ರಾಜ್ಯ

ಬೆಂಗಳೂರಿನಲ್ಲಿ 'ಆಪರೇಷನ್ ಅಭ್ಯಾಸ್' ಭಾಗವಾಗಿ ನಾಗರಿಕ ರಕ್ಷಣಾ ಮಾಕ್ ಡ್ರಿಲ್; ತುರ್ತು ಸನ್ನದ್ಧತೆಗೆ ತಯಾರಿ!

ಗೃಹ ಸಚಿವಾಲಯದ (MHA) ನಿರ್ದೇಶನದಂತೆ ಅಧಿಕಾರಿಗಳು ಇಂದು ನಗರದ ವಿವಿಧ ಸ್ಥಳಗಳಲ್ಲಿ 'ಆಪರೇಷನ್ ಅಭ್ಯಾಸ್' ಅಡಿಯಲ್ಲಿ ದೊಡ್ಡ ಪ್ರಮಾಣದ ನಾಗರಿಕ ರಕ್ಷಣಾ ಮಾಕ್ ಡ್ರಿಲ್ ನಡೆಸಿದರು.

ಬೆಂಗಳೂರು: ಗೃಹ ಸಚಿವಾಲಯದ (MHA) ನಿರ್ದೇಶನದಂತೆ ಅಧಿಕಾರಿಗಳು ಇಂದು ನಗರದ ವಿವಿಧ ಸ್ಥಳಗಳಲ್ಲಿ 'ಆಪರೇಷನ್ ಅಭ್ಯಾಸ್' ಅಡಿಯಲ್ಲಿ ದೊಡ್ಡ ಪ್ರಮಾಣದ ನಾಗರಿಕ ರಕ್ಷಣಾ ಮಾಕ್ ಡ್ರಿಲ್ ನಡೆಸಿದರು. ಎಂಎಚ್‌ಎ ಆದೇಶಿಸಿದ ರಾಷ್ಟ್ರವ್ಯಾಪಿ ಯುದ್ಧ ಸನ್ನದ್ಧತೆಯ ವ್ಯಾಯಾಮದ ಭಾಗವಾಗಿ ಈ ಕವಾಯತು ನಡೆಸಲಾಯಿತು.

ಅಧಿಕಾರಿಗಳ ಪ್ರಕಾರ, ವಿವಿಧ ಸ್ಥಳಗಳಲ್ಲಿ ಮಧ್ಯಾಹ್ನ 3.48ಕ್ಕೆ ಸೈರನ್ ಮೊಳಗಿದ ತಕ್ಷಣ, ನಾಗರಿಕ ರಕ್ಷಣಾ ಸಿಬ್ಬಂದಿ, ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಕಾರ್ಯಪ್ರವೃತ್ತವಾದವು. ಬೆಂಕಿಯ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗಳು, ಅವಶೇಷಗಳ ಕೆಳಗಿನಿಂದ ಜನರನ್ನು ಹೊರತರುವುದು, ಎತ್ತರದ ಕಟ್ಟಡಗಳಿಂದ ಜನರನ್ನು ಸ್ಥಳಾಂತರಿಸುವುದು ಮತ್ತು ವೈದ್ಯಕೀಯ ತುರ್ತು ಸೇವೆಗಳನ್ನು ಒದಗಿಸುವುದು ಈ ಡ್ರಿಲ್ ನ ಭಾಗವಾಗಿತ್ತು. ಸುಮಾರು ಅರ್ಧ ಗಂಟೆಗಳ ಕಾಲ ಕವಾಯತು ನಡೆಸಲಾಯಿತು.

"ಆಪರೇಷನ್ ಅಭ್ಯಾಸ್" ಎಂಬ ನಾಗರಿಕ ರಕ್ಷಣಾ ವ್ಯಾಯಾಮವನ್ನು ನಡೆಸಲು ಎಂಎಚ್‌ಎ ನಿರ್ದೇಶನದ ಪ್ರಕಾರ, ಮೊದಲ ಅಣಕು ಕವಾಯತು ನಡೆಸಲಾಯಿತು. ಬೆಂಗಳೂರು ಅಲ್ಲದೆ ರಾಯಚೂರು ಸೇರಿದಂತೆ ಕರ್ನಾಟಕದ ಕೆಲವು ಭಾಗಗಳಲ್ಲಿ ಇದೇ ರೀತಿಯ ವ್ಯಾಯಾಮಗಳನ್ನು ನಡೆಸಲಾಯಿತು. ಬೆಂಗಳೂರಿನಲ್ಲಿ ನಗರಾದ್ಯಂತ ಬ್ಲ್ಯಾಕ್‌ಔಟ್ ಅಣಕು ವ್ಯಾಯಾಮ ಇರಲಿಲ್ಲ. ಸಂಜೆ 6.40ರಿಂದ ಸಂಜೆ 7 ರವರೆಗೆ ನಡೆದ ಹಲಸೂರಿನ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಕ್ಯಾಂಪಸ್‌ಗೆ ಮಾತ್ರ ಪ್ರದರ್ಶನಗಳನ್ನು ಸೀಮಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ರಕ್ಷಣಾ ಇಲಾಖೆ ಮತ್ತು ಗೃಹ ಇಲಾಖೆಯ ನಿರ್ದೇಶನದಡಿಯಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಅಣಕು ಕಾರ್ಯಾಚರಣೆ ಮತ್ತು ಜಾಗೃತಿ ವ್ಯಾಯಾಮವನ್ನು ಆಯೋಜಿಸಲಾಗಿತ್ತು ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದು ಇದನ್ನು ಹಲಸೂರಿನಲ್ಲಿ ನಡೆಸಲಾಯಿತು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT