ಸಚಿವ ಕೆ.ಎನ್ ರಾಜಣ್ಣ 
ರಾಜ್ಯ

ಬ್ಲ್ಯೂ ಜೀನ್ಸ್ ಧರಿಸಿದ್ದ ಹುಡುಗಿಯಿಂದ ಹನಿಟ್ರ್ಯಾಪ್ ಗೆ ಯತ್ನ: ರಹಸ್ಯ ಬಿಚ್ಚಿಟ್ಟ ಸಚಿವ ಕೆ.ಎನ್ ರಾಜಣ್ಣ!

ನನಗೆ ಎರಡು ಬಾರಿ ಹನಿಟ್ರ್ಯಾಪ್ ಯತ್ನ ನಡೆದಿದ್ದು, 'ಎರಡು ಬಾರಿ ಬಂದಾಗ ಹುಡುಗಿಯರು ಬೇರೆ ಬೇರೆ ಆಗಿದ್ದರು. ಆದರೆ ಎರಡು ಬಾರಿಯೂ ಒಬ್ಬನೇ ಹುಡುಗ ಬಂದಿದ್ದನ್ನು ಎಂದು ಹನಿಟ್ರ್ಯಾಪ್ ಕಥೆಯನ್ನು ಬಿಚ್ಚಿಟ್ಟರು.

ತುಮಕೂರು: ಸಚಿವರು, ಶಾಸಕರನ್ನು 'ಮಧುಬಲೆ'ಗೆ ಬೀಳಿಸುವ ಯತ್ನ ವಿಚಾರ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವಂತೆಯೇ ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಂಗಳವಾರ ಮತ್ತಷ್ಟು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ. ಎನ್. ರಾಜಣ್ಣ, ನನಗೆ ಎರಡು ಬಾರಿ ಹನಿಟ್ರ್ಯಾಪ್ ಯತ್ನ ನಡೆದಿದ್ದು, 'ಎರಡು ಬಾರಿ ಬಂದಾಗ ಹುಡುಗಿಯರು ಬೇರೆ ಬೇರೆ ಆಗಿದ್ದರು. ಆದರೆ ಎರಡು ಬಾರಿಯೂ ಒಬ್ಬನೇ ಹುಡುಗ ಬಂದಿದ್ದನ್ನು ಎಂದು ಹನಿಟ್ರ್ಯಾಪ್ ಕಥೆಯನ್ನು ಬಿಚ್ಚಿಟ್ಟರು.

ಹೈಕೋರ್ಟ್ ಲಾಯರ್ ಅಂತಾ ಹೇಳಿದ್ದ ಮಹಿಳೆ:

ಹನಿಟ್ರ್ಯಾಪ್ ಮಾಡಲು ನನ್ನ ಮನೆಗೆ ಎರಡು ಸಲ ಒಬ್ಬನೇ ಹುಡುಗ ಹುಡುಗಿಯರನ್ನು ಕರೆದುಕೊಂಡು ಬಂದಿದ್ದನು. ಆದರೆ, ಎರಡು ಬಾರಿಯೂ ಬೇರೆ ಬೇರೆ ಹುಡುಗಿಯರು ಇದ್ದರು. ಎರಡನೇ ಬಾರಿ ಬಂದಾಗ ಹೈಕೋರ್ಟ್ ಲಾಯರ್ ಅಂತಾ ಹೇಳಿದ್ದಳು. ಮೊದಲ ಬಾರಿ ಬಂದಾಗ ಲಾಯರ್ ಅಂತಾ ಹೇಳಿರಲಿಲ್ಲ. ಪರ್ಸನಲ್ ಆಗಿ ಮಾತನಾಡಬೇಕು ಅಂತಾ ಹೇಳಿದ್ದಳು. ನನಗೆ ಪೋಟೋ ತೋರಿಸಿದರೆ ಗುರುತು ಹಿಡಿಯುತ್ತೇನೆ ಎಂದರು.

ಅಪರಿಚಿತರಿಂದ ಹನಿಟ್ರ್ಯಾಪ್ ಯತ್ನ: ಮನಯಲ್ಲಿ ಸಿಸಿಟಿವಿ ಇರಲಿಲ್ಲ. ಹಾಗಾಗಿ ಸಿಸಿಟಿವಿ ವಿಡಿಯೋ ನಮ್ಮ ಬಳಿ ಇಲ್ಲ. ಯಾರು ಬಂದು ಹೋಗಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದೇನೆ. ಅಪರಿಚಿತರು ಅಂತ ದೂರಿನಲ್ಲಿ ದಾಖಲಿಸಿದ್ದೇನೆ ಎಂದು ಮಾಹಿತಿ ನೀಡಿದರು.

ಗೃಹ ಸಚಿವರಿಗೆ ಇಂದು ದೂರು ಸಲ್ಲಿಕೆ: ಹಲವು ಕಾರ್ಯಕ್ರಮಗಳಲ್ಲಿ ಬ್ಯುಸಿ ಇದ್ದ ಕಾರಣ ದೂರು ನೀಡಿರಲಿಲ್ಲ. ಇಲ್ಲಿಯವರೆಗೂ ಯಾಕೆ ದೂರು ನೀಡಿಲ್ಲ ಅಂತಾ ಸಿಎಂ ಕೇಳಿದ್ರು, ಇಂದು ದೂರು ನೀಡುತ್ತೇನೆ ಅಂತಾ ಅವರಿಗೆ ಹೇಳಿದ್ದೇನೆ. ಇಂದು ಬೆಳಗ್ಗೆಯಿಂದ ಕುಳಿತು ಮೂರು ಪುಟಗಳ ದೂರು ಬರೆದಿದ್ದು, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಎಲ್ಲೇ ಇದ್ರೂ ಹುಡುಕಿಕೊಂಡು ಹೋಗಿ ದೂರು ನೀಡುತ್ತೇನೆ. ದೂರು ನೀಡಿದ ಬಳಿಕ ಎಫ್ ಐಆರ್ ಆಗುತ್ತದೆ. ಆಗ ದಾಖಲೆಗಳು ಬಹಿರಂಗವಾಗುತ್ತವೆ ಎಂದರು.

ಹೈಕಮಾಂಡ್ ಗೂ ದೂರು: ನಾನು ಎಲ್ಲಿಯೂ ಜಡ್ಜ್ ಬಗ್ಗೆ ಪ್ರಸ್ತಾಪ ಮಾಡಿಲ್ಲ. ರಾಜಕೀಯ ನಾಯಕರ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಮಾರ್ಚ್ 30ರನಂತರ ದೆಹಲಿಗೆ ಹೋಗಿ ಪಕ್ಷದ ಹೈಕಮಾಂಡ್ ಗೂ ಹನಿಟ್ರ್ಯಾಪ್ ವಿಚಾರ ಕುರಿತು ದೂರು ನೀಡುತ್ತೇನೆ .ಇದು ಹೊಸ ಚಾಳಿ ಅಲ್ಲ. ಇದು ಈಗಾಗಲೇ ಹಲವು ಜನರಿಗೆ ಆಗಿದೆ. ರಾಜಕೀಯ ದ್ವೇಷಕ್ಕಾಗಿ ಹನಿಟ್ರ್ಯಾಪ್ ಮಾಡಲಾಗುತ್ತಿದೆ. ಇದರ ಬಗ್ಗೆ ಸರಿಯಾದ ತನಿಖೆ ನಡೆದು ಈ ಸಂಚಿನ ಹಿಂದಿರುವವರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT