ಪುನೀತ್ ರಾಜ್ ಕುಮಾರ್ ಅವರ ಅತ್ತೆ ನಾಗಮ್ಮ 
ರಾಜ್ಯ

Video: 'ಒಮ್ಮೆ ಬಂದು ನೋಡ್ಕೊಂಡು ಹೋಗು ಕಂದಾ'; ಸೋದರತ್ತೆ ನಾಗಮ್ಮಗೆ ಇನ್ನೂ ತಿಳಿದಿಲ್ಲ Puneet Rajkumar ಸಾವಿನ ವಿಚಾರ

ಅಚ್ಚರಿಯಾದರೂ ಇದು ಸತ್ಯ.. ಪುನೀತ್ ರಾಜ್​ಕುಮಾರ್ ಇಲ್ಲ ಎಂಬ ಸುದ್ದಿ ಇಡೀ ಜಗತ್ತಿಗೆ ಗೊತ್ತಿದೆ. ಆದರೆ, ಪುನೀತ್ ಅವರ ಸೋದರತ್ತೆ ನಾಗಮ್ಮನಿಗೆ ಮಾತ್ರ ಈ ವಿಚಾರ ಇನ್ನೂ ತಿಳಿದಿಲ್ಲ.

ಚಾಮರಾಜನಗರ: ಕನ್ನಡದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ವರ್ಷಗಳೇ ಕಳೆದರೂ ಅವರ ಸೋದರತ್ತೆ ನಾಗಮ್ಮ ಅವರಿಗೆ ಮಾತ್ರ ಅಪ್ಪು ಸಾವಿನ ವಿಚಾರ ಇನ್ನೂ ತಿಳಿದಿಲ್ಲ..

ಅಚ್ಚರಿಯಾದರೂ ಇದು ಸತ್ಯ.. ಪುನೀತ್ ರಾಜ್​ಕುಮಾರ್ ಇಲ್ಲ ಎಂಬ ಸುದ್ದಿ ಇಡೀ ಜಗತ್ತಿಗೆ ಗೊತ್ತಿದೆ. ಆದರೆ, ಪುನೀತ್ ಅವರ ಸೋದರತ್ತೆ ನಾಗಮ್ಮನಿಗೆ ಮಾತ್ರ ಈ ವಿಚಾರ ಇನ್ನೂ ತಿಳಿದಿಲ್ಲ. ಪುನೀತ್ ಜನ್ಮದಿನದ ಪ್ರಯುಕ್ತ ಪುನೀತ್ ರಾಜ್ ಕುಮಾರ್ ಅವರಿಗೆ ಶುಭ ಹಾರೈಸಿರುವ ನಾಗಮ್ಮ, ಒಮ್ಮೆ ಬಂದು ನೊಡ್ಕೊಂಡು ಹೋಗು ಕಂದಾ ಎಂದು ಕೋರಿದ್ದಾರೆ.

ಕರ್ನಾಟಕದಾದ್ಯಂತ ನಟ ಪುನೀತ್ ರಾಜ್ ಕುಮಾರ್ ಜನ್ಮದಿನದ ನಿಮಿತ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಣೆ ಮಾಡಿಕೊಳ್ಳುತ್ತಿದ್ದರೆ ಅತ್ತ ಅವರ ಸೋದರತ್ತೆ ನಾಗಮ್ಮ ಅವರು ಮಾತ್ರ ಪುನೀತ್ ಒಮ್ಮೆ ನನ್ನನ್ನು ಬಂದು ನೋಡಿಕೊಂಡು ಹೋಗು ಎಂದು ಮನವಿ ಮಾಡಿದ್ದಾರೆ.

ನಟ ಪುನೀತ್ ರಾಜ್ ಕುಮಾರ್ ಗೆ ಜನ್ಮ ದಿನದ ನಿಮಿತ್ತ ಶುಭ ಕೋರಿರುವ ನಾಗಮ್ಮ ಅವರು, ‘ಚೆನ್ನಾಗಿದಿಯಾ ಮಗನೇ? ನಿನಗೆ 50 ವರ್ಷ ಆಗಿದೆ. ನಿನಗೆ 50 ವರ್ಷ ಆಯ್ತಲ್ಲೋ’ ಎಂದು ಅವರು ಮಾತನಾಡಿದ್ದಾರೆ. ಅಪ್ಪುಗೆ 50 ವರ್ಷ ತುಂಬಿತು ಎಂದು ಹೇಳಿದಾಗ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಈ ವೇಳೆ ನನ್ನನ್ನ ಒಂದ್ ಸಾರಿ ಬಂದು ನೋಡ್ಕೊಂಡ್ ಹೋಗು ಕಂದಾ ಎಂದೂ ನಾಗಮ್ಮ ಕೇಳಿಕೊಂಡಿದ್ದಾರೆ.

ನಾಗಮ್ಮ ಅವರ ಮನವಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಅಪ್ಪು ನಿಧನರಾಗಿರುವ ವಿಚಾರ ತಿಳಿದರೆ ಶಾಕ್ ಆಗುತ್ತದೆ ಎಂಬ ಕಾರಣಕ್ಕೆ ನಾಗಮ್ಮ ಅವರಿಂದ ಈ ವಿಚಾರವನ್ನು ಮುಚ್ಚಿಡಲಾಗಿದೆ. ನಾಗಮ್ಮ ಅವರು ಅಪ್ಪು ಬಗ್ಗೆ ವಿಚಾರಿಸಿದಾಗಲೆಲ್ಲಾ ಅಪ್ಪು ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ ಎಂದು ಸಬೂಬು ಹೇಳಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!