ಎಲ್ ಅಂಡ್ ಟಿ ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು ಉಪನಗರ ರೈಲು ಯೋಜನೆ: ಹೊರಬರಲು L&T ಚಿಂತನೆ?

ಕಾಮಗಾರಿ ಪೂರ್ಣಗೊಳಿಸಲು L&T ಗೆ ನೀಡಲಾದ 27 ತಿಂಗಳ ಗುತ್ತಿಗೆ ಅವಧಿಯು ಮೂರು ತಿಂಗಳ ಹಿಂದೆಯೇ ಮುಕ್ತಾಯಗೊಂಡಿದೆ.

ಬೆಂಗಳೂರು: ರೂ. 15,767 ಕೋಟಿ ಮೊತ್ತದ ಬೆಂಗಳೂರು ಉಪನಗರ ರೈಲು ಯೋಜನೆ (BSRP)ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಲಭ್ಯವಿರುವ ಭೂಮಿಯ ಕೊರತೆಯಿಂದಾಗಿ ಬೈಯಪ್ಪನಹಳ್ಳಿ ಮತ್ತು ಚಿಕ್ಕಬಾಣಾವರ ನಡುವಿನ ಕಾರಿಡಾರ್ 2 ಅನುಷ್ಠಾನಗೊಳಿಸಲು ಗುತ್ತಿಗೆ ನೀಡಲಾಗಿರುವ ಲಾರ್ಸೆನ್ ಅಂಡ್ ಟೂಬ್ರೊ ಲಿಮಿಟೆಡ್ (L&T) ಒಪ್ಪಂದದಿಂದ ಹೊರಹೋಗುವಂತೆ ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್‌) ಒತ್ತಾಯಿಸಿದೆ ಎನ್ನಲಾಗಿದೆ.

ಕಾಮಗಾರಿ ಪೂರ್ಣಗೊಳಿಸಲು L&T ಗೆ ನೀಡಲಾದ 27 ತಿಂಗಳ ಗುತ್ತಿಗೆ ಅವಧಿಯು ಮೂರು ತಿಂಗಳ ಹಿಂದೆಯೇ ಮುಕ್ತಾಯಗೊಂಡಿದೆ. ಉಪನಗರ ರೈಲು ಯೋಜನೆ ಕಾರಿಡಾರ್-2 ಅನ್ನು ಅಭಿವೃದ್ಧಿಪಡಿಸಲು ಭೂಮಿ ಹಸ್ತಾಂತರಿಸುವಲ್ಲಿ ವಿಳಂಬವಾಗಿರುವುದರಿಂದ ಆಗಿರುವ ನಷ್ಟಕ್ಕೆ ಕಂಪನಿಯು 500 ಕೋಟಿ ರೂಪಾಯಿ ಪರಿಹಾರವನ್ನು ಕೋರಿದೆ. ಇದರಿಂದಾಗಿ ಹದಿನೈದು ದಿನಗಳ ಹಿಂದೆ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಮೂಲಗಳು ಖಚಿತಪಡಿಸಿವೆ.

ಮಲ್ಲಿಗೆ ಕಾರಿಡಾರ್ ಎಂದು ಕರೆಯಲಾಗುವ ಕಾರಿಡಾರ್-2 25.01 ಕಿಮೀ ವರೆಗೆ ಸಾಗುತ್ತದೆ. 148.17 ಕಿಮೀ ಯೋಜನೆಯ ನಾಲ್ಕು ಕಾರಿಡಾರ್‌ಗಳಲ್ಲಿ ಎರಡನ್ನು ಲಾರ್ಸೆನ್ ಅಂಡ್ ಟೂಬ್ರೊ ಲಿಮಿಟೆಡ್‌ಗೆ ನೀಡಲಾಗಿದೆ. ನಾಲ್ಕನೇ ಕಾರಿಡಾರ್ ಅಥವಾ ಕನಕ ಲೈನ್ (ಹೀಲಳಿಗೆ ರಾಜನಕುಂಟೆ, 46.8 ಕಿ.ಮೀ) ಮತ್ತು ಎರಡನೇ ಕಾರಿಡಾರ್ ಅಥವಾ ಮಲ್ಲಿಗೆ ಲೈನ್ ಬೆನ್ನಿಗನಹಳ್ಳಿಯಿಂದ ಚಿಕ್ಕ ಬಾಣಾವರವರೆಗೆ 25 ಕಿ.ಮೀ ಸಾಗುತ್ತದೆ.

ಕೆಎಸ್‌ಆರ್ ಬೆಂಗಳೂರು ನಗರದಿಂದ ವಿಮಾನ ನಿಲ್ದಾಣದವರೆಗಿನ ಇನ್ನೆರಡು ಕಾರಿಡಾರ್ ಕಾರಿಡಾರ್-1 ಮತ್ತು ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗಿನ ಕಾರಿಡಾರ್ 3 ಕ್ಕೆ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿಲ್ಲ.

ಕಾರಿಡಾರ್-2ಕ್ಕೆ 91.5 ಎಕರೆ ಜಮೀನು ಅಗತ್ಯವಿದೆ. ಅದರಲ್ಲಿ 28.56 ಎಕರೆ ಖಾಸಗಿ ಜಮೀನು ಆಗಿದೆ. ಕಾರಿಡಾರ್-4ಕ್ಕೆ 160.56 ಎಕರೆ ಅಗತ್ಯವಿದ್ದು, 40.29 ಎಕರೆ ಖಾಸಗಿ ಜಮೀನು ಆಗಿದೆ. ಭೂಮಿ ಹಸ್ತಾಂತರಿಸದಿರುವುದು ಮತ್ತು ಸಾರ್ವಜನಿಕ ಉಪಯುಕ್ತದ ಕಟ್ಟಡಗಳ ಸ್ಥಳಾಂತರ ಮಾಡದೇ ಇರುವುದು ನಾವು ಎದುರಿಸುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ನಾವು ಎಲ್ಲೆಲ್ಲಿ ಭೂಮಿ ಪಡೆದಿದ್ದೇವೆಯೋ ಅಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೇವೆ. ಕಾರಿಡಾರ್ -4 ನಲ್ಲಿಯೂ ಹೀಲಳಿ ಬಳಿ ಸೇತುವೆಗಳನ್ನು ಪೂರ್ಣಗೊಳಿಸಿದ್ದೇವೆ ಎಂದು L&T ಮೂಲಗಳು TNIE ಗೆ ತಿಳಿಸಿವೆ.

ಉಪ ನಗರ ರೈಲು ಯೋಜನೆಗಾಗಿ L&T ಗಾಗಿ ಕೆಲಸ ಮಾಡುತ್ತಿದ್ದ ಕನಿಷ್ಠ ಐದು ಉನ್ನತ ಇಂಜಿನಿಯರ್‌ಗಳು ರಾಜೀನಾಮೆ ನೀಡಿ ಬೇರೆಡೆಗೆ ತೆರಳಿದ್ದಾರೆ. ಭೂಮಿ ಲಭ್ಯತೆಯ ಕೊರತೆಯಿಂದಾಗಿ ಯೋಜನೆಯಲ್ಲಿ ಯಾವುದೇ ಗಮನಾರ್ಹ ಪ್ರಗತಿಯಾಗದಿಲ್ಲದಿರುವುದು L & T ವರ್ಚಸ್ಸಿಗೆ ಧಕ್ಕೆ ತಂದಿರುವುದಾಗಿ ಕಂಪನಿ ಹೇಳಿರುವುದಾಗಿ ಇತರ ಮೂಲಗಳು ತಿಳಿಸಿವೆ.

ಬಿಎಸ್‌ಆರ್‌ಪಿಯ ಕಾರಿಡಾರ್-2 ಲೈನ್‌ಗೆ ಭೂಮಿ ಲಭ್ಯವಿಲ್ಲದಿರುವುದು ಕಾಮಗಾರಿ ಮುಂದುವರೆಸದಂತೆ ಅಡ್ಡಿಯಾಗದಂತೆ ತಡೆದಿದೆ ಎಂದು ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕಿ (ಪ್ರಭಾರ) ಎನ್ ಮಂಜುಳಾ ಅವರಿಗೆ 2025ರ ಮಾರ್ಚ್ 7ರಂದು ಪತ್ರ ಬರೆದು ಎಲ್‌ಅಂಡ್‌ಟಿ ತಿಳಿಸಿದೆ ಎಂದು ಬಿಎಸ್‌ಆರ್‌ಪಿ ನೋಡಲ್ ಏಜೆನ್ಸಿಯ ಮೂಲಗಳು ತಿಳಿಸಿವೆ. ಕಾರ್ಮಿಕ ಮತ್ತು ಬಾಡಿಗೆ ಯಂತ್ರೋಪಕರಣಗಳು ಬಳಕೆಯಾಗದೆ ಉಳಿದಿರುವುದರಿಂದ L&T ಉಂಟಾದ ದೊಡ್ಡ ನಷ್ಟಗಳ ಬಗ್ಗೆ ಪತ್ರದಲ್ಲಿ ಹೇಳಿದ್ದು, ತನ್ನ ಒಪ್ಪಂದದ ಜವಾಬ್ದಾರಿಗಳಿಂದ ಮುಕ್ತಗೊಳಿಸಬೇಕು" ಎಂದು ಮನವಿ ಮಾಡಿದೆ ಎನ್ನಲಾಗಿದೆ.

ರಾಜ್ಯ ಬೃಹತ್ , ಮಧ್ಯಮ ಖಾತೆ ಹಾಗೂ ಮೂಲಸೌಕರ್ಯ ಸಚಿವ ಎಂ.ಬಿ.ಪಾಟೀಲ್ ಅವರು ಬಿಎಸ್‌ಆರ್‌ಪಿಯನ್ನು ನೋಡಿಕೊಳ್ಳುತ್ತಿದ್ದು, ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ. ಮುಂಬೈ ಮತ್ತು ಬೆಂಗಳೂರಿನಲ್ಲಿರುವ ಎಲ್ & ಟಿ ಅಧಿಕಾರಿಗಳನ್ನು ಪದೇ ಪದೇ ಸಂಪರ್ಕಿಸಿದರೂ ಪ್ರತಿಕ್ರಿಯೆ ನೀಡಲು ಮುಂದಾಗಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT