ಮೃತ ಯುವಕರು 
ರಾಜ್ಯ

ಕಲಬುರಗಿ: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ; ನಾಲ್ವರು ಯುವಕರು ಸಾವು

ಇಂದು ಮಧ್ಯಾಹ್ನ ಈ ಅಪಘಾತ ಸಂಭವಿಸಿದ್ದು, ಸೇಡಂ ತಾಲ್ಲೂಕಿನ ಹಾಬಾಳ ಗ್ರಾಮದ ನಿವಾಸಿಗಳಾದ ಸಿದ್ದು (25), ಸುರೇಶ (20), ಮಲ್ಲಿಕಾರ್ಜುನ (20), ಪ್ರಕಾಶ್‌ (19) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಕಲಬುರಗಿ: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಆಬಾಳ(ಟಿ) ಗ್ರಾಮದ ಬಳಿ ಶುಕ್ರವಾರ ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ.

ಇಂದು ಮಧ್ಯಾಹ್ನ ಈ ಅಪಘಾತ ಸಂಭವಿಸಿದ್ದು, ಸೇಡಂ ತಾಲ್ಲೂಕಿನ ಹಾಬಾಳ ಗ್ರಾಮದ ನಿವಾಸಿಗಳಾದ ಸಿದ್ದು (25), ಸುರೇಶ (20), ಮಲ್ಲಿಕಾರ್ಜುನ (20), ಪ್ರಕಾಶ್‌ (19) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಸೇಡಂನಿಂದ ಆಬಾಳ್ ಕಡೆ ಹೊರಟಿದ್ದ ಒಂದು ಬೈಕ್​​ಗೆ ಎದುರಿನಿಂದ ಬರುತ್ತಿದ್ದ ಬಂದ ಮತ್ತೊಂದು ಬೈಕ್​​ ಡಿಕ್ಕಿ ಹೊಡೆದಿವೆ.

ಪಲ್ಸರ್ ಮತ್ತು ಸ್ಪ್ಲೈಂಡರ್ ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮಲ್ಲಿಕಾರ್ಜುನ ಮತ್ತು ಸಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುರೇಶ ಹಾಗೂ ಪ್ರಕಾಶ್ ಇಬ್ಬರು ಆಸ್ಪತ್ರೆಗೆ ರವಾನಿಸಿದ ವೇಳೆ ಮೃತಪಟ್ಟಿದ್ದಾರೆ ಎಂದು ಸೇಡಂ ಪೊಲೀಸರು ತಿಳಿಸಿದ್ದಾರೆ.

ಸದ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸೇಡಂ ಠಾಣೆಯ ಪೊಲೀಸರು ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ- ಸ್ವಾತಂತ್ರ್ಯ ದಿನದ ಹಿನ್ನೆಲೆ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಮುರ್ಮು ಮಾತು

ಬೆಂಗಳೂರು: ಟೆಕ್ಕಿ ಪತ್ನಿ ಹತ್ಯೆಗೈದು ತಾನೂ ನೇಣಿಗೆ ಶರಣಾದ ಇಂಜಿನಿಯರ್; ತಾಯಿಗೆ ಕಳಿಸಿದ್ದ ವಾಯ್ಸ್ ಮೆಸೇಜ್‌ನಲ್ಲಿ ಸ್ಫೋಟಕ ಕಾರಣ ಬಹಿರಂಗ!

ರಾಜ್ಯ ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್: ವೇತನ ಹಿಂಬಾಕಿ ಬಿಡುಗಡೆ

ಸಚಿವ ಜಮೀರ್ ಅಹ್ಮದ್ ಧ್ವಜಾರೋಹಣ ಮಾಡದಷ್ಟು ದೊಡ್ಡವರೇ? ವಿಧಾನಸಭೆಯಲ್ಲಿ ಬಿಜೆಪಿ ಪ್ರತಿಭಟನೆ! ಸಚಿವ ಸ್ಥಾನದಿಂದ ವಜಾಕ್ಕೆ ಒತ್ತಾಯ

ಸರ್ಕಾರಿ ಜಾಗದಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯ ಮಸೂದೆ: RSSಗೆ ಕಡಿವಾಣ? ಕಾಂಗ್ರೆಸ್ - ಬಿಜೆಪಿ ನಡುವೆ ವಾಕ್ಸಮರ!