ರಾಯಚೂರು: ಮೊದಲ ಪತ್ನಿಗೆ ಕೈಕೊಟ್ಟು ಎರಡನೇ ಮದುವೆಯಾಗಿದ್ದ ವ್ಯಕ್ತಿಯೋರ್ವ ಇದೀಗ ಮೊದಲ ಪತ್ನಿಗೆ ಮೇಲೆ ಮಚ್ಚಿನಿಂದ ದಾಳಿ ಮಾಡಿರುವ ಘಟನೆ ರಾಯಚೂರಿನ ಏಗನೂರು ಗ್ರಾಮದಲ್ಲಿ ನಡೆದಿದೆ. ಬೈಕ್ನಲ್ಲಿ ಬಂದ ತಿಮ್ಮಪ್ಪ ಪತ್ನಿ ಪದ್ಮಾವತಿ ಹಾಗೂ ನಾದಿನಿ ಭೂದೇವಿ ಮೇಲೆ ಮಚ್ಚಿನಿಂದ ಮನಬಂದಂತೆ ದಾಳಿ ಮಾಡಿದ್ದಾನೆ. ಈ ದಾಳಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋವನ್ನು ಜನ ಬೆಚ್ಚಿಬಿದ್ದಿದ್ದಾರೆ. ತಿಮ್ಮಪ್ಪ ಎರಡನೇ ಮದುವೆಯಾಗಿದ್ದ ಹೀಗಾಗಿ ಪದ್ಮಾವತಿ ಕೋರ್ಟ್ ಮೊರೆ ಹೋಗಿ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಳು. ಜೀವನಾಂಶ ನೀಡುವಂತೆ ಕೋರ್ಟ್ ಸಹ ತಿಮ್ಮಪ್ಪಗೆ ಸೂಚಿಸಿತ್ತು. ಆದರೆ ಜೀವನಾಂಶ ಕೊಡದಿದ್ದರಿಂದ ಜೈಲು ಸೇರಿದ್ದನು. ಅಲ್ಲದೆ ಜೈಲಿನಿಂದ ಹೊರ ಬಂದ ಬಳಿಕ ಪತ್ನಿಗೆ ಹಿಂಸೆ ಕೊಡಲಾರಂಭಿಸಿದ್ದಾನೆ. ಅಲ್ಲದೆ ಪತ್ನಿ ಮತ್ತು ನಾದಿನಿ ಮೇಲೆ ಮಚ್ಚಿನಿಂದ ದಾಳಿ ಮಾಡಿದ್ದರಿಂದ ಪದ್ಮಾವತಿಯ ಕೈ ಬೆರಳುಗಳು ತುಂಡಾಗಿವೆ. ಭೂದೇವಿಯ ಮುಂಗೈ ತುಂಡಾಗಿದ್ದು ಸದ್ಯ ರಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.