ಆತ್ಮಹತ್ಯೆ ಮಾಡಿಕೊಂಡ ಕೇಶವ ಕಮಡೊಳಿ 
ರಾಜ್ಯ

ಬೆಳಗಾವಿ: ಡ್ಯೂಟಿ ಬದಲಿಸದಿದ್ದಕ್ಕೆ ಬೇಸರ; ಬಸ್‌ನಲ್ಲೇ KSRTC ಮೆಕ್ಯಾನಿಕ್ ಆತ್ಮಹತ್ಯೆ

ಬೆನ್ನು ನೋವಿದ್ದರೂ ಪಂಚರ್ ತೆಗೆಯುವ ಕೆಲಸವನ್ನು ಅಧಿಕಾರಿಗಳು ಕೊಟ್ಟಿದ್ದರು, ಕೆಲಸದ ಒತ್ತಡ ತಡೆದಕೊಳ್ಳಲಾಗದೇ ಕೇಶವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಬೆಳಗಾವಿ: ಡ್ಯೂಟಿ ಬದಲಿಸಲಿಲ್ಲ ಎಂದು ಬೇಸರಗೊಂಡು ಕೆಎಸ್‌ಆರ್‌ಟಿಸಿ ಮೆಕ್ಯಾನಿಕ್ ಬಸ್‌ನಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಬೆಳಗಾವಿಯ ಡಿಪೋ 1 ರಲ್ಲಿ ಘಟನೆ ನಡೆದಿದೆ. ‌

ಮೃತ ನೌಕರನನ್ನು ಕೇಶವ ಕಮಡೊಳಿ (57) ಎಂದು ಗುರುತಿಸಲಾಗಿದೆ. ಬಸ್‌ಗಳ ಪಂಚರ್‌ ತೆಗೆಯುವ ಕೆಲಸ‌ ಮಾಡುತ್ತಿದ್ದರು. ಬೆನ್ನು ನೋವಿದ್ದರೂ ಪಂಚರ್ ತೆಗೆಯುವ ಕೆಲಸವನ್ನು ಅಧಿಕಾರಿಗಳು ಕೊಟ್ಟಿದ್ದರು, ಕೆಲಸದ ಒತ್ತಡ ತಡೆದಕೊಳ್ಳಲಾಗದೇ ಕೇಶವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸರು ಭೇಟಿ ‌ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಪೋ ಮ್ಯಾನೇಜರ್ ಲಿಂಗರಾಜ್ ಲಾಠಿ, ಸಹಾಯಕ ಕಾರ್ಯ ಅಧೀಕ್ಷಕ ಅನಿಲ್ ಬಾಂದೇಕರ್‌ಗೆ ಕುಟುಂಬಸ್ಥರು ಮನವಿ ಮಾಡಿದ್ದರು ಎನ್ನಲಾಗಿದೆ.

ಕೆಲಸದ ಒತ್ತಡ ತಡೆದಕೊಳ್ಳಲಾಗದೇ ಕೇಶವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಅಧಿಕಾರಿಗಳ ವಿರುದ್ಧ ಮೃತ ಕೇಶವ್ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಳ್ಳಾರಿ ಬ್ಯಾನರ್ ಗಲಭೆ: ಶಾಸಕ ನಾರಾ ಭರತ್ ರೆಡ್ಡಿ ಸೇರಿ ಹಲವರ ವಿರುದ್ಧ FIR

ಬಳ್ಳಾರಿ ಗಲಾಟೆ: ಆರು ಸದಸ್ಯರ ಸತ್ಯಶೋಧನಾ ಸಮಿತಿ ರಚಿಸಿದ ಕಾಂಗ್ರೆಸ್

ನೈಸ್‌ ಯೋಜನೆ: ಡಿ.ಕೆ ಶಿವಕುಮಾರ್ ಆಕ್ಷೇಪ ಸ್ವಾಗತಾರ್ಹ; ಕ್ರಮ ಕೈಗೊಳ್ಳುತ್ತಾರೆಯೇ ಕಾದು ನೋಡೋಣ- ದೇವೇಗೌಡ

ಅಕ್ರಮ ಬಾಂಗ್ಲಾ ವಲಸಿಗರು ಬೆಂಗಳೂರಿಗೆ ಹೇಗೆ ಬಂದರು? ಮೋದಿ- ಅಮಿತ್ ಶಾ ಏನು ಮಾಡುತ್ತಿದ್ದಾರೆ? ರಾಮಲಿಂಗಾ ರೆಡ್ಡಿ ಪ್ರಶ್ನೆ

'Grok ರಚಿಸಿದ ಅಸಭ್ಯ, ಕಾನೂನುಬಾಹಿರ ವಿಷಯಗಳ ತೆಗೆದುಹಾಕಿ': Elon Musk ಎಕ್ಸ್‌ಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ!

SCROLL FOR NEXT