ಸಂಗ್ರಹ ಚಿತ್ರ 
ರಾಜ್ಯ

ಮೇ 28ರಂದು ಕರ್ನಾಟಕಕ್ಕೆ ಮುಂಗಾರು ಆಗಮನ: ಈ ಬಾರಿ ದಾಖಲೆ ಮಳೆ ಸಾಧ್ಯತೆ..!

ಪ್ರತಿ ಬಾರಿ ಜೂನ್ 1ಕ್ಕೆ ಮಾನ್ಸೂನ್ ಮಾರುತ ಆರಂಭವಾಗುವ ವಾಡಿಕೆ ಇತ್ತು. ಆದರೆ, ಈ ವರ್ಷ ಮೇ 27ರಂದೇ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆ ಇದೆ.

ಬೆಂಗಳೂರು: ಈ ಬಾರಿ ಬೇಸಿಗೆ ಕಾಲ ಬೇಗನೆ ಮುಗಿಯುತ್ತಿದ್ದು, 5 ದಿನ ಮುಂಚಿತವಾಗಿಯೇ ರಾಜ್ಯದಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆಗಳಿವೆ ಎಂದು ಭಾರತದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರತಿ ಬಾರಿ ಜೂನ್ 1ಕ್ಕೆ ಮಾನ್ಸೂನ್ ಮಾರುತ ಆರಂಭವಾಗುವ ವಾಡಿಕೆ ಇತ್ತು. ಆದರೆ, ಈ ವರ್ಷ ಮೇ 27ರಂದೇ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆ ಇದೆ. ಜೂನ್ 1 ರಂದು ನೈಋತ್ಯ ಮಾರುತ ಕೇರಳವನ್ನು ಪ್ರವೇಶಿಸಿದರೆ, ಜೂನ್ 8ರೊಳಗೆ ಇಡೀ ದೇಶವನ್ನ ಆವರಿಸುತ್ತಿತ್ತು. ಆದರೆ, ಈ ಬಾರಿ 5 ದಿನ ಮುಂಚಿತವಾಗಿ ಮುಂಗಾರು ಮಳೆ ಆರಂಭವಾಗುತ್ತಿದೆ.

ಮುಂಗಾರು 5 ದಿನದ ಮುಂಚಿತವಾಗಿ ಬರುತ್ತಿರುವುದು ಕಳೆದ 16 ವರ್ಷದ ಬಳಿಕ ಇದೇ ಮೊದಲಾಗಿದೆ. 2009ರಲ್ಲಿ ಮೇ.23 ರಂದು ಇದೇ ರೀತಿಯಲ್ಲಿ ಮುಂಗಾರು 5 ದಿನಗಳ ಮುಂಚೆ ಆರಂಭವಾಗಿತ್ತು. ಈ ಬಾರಿ ಮೇ 27ರಂದು ಆರಂಭವಾಗುವ ಸಾಧ್ಯತೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮೇ.28ರಂದು ಕರ್ನಾಟಕದಲ್ಲಿ ಮುಂಗಾರು ಆಗಮನವಾಗಲಿದ್ದು, ಈ ವರ್ಷ ಸಾಮಾನ್ಯಕ್ಕಿತ ಹೆಚ್ಚಿನ ಮಳೆಯಾಗುವ ನಿರೀಕ್ಷೆಗಳಿವೆ. ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ, ಆದರೆ ,ರಾಜ್ಯದ ಇತರ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಮಾಜಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಅವರು ಹೇಳಿದ್ದಾರೆ.

ಜೂನ್ ಮತ್ತು ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಮೊದಲ ವಾರದ ನಡುವೆ ಸರಾಸರಿ ಮಳೆ 860 ಮಿ.ಮೀ. ಮಳೆಯಾಗುತ್ತಿತ್ತು. ಆದರೆ, ಈ ಬಾರಿ ಸಾಮಾನ್ಯಕ್ಕಿಂತ ಸುಮಾರು ಶೇ.5 ಹೆಚ್ಚು ಮಳೆಯಾಗಲಿದೆ. ಸರಾಸರಿ 900 ಮಿ.ಮೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ಮುಂದಿನ ವಾರ ರಾಜ್ಯಾದ್ಯಂತ ಸಾಮಾನ್ಯ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇಜ್ರಿವಾಲ್, AAP ನಾಯಕರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭ: ಹೈಕೋರ್ಟ್ ನ್ಯಾಯಮೂರ್ತಿ ಹೇಳಿದ್ದೇನು?

ಸನಾತನವನ್ನು ನಾಶ ಮಾಡೋಕೆ ಬಂದಿರೋದು: ಸಿಎಂ ವಿಜಯ್'ರ TVK ಶಾಸಕ ಮುಸ್ತಫಾ ಹೇಳಿಕೆ ವಿವಾದ, Video!

ದೆಹಲಿ ಸರ್ಕಾರಿ ನೌಕರರಿಗೆ ವಾರಕ್ಕೆ 2 ದಿನ ವರ್ಕ್ ಫ್ರಮ್ ಹೋಮ್; 6 ತಿಂಗಳು ಹೊಸ ವಾಹನ ಖರೀದಿ ಮಾಡುವಂತಿಲ್ಲ!

NEET ರದ್ದು: ಮೂರನೇ ಬಾರಿ ಪರೀಕ್ಷೆ ಬರೆದಿದ್ದ ವೈದ್ಯಕೀಯ ಆಕಾಂಕ್ಷಿ ನೇಣಿಗೆ ಶರಣು

ಇದು ನಮ್ಮ ಸಂಬಂಧದ ಅಂತ್ಯ..: 4 ವರ್ಷಗಳ ದಾಂಪತ್ಯಕ್ಕೆ ಕೊನೆಗೂ ತಿಲಾಂಜಲಿ ಹಾಡಿದ KGF ಖ್ಯಾತಿಯ ಮೌನಿ ರಾಯ್

SCROLL FOR NEXT