆಂಗಳೂರು ಚಲನಚಿತ್ರೋತ್ಸವಕ್ಕೆ ಕರೆದಿದ್ದೆವು. ಆದರೆ, ಅವರು ನಮ್ಮ ಆಹ್ವಾನವನ್ನು ತಿರಸ್ಕರಿಸಿದರು. ಈ ಸಂಬಂಧ ನಮ್ಮ ಬಳಿಯಿರುವ ದಾಖಲೆಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುತ್ತೇವೆ" ಎಂದು ಅವರು ಹೇಳಿದರು.

ಆಮಂತ್ರಣವಿದ್ದರೂ ರಶ್ಮಿಕಾ ಚಿತ್ರೋತ್ಸವಕ್ಕೆ ಹಾಜರಾಗಿಲ್ಲ. ಹೀಗಾಗಿ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದ್ದರು.

ತಮ್ಮ ಟೀಕೆಗಳಿಗೆ ಮತ್ತಷ್ಟು ಸ್ಪಷ್ಟನೆ ನೀಡಿದ ಗಣಿಗ, ನನ್ನ ಹೇಳಿಕೆ 'ಗೂಂಡಾಗಿರಿ' ಅಥವಾ 'ರೌಡಿಸಂ' ಎಂದು ಅರ್ಥವಲ್ಲ. ನಾನು ಕನ್ನಡಿಗನಾಗಿ ನಾನು ನೀಡಿದ ಹೇಳಿಕೆಗೆ ಬದ್ಧನಾಗಿರುತ್ತೇನೆ. ನನ್ನ ತಾಯಿನಾಡು, ನನ್ನ ಭಾಷೆ ಮತ್ತು ನನ್ನ ಜನರೊಂದಿಗೆ ನಾನು ನಿಂತಿರುವುದಕ್ಕೆ ನನಗೆ ಹೆಮ್ಮೆ ಇದೆ... ರಶ್ಮಿಕಾ ಮಂದಣ್ಣ ಬಗ್ಗೆ ನಮಗೆ ಹೆಮ್ಮೆ ಇದೆ. ಆಕೆ ಕನ್ನಡತಿ. ನಾವು ಆಕೆಯನ್ನು ಕರೆದಿದ್ದೇವೆ. ಆದರೆ, ಅವರು ಕನ್ನಡಿಗರಿಗೆ ಸಮಯವಿಲ್ಲ ಎಂದು ಹೇಳಿದರು. ಇದು ಕನ್ನಡಿಗರನ್ನು ನಡೆಸಿಕೊಳ್ಳುವ ಮಾರ್ಗವೇ? ಎಂದು ಪ್ರಶ್ನಿಸಿದ್ದಾರೆ.

'ಕರ್ನಾಟಕವೇ ನಿಮ್ಮ ತಾಯ್ನಾಡು, ಕರ್ನಾಟಕವೇ ನಿಮ್ಮ ವೃತ್ತಿಜೀವನದ ತಳಹದಿ, ನಿಮ್ಮ ಮಾತೃಭೂಮಿಯನ್ನು ಗೌರವಿಸಬೇಕು ಎಂದು ನಾವು ಅವರಿಗೆ ಹೇಳಿದ್ದೇವೆ. ಈಗ ಅವರು ಬಾಲಿವುಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಆಕೆ ತನ್ನ ಬೇರುಗಳನ್ನು ಮರೆಯಬಾರದು. ನನಗೆ ಕರ್ನಾಟಕದ ಬಗ್ಗೆ ಹೆಮ್ಮೆ ಇದೆ. ರಾಜೀವ್ ಚಂದ್ರಶೇಖರ್ ಅವರಿಂದ ನಾನು ಪಾಠ ಕಲಿಯುವ ಅಗತ್ಯವಿಲ್ಲ. ನಾವು ಆಕೆಗೆ ಪಾಠ ಕಲಿಸಬೇಕು ಎಂದು ಹೇಳಿದ್ದೇನೆ ಹೊರತು 'ಗೂಂಡಾಗಿರಿ' ಅಥವಾ ರೌಡಿಸಂ ಮಾಡಲು ಹೇಳಿಲ್ಲ ಎಂದಿದ್ದಾರೆ.

ಸಚಿವರ ಹೇಳಿಕೆಗೆ ರಶ್ಮಿಕಾ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಂಡ್ಯದ ಆದಿಚುಂಚನಗಿರಿ ಮಠದಲ್ಲಿ 9 ಸಂಕಲ್ಪಗಳನ್ನು ಕೈಗೊಳ್ಳುವಂತೆ ಪ್ರಧಾನಿ ಮೋದಿ ಜನತೆಗೆ ಕರೆ-Video

19ನೇ ವಯಸ್ಸಿಗೆ 180 ಅಪ್ರಾಪ್ತ ಬಾಲಕಿಯರ ಜೊತೆ ಸೆಕ್ಸ್; 350ಕ್ಕೂ ಹೆಚ್ಚು ಅಶ್ಲೀಲ ವೀಡಿಯೊ Viral, ತನ್ವೀರ್ ಅಹ್ಮದ್ ಯಾರು?

'TCSನಲ್ಲಿ ಲವ್ ಜಿಹಾದ್, ಲೈಂಗಿಕ ಕಿರುಕುಳ' ಪ್ರಕರಣ: HR ನಿದಾ ಖಾನ್ 'ಮಾಸ್ಟರ್ ಮೈಂಡ್'; ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ!

ತ್ರಿವರ್ಣ ಧ್ವಜ ಬಣ್ಣದ ರಿಬ್ಬನ್ ಕತ್ತರಿಸಲು ನಿರಾಕರಿಸಿದ Omar Abdullah, ಗೌರವಯುತವಾಗಿ ಬದಲು! Video

Sri Guru Bhairavaikya Mandir: ಆದಿಚುಂಚನಗಿರಿಯಲ್ಲಿ ಶ್ರೀ ಭೈರವೈಕ್ಯ ಮಂದಿರ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ, ಏನಿದರ ವಿಶೇಷತೆ?-Video

SCROLL FOR NEXT