ರಾಜ್ಯ

ಉಡುಪಿ ಶ್ರೀಕೃಷ್ಣ ರಥೋತ್ಸವದಲ್ಲಿ ನವದಂಪತಿ Tejasvi Surya- Shivashree ಭಾಗಿ; ಸಂಗೀತ ಸೇವೆ...

ಶೃಂಗೇರಿ, ಉಡುಪಿ, ಹೊರನಾಡು ದೇವಾಲಯಗಳನ್ನು ಸಂದರ್ಶಿಸಿರುವ ದಂಪತಿ, ದೇವರ ಸನ್ನಿಧಿಯಲ್ಲಿ ಕೀರ್ತನೆ, ಸಂಗೀತ ಸೇವೆ ಸಲ್ಲಿಸಿದ್ದಾರೆ.

ಉಡುಪಿ: ಇತ್ತೀಚಿಗಷ್ಟೇ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಸಂಸದ ತೇಜಸ್ವಿ ಸೂರ್ಯ (Tejasvi Surya) ದಂಪತಿ ರಾಜ್ಯದ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.

ಶೃಂಗೇರಿ, ಉಡುಪಿ, ಹೊರನಾಡು ದೇವಾಲಯಗಳನ್ನು ಸಂದರ್ಶಿಸಿರುವ ದಂಪತಿ, ದೇವರ ಸನ್ನಿಧಿಯಲ್ಲಿ ಕೀರ್ತನೆ, ಸಂಗೀತ ಸೇವೆ ಸಲ್ಲಿಸಿದ್ದಾರೆ.

ಉಡುಪಿಯ (Udupi) ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ದಂಪತಿ. ಸುಗುಣೇಂದ್ರ ತೀರ್ಥ ಸ್ವಾಮೀಜಿಗಳ (Sugunendra Theertha Swamiji) ಆಶೀರ್ವಾದ ಪಡೆದಿದ್ದಾರೆ.

ಎಲ್ಲಾ ನವದಂಪತಿಗಳು ಕೃಷ್ಣನ ದರ್ಶನ ಮಾಡಬೇಕು. ಶ್ರೀಕೃಷ್ಣ ಕಲ್ಯಾಣದ ದೇವರು. ಇಂದು ಮದುವೆಯಾದ ತಕ್ಷಣ ಪಿಕ್‌ನಿಕ್‌ ಹೋಗ್ತಾರೆ. ಆದರೆ ತೇಜಸ್ವಿ ಸೂರ್ಯ ಅವರು ದೇವಾಲಯಗಳಿಗೆ ಭೇಟಿ ಕೊಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಇಬ್ಬರೂ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುವ ದಂಪತಿಯಾಗಿದ್ದಾರೆ. ಇಡಿ ದೇಶಕ್ಕೆ ಇವರ ಸೇವೆ, ಸ್ಪೂರ್ತಿ ಸಿಗುವಂತಾಗಲಿ ಎಂದು ಸುಗುಣೇಂದ್ರ ತೀರ್ಥ ಶ್ರೀಗಳು ಹಾರೈಸಿದ್ದಾರೆ.

ಕೃಷ್ಣನ ಸನ್ನಿಧಿಯಲ್ಲಿ ಆಡಿಸಿದಳೆಶೋದೆ ಜಗದೋದ್ಧಾರನ ಕೀರ್ತನೆ ಹಾಡಿದ ಶಿವಶ್ರೀ

ರಥಬೀದಿಯಲ್ಲಿ ನಡೆದ ನಿತ್ಯೋತ್ಸವದಲ್ಲಿ ಪಾಲ್ಗೊಂಡ ನವದಂಪತಿಯ ಕುಟುಂಬಗಳು, ಕೃಷ್ಣ ದೇವರ ಗರ್ಭಗುಡಿಯಲ್ಲಿ ನಡೆಯುವ ಮಹಾಪೂಜೆ ಮತ್ತು ಶಯನ ಪೂಜೆಯಲ್ಲಿ ಭಾಗಿಯಾಯ್ತು. ಈ ಸಂದರ್ಭದಲ್ಲಿ ಶಿವಶ್ರೀ ತೇಜಸ್ವಿ ದೇವರ ಮುಂದೆ ಸಂಗೀತ ಸೇವೆಯನ್ನು ಸಲ್ಲಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!