ಹಂಪಿ ಗೈಡ್ ವಿರೂಪಾಕ್ಷಿ 
ರಾಜ್ಯ

ಪಾಕ್'ಗೆ ಶಸ್ತ್ರಾಸ್ತ್ರಗಳ ರವಾನೆ: ಟರ್ಕಿ ರವಾನಿಸಿದ್ದ 'Appreciation letter' ಹರಿದು ಹಾಕಿದ ಹಂಪಿ ಪ್ರವಾಸಿ ಮಾರ್ಗದರ್ಶಿ

ಭಾರತದ ಟರ್ಕಿಯ ರಾಯಭಾರಿ ಎಚ್ ಇ ಫಿರತ್ ಸುನೆಲ್ ಮತ್ತು ಹೈದರಾಬಾದ್‌ನಲ್ಲಿರುವ ಟರ್ಕಿಯ ಕಾನ್ಸುಲ್ ಜನರಲ್ ಓರ್ಹಾನ್ ಯಲ್ಮನ್ ಓಕನ್ ಅವರು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಹಂಪಿ ಮತ್ತು ಬಳ್ಳಾರಿಯಲ್ಲಿರುವ ಟರ್ಕಿ ಸೈನಿಕರ ಸ್ಮಾರಕ ಇರುವ ಪ್ರದೇಶಕ್ಕೆ ಭೇಟಿ ನೀಡಿ, ಗೌರವ ಸಲ್ಲಿಸಿದ್ದರು.

ಹಂಪಿ/ವಿಜಯನಗರ: ಕಳೆದ ಡಿಸೆಂಬರ್‌ನಲ್ಲಿ ಹಂಪಿಗೆ ಭೇಟಿ ನೀಡಿದ ಟರ್ಕಿ ರಾಷ್ಟ್ರದ ರಾಯಭಾರ ಕಚೇರಿಯ ಅಧಿಕಾರಿಗಳು ರವಾನಿಸಿದ್ದ ಮೆಚ್ಚುಗೆ ಪತ್ರ (Appreciation letter)ನ್ನು ಹರಿದು ಹಾಕುವ ಮೂಲಕ ಹಂಪಿಯ ಪ್ರವಾಸಿ ಮಾರ್ಗದರ್ಶಿಯೊಬ್ಬರು ಟರ್ಕಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದ ಟರ್ಕಿಯ ರಾಯಭಾರಿ ಎಚ್ ಇ ಫಿರತ್ ಸುನೆಲ್ ಮತ್ತು ಹೈದರಾಬಾದ್‌ನಲ್ಲಿರುವ ಟರ್ಕಿಯ ಕಾನ್ಸುಲ್ ಜನರಲ್ ಓರ್ಹಾನ್ ಯಲ್ಮನ್ ಓಕನ್ ಅವರು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಹಂಪಿ ಮತ್ತು ಬಳ್ಳಾರಿಯಲ್ಲಿರುವ ಟರ್ಕಿ ಸೈನಿಕರ ಸ್ಮಾರಕ ಇರುವ ಪ್ರದೇಶಕ್ಕೆ ಭೇಟಿ ನೀಡಿ, ಗೌರವ ಸಲ್ಲಿಸಿದ್ದರು.

ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ವಿಜಯನಗರ ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ಪ್ರಭುಲಿಂಗ ತಳಕೆರೆ ಅವರು ನನಗೆ ಮಾರ್ಗದರ್ಶನ ನೀಡಲು ಅವಕಾಶ ನೀಡಿದ್ದರು.

ರಾಯಭಾರ ಕಚೇರಿ ಮರಳಿದ ಬಳಿಕ ಇಬ್ಬರೂ ನನಗೆ ಮೆಚ್ಚುಗೆ ಪತ್ರ ರವಾನಿಸಿದ್ದಾರೆ. ನಾನು ಭಾರತೀಯ ಸೇನೆಗೆ ಸೇರುವ ಕನಸನ್ನು ಹೊಂದಿದ್ದೆ, ಆದರೆ ಮೂರು ಬಾರಿ ಪ್ರಯತ್ನಿಸಿದರೂ ನನ್ನ ಕನಸು ನನಸಾಗಲಿಲ್ಲ. ನನ್ನ ಗುರಿ ಏನೇ ಇರಲಿ, ನನ್ನ ದೇಶ, ದೇಶದ ಸುರಕ್ಷತೆ ನನ್ನ ಪ್ರಮುಖ ಆದ್ಯತೆಯಾಗಿದೆ. ಟರ್ಕಿ ರಾಷ್ಟ್ರದ ಶಸ್ತ್ರಾಸ್ತ್ರಗಳನ್ನು ಹೊತ್ತ ವಿಮಾನ ಪಾಕಿಸ್ತಾನದಲ್ಲಿ ಇಳಿದಿದೆ ಎಂಬುದನ್ನು ರಾಷ್ಟ್ರೀ ಮಾಧ್ಯಮಗಳಿಂದ ತಿಳಿದುಕೊಂಡಿದ್ದೇನೆ.

ಯಾವುದೇ ವ್ಯಕ್ತಿ ಅಥವಾ ದೇಶವು ನಮ್ಮ ಪ್ರತಿಸ್ಪರ್ಧಿ ದೇಶವನ್ನು ಬೆಂಬಲಿಸಿದರೆ, ನಾನು ಅವರಿಂದ ಮೆಚ್ಚುಗೆಯನ್ನು ಬಯಸುವುದಿಲ್ಲ. ನಾನು ಆ ಪತ್ರವನ್ನು ವಿರೂಪಾಕ್ಷ ದೇವಾಲಯದ ಮುಂದೆ ಹರಿದು ಹಾಕಿದೆ ಹಂಪಿ ಮಾರ್ಗದರ್ಶಿ ವಿರೂಪಾಕ್ಷಿ ಅವರು ಹೇಳಿದ್ದಾರೆ.

ಮೊದಲನೆಯ ಮಹಾಯುದ್ಧದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಟರ್ಕಿಶ್ ಮತ್ತು ಭಾರತೀಯ ಸೈನಿಕರ ಸ್ಮರಿಕೆಗಾಗಿ, ಬಳ್ಳಾರಿಯಲ್ಲಿ ಅವರ ಸ್ಮಾರಕಗಳನ್ನು ನಿರ್ಮಿಸಲಾಗಿದೆ ಎಂದು ಇದೇ ವೇಳೆ ವಿರೂಪಾಕ್ಷಿಯವರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!