ಬೆಂಗಳೂರಿನ ಡಿಕೆನ್ಸನ್ ರಸ್ತೆಯಲ್ಲಿ ಬುಧವಾರ ನಿಂತಿದ್ದ ತ್ಯಾಜ್ಯದಿಂದ ತುಂಬಿದ ಆಟೋ ಟಿಪ್ಪರ್‌ಗಳು. 
ರಾಜ್ಯ

BSWML ನೌಕರರಿಂದ ಮುಷ್ಕರ ಶುರು: 5,300 ಆಟೋ ಟಿಪ್ಪರ್, 700 ಕಸದ ಲಾರಿಗಳ ಸಂಚಾರ ಸ್ಥಗಿತ

ಬಿಬಿಎಂಪಿ ಮುಖ್ಯ ಕಚೇರಿ ಬಳಿ ನೂರಾರಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು. ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಹಲವರನ್ನು ವಶಕ್ಕೆ ಪಡೆದರು. ನಂತರ ಸಂಜೆ ವೇಳೆ ಬಿಡುಗಡೆ ಮಾಡಿದರು.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಘನತ್ಯಾಜ್ಯ ನಿರ್ವಹಣಾ ಘಟಕದ ವಿರುದ್ಧ ಕ್ಲೀನರ್‌ಗಳು ಮತ್ತು ಚಾಲಕರು ಬುಧವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಇದರ ಪರಿಣಾಮ 5,300 ಆಟೋ ಟಿಪ್ಪರ್‌ಗಳು ಮತ್ತು 700 ಕಸದ ಲಾರಿಗಳ ಸಂಚಾರ ಸ್ಥಗಿತಗೊಂಡಿದೆ.

ಬಿಬಿಎಂಪಿ ಮುಖ್ಯ ಕಚೇರಿ ಬಳಿ ನೂರಾರಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು. ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಹಲವರನ್ನು ವಶಕ್ಕೆ ಪಡೆದರು. ನಂತರ ಸಂಜೆ ವೇಳೆ ಬಿಡುಗಡೆ ಮಾಡಿದರು.

ಐಪಿಡಿ ಸಾಲಪ್ಪ ವರದಿಯನ್ನು ಜಾರಿಗೆ ತರಬೇಕು ಮತ್ತು ಘನತ್ಯಾಜ್ಯ ವಿಲೇವಾರಿ ಮಾಡುವ ಚಾಲಕರ ಸೇವೆಯನ್ನು ಶಾಶ್ವತಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮುಷ್ಕರದ ನೇತೃತ್ವ ವಹಿಸಿರುವ ಕಾರ್ಮಿಕ ಸಂರಕ್ಷಣೆ ಸಂಘಟನೆಯ ಅಧ್ಯಕ್ಷ ತ್ಯಾಗರಾಜ್ ಅವರು ಮಾತನಾಡಿ, ಬಿಬಿಎಂಪಿ ಕಚೇರಿ ಬಳಿ 500 ಕ್ಕೂ ಹೆಚ್ಚು ಸದಸ್ಯರು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಕಚೇರಿ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಹಲವರನ್ನು ವಶಕ್ಕೆ ಪಡೆದರು ಎಂದು ಹೇಳಿದರು.

ಬಿಬಿಎಂಪಿ ಕಾರ್ಯಕರ್ತರು ಮತ್ತು ಚಾಲಕರನ್ನು ನಿರ್ಲಕ್ಷಿಸಿದೆ. ಗುತ್ತಿಗೆದಾರರ ಮೂಲಕ ನೇಮಕ ಮಾಡಿಕೊಳ್ಳುವ ಬದಲು ಅವರನ್ನು 'ನೇರ ಪಾವತಿ' ಯೋಜನೆಯಡಿ ನೇಮಿಸಿಕೊಳ್ಳಬೇಕು. "ಮೊದಲ ದಿನ ಪ್ರತಿಭಟನಾಕಾರರ ಸಂಖ್ಯೆ ಕಡಿಮೆ ಇದೆ. ಆದರೆ, ಗುರುವಾರದಿಂದ ಸಾವಿರಾರು ಜನರು ನಮ್ಮೊಂದಿಗೆ ಕೈಜೋಡಿಸಿ, ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆಂದು ತಿಳಿಸಿದರು.

ಕಸ ಸಂಗ್ರಹಣೆ ಸ್ಥಗಿತಗೊಳ್ಳುವುದರಿಂದ ಗುರುವಾರದಿಂದ ಮುಷ್ಕರದ ಪರಿಣಾಮ ಬೀರಲಿದೆ ಎಂದುೂ ಎಚ್ಚರಿಸಿದರು.

ಸಂಘಟನೆಯ ಕಾರ್ಯನಿರ್ವಾಹಕ ಟ್ರಸ್ಟಿ, ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್ ಅವರು ಮಾತನಾಡಿ, ಪೌರಕಾರ್ಮಿಕರು ಪರಿಸ್ಥಿತಿ ಬಗ್ಗೆ ಧ್ವನಿ ಎತ್ತಿದರು.

ಬಿಬಿಎಂಪಿ ಗುತ್ತಿಗೆ ವ್ಯವಸ್ಥೆಯನ್ನು ಅವಲಂಬಿಸುವ ಬದಲು ಈ ಕಾರ್ಮಿಕರನ್ನು ನೇರವಾಗಿ ನೇಮಿಸಿಕೊಳ್ಳಬೇಕು. ಪ್ರತಿಭಟನೆ 3 ದಿನಗಳವರೆಗೆ ಮುಂದುವರಿದರೆ, ನಗರ ಕಸಮಯಗೊಳ್ಳಲಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

SCO Summit: ಒಂದೇ ವೇದಿಕೆಯಲ್ಲಿ ಚೀನಾ- ಭಾರತ- ರಷ್ಯಾ; ಕೆರಳಿದ Trump ಭಾರತದ ಬಗ್ಗೆ ಹೇಳಿದ್ದೇನು?

ಎಲ್ಲರನ್ನೂ ಕಾಯಿಸುತ್ತಿದ್ದ ಪುಟಿನ್ ಪ್ರಧಾನಿ ಮೋದಿಗಾಗಿ 10 ನಿಮಿಷಗಳ ಕಾಲ ಕಾರಿನಲ್ಲಿ ಕಾದು ಕುಳಿತ್ತಿದ್ದರು, Video!

ಸರ್ಕಾರಿ ಬಂಗಲೆ ಖಾಲಿ ಮಾಡಿದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧಂಖರ್!

ಸೌಜನ್ಯ ಹೆಸರು ಹೇಳಿ ದುಡ್ಡು ಮಾಡಿದೆ ಎಂದು ನಿಮ್ಮ ಪಕ್ಷದವರೇ ಟೀಕಿಸಿದರು: ವಿಜಯೇಂದ್ರಗೆ ಸೌಜನ್ಯ ತಾಯಿ ತರಾಟೆ

ಪ್ರವಾಹದಿಂದಾಗಿ ಮಣಿಮಹೇಶ್ ಯಾತ್ರೆಯ 16 ಭಕ್ತರು ಸಾವು: ಹಿಮಾಚಲ ವಿಪತ್ತು ಪೀಡಿತ ರಾಜ್ಯ; ಸಿಎಂ ಸುಖು ಘೋಷಣೆ!

SCROLL FOR NEXT