ಸಾಂದರ್ಭಿಕ ಚಿತ್ರ  
ರಾಜ್ಯ

ಕೆಳ ಹಂತದ ಸರ್ಕಾರಿ ಸಿಬ್ಬಂದಿಗೆ ಕೆನೆಪದರ ವಿನಾಯಿತಿ: ರಾಜ್ಯ ಸರ್ಕಾರದಿಂದ ಸುತ್ತೋಲೆ

ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (SES-2015) ಆಧರಿಸಿ ಹಿಂದುಳಿದ ವರ್ಗಗಳ ಆಯೋಗವು ತನ್ನ ಶಿಫಾರಸುಗಳಲ್ಲಿ ಒಬಿಸಿಗಳಿಗೆ ಕೆನೆಪದರವನ್ನು ಅನ್ವಯಿಸಲು ಶಿಫಾರಸು ಮಾಡಿತ್ತು.

ಬೆಂಗಳೂರು: ರಾಜ್ಯ ಸರ್ಕಾರದ ಕೆಳ ಹಂತದ ಹುದ್ದೆಗಳಲ್ಲಿರುವ ಅಭ್ಯರ್ಥಿಗಳಿಗೆ ಕೆನೆಪದರದಿಂದ ವಿನಾಯಿತಿ ನೀಡುವ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (SES-2015) ಆಧರಿಸಿ ಹಿಂದುಳಿದ ವರ್ಗಗಳ ಆಯೋಗವು ತನ್ನ ಶಿಫಾರಸುಗಳಲ್ಲಿ ಒಬಿಸಿಗಳಿಗೆ ಕೆನೆಪದರವನ್ನು ಅನ್ವಯಿಸಲು ಶಿಫಾರಸು ಮಾಡಿತ್ತು, ಇದು ಕಳೆದ ಶುಕ್ರವಾರ ನಡೆದ ಸಚಿವ ಸಂಪುಟದ ಕಾರ್ಯಸೂಚಿಗಳಲ್ಲಿ ಒಂದು ವಿಷಯವಾಗಿತ್ತು.

ಅಭ್ಯರ್ಥಿಗಳಿಗೆ ಕೆನೆಪದರದಿಂದ ವಿನಾಯಿತಿ ನೀಡುವ ಸುತ್ತೋಲೆಯನ್ನು ಸಚಿವ ಸಂಪುಟ ಸಭೆಗೆ ಒಂದು ದಿನ ಮೊದಲು ಅಂದರೆ ಗುರುವಾರ ಹೊರಡಿಸಲಾಗಿದೆ. ಸಂವಿಧಾನದ ವಿಧಿ 15(4) ಮತ್ತು 16(4) ರ ಅಡಿಯಲ್ಲಿ ನೇರ ನೇಮಕಾತಿಗಾಗಿ, ವರ್ಗ 2A, 2B, 3A, 3B ವರ್ಗಕ್ಕೆ ಸೇರಿದ ಅಭ್ಯರ್ಥಿಗಳು, ಕೆಳ ಹಂತದ ಹುದ್ದೆಗಳಲ್ಲಿ ನಿಗದಿತ-ನಿರ್ದಿಷ್ಟ ಅವಧಿಯ ಅನುಭವವನ್ನು ಹೊಂದಿದ್ದರೆ, ಅಂತಹ ಸಂದರ್ಭದಲ್ಲಿ ಅವರಿಗೆ ಕೆನೆಪದರ ನಿಯಮ ಅನ್ವಯಿಸುವುದಿಲ್ಲ ಎಂದು ಹಿಂದುಳಿದ ವರ್ಗಗಳ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.

ಆದ್ದರಿಂದ, ಈ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಸೇವೆಯಲ್ಲಿ ವಿನಾಯಿತಿ ನೀಡಲು, ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ ಮತ್ತು ಜಾತಿ ಪ್ರಮಾಣಪತ್ರಗಳನ್ನು ನೀಡಲು ಕ್ರಮ ಕೈಗೊಳ್ಳಿ ಎಂದು ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದೆ. ಈ ನಿರ್ಧಾರವು ಕೆಳ ಹಂತದ ಹುದ್ದೆಗಳಲ್ಲಿರುವ ಸರ್ಕಾರಿ ನೌಕರರ ಮಕ್ಕಳು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಕೋಟಾ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಹಿಂದೆ ಎಸ್ ಸಿ/ಎಸ್ ಟಿ ಮತ್ತು ವರ್ಗ I ರ ಅಭ್ಯರ್ಥಿಗಳಿಗೆ ಕೆನೆಪದರದ ವಿನಾಯಿತಿ ನೀಡಲಾಗಿತ್ತು, ಅದನ್ನು ಈಗ ಒಬಿಸಿಗಳಿಗೂ ವಿಸ್ತರಿಸಿದೆ.

ಕರ್ನಾಟಕದಲ್ಲಿ ಇತರ ಹಿಂದುಳಿದ ವರ್ಗಗಳಿಗೆ (OBC) ಕೆನೆಪದರದ ಸ್ಥಾನಮಾನವನ್ನು ನಿರ್ಧರಿಸಲು ಆದಾಯ ಮಿತಿ ವಾರ್ಷಿಕ 8 ಲಕ್ಷ ರೂಪಾಯಿಗಳಾಗಿದೆ. ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯವು ಈ ಮಿತಿಗಿಂತ ಹೆಚ್ಚಿದ್ದರೆ, ಅವರು ಉದ್ಯೋಗ ಅಥವಾ ಶಿಕ್ಷಣದಲ್ಲಿ ಒಬಿಸಿ ಮೀಸಲಾತಿಗೆ ಅರ್ಹರಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೊಂದು F-18 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ ಎಂದ Iran, ಬೆಚ್ಚಿದ ಅಮೆರಿಕದಿಂದ Fact-Check

ಯುದ್ದದಲ್ಲಿ ಗೆದ್ದು ಕೂಡ ಸೋಲುತ್ತಿರುವ ಅಮೇರಿಕಾ ಮತ್ತು ಚೀನಾ! (ಹಣಕ್ಲಾಸು)

ಮಾನಸಿಕ ನೆಮ್ಮದಿಗೆ 10 ಸಾವಿರ ರೂ, ಸ್ವಯಂ ಆರೈಕೆಗೆ 10 ಸಾವಿರ: 22 ವರ್ಷದ ಬೆಂಗಳೂರು Gen Z ಯುವತಿಯ ಮಾಸಿಕ ಖರ್ಚುವೆಚ್ಚ ವೈರಲ್!

ವಿವಾದದ ನಡುವೆ ಮೈಸೂರಿನ ಮುಕ್ತ ವಿವಿಯಲ್ಲಿ RSS ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

'ಜೀವ ಬಾಯಿಗೆ ಬಂದಿತ್ತು': ಆಗಸದಲ್ಲೇ ಗಿರಕಿ ಹೊಡೆದ ಡಿಕೆ ಶಿವಕುಮಾರ್, ರೇವಣ್ಣ ಪ್ರಯಾಣಿಸುತ್ತಿದ್ದ ವಿಮಾನ, ಕೆಲಕಾಲ ಆತಂಕ! ಆಗಿದ್ದೇನು?

SCROLL FOR NEXT