ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: Bank locker ನಿಂದ 15 ಲಕ್ಷ ರೂ ಮೌಲ್ಯದ ಚಿನ್ನಾಭರಣ ಎಗರಿಸಿದ್ದ ಇಬ್ಬರು ನೌಕರರ ಬಂಧನ

ಬ್ಯಾಂಕ್ ಮ್ಯಾನೇಜರ್ ಎಸ್ ಪಿ ಸಿರಿಷಾ (32) ಜನವರಿಯಲ್ಲಿ ಬಸವೇಶ್ವರನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅವರ ಲಾಕರ್‌ನಿಂದ ಸುಮಾರು 200 ಗ್ರಾಂ ತೂಕದ ಮತ್ತು ಸುಮಾರು 15 ಲಕ್ಷ ರೂ. ಮೌಲ್ಯದ ಆಭರಣಗಳು ಕಾಣೆಯಾಗಿವೆ ಎಂದು ವರದಿಯಾಗಿತ್ತು.

ಬೆಂಗಳೂರು: ಬಸವೇಶ್ವರನಗರದ ಬಿಇಎಂಎಲ್ ಲೇಔಟ್‌ನಲ್ಲಿರುವ ಬ್ಯಾಂಕ್ ಲಾಕರ್‌ನಲ್ಲಿ ಇರಿಸಲಾಗಿದ್ದ ಬ್ಯಾಂಕ್ ಮ್ಯಾನೇಜರ್‌ ಒಬ್ಬರಿಗೆ ಸೇರಿದ ವಜ್ರ ಮತ್ತು ಚಿನ್ನದ ಆಭರಣಗಳನ್ನು ಕದ್ದ ಆರೋಪದ ಮೇಲೆ ಇಬ್ಬರು ಖಾಸಗಿ ಬ್ಯಾಂಕ್ ಉದ್ಯೋಗಿಗಳನ್ನು ಬಂಧಿಸಲಾಗಿದೆ.

ಬ್ಯಾಂಕ್ ಮ್ಯಾನೇಜರ್ ಎಸ್ ಪಿ ಸಿರಿಷಾ (32) ಜನವರಿಯಲ್ಲಿ ಬಸವೇಶ್ವರನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅವರ ಲಾಕರ್‌ನಿಂದ ಸುಮಾರು 200 ಗ್ರಾಂ ತೂಕದ ಮತ್ತು ಸುಮಾರು 15 ಲಕ್ಷ ರೂ. ಮೌಲ್ಯದ ಆಭರಣಗಳು ಕಾಣೆಯಾಗಿವೆ ಎಂದು ವರದಿಯಾಗಿತ್ತು.

ದೂರಿನ ಆಧಾರದ ಮೇಲೆ, ಪೊಲೀಸರು ಕಾಮಾಕ್ಷಿಪಾಳ್ಯದ ನಿವಾಸಿ ಹರ್ಷಿತ್ (24) ಮತ್ತು ನಗರದ ಆಗ್ನೇಯ ಪೊಲೀಸ್ ವಿಭಾಗದಲ್ಲಿ ವಾಸಿಸುವ ಐಶ್ವರ್ಯಾ (27) ಅವರನ್ನು ಬಂಧಿಸಿದ್ದಾರೆ. ಹರ್ಷಿತ್ ಕ್ಷೇತ್ರ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರೆ, ಐಶ್ವರ್ಯಾ ಲಾಕರ್‌ನ ಸುರಕ್ಷಿತ ಕಸ್ಟಡಿಯ ಉಸ್ತುವಾರಿ ವಹಿಸಿದ್ದರು. ಇಬ್ಬರೂ ಕಳೆದ ಐದು ವರ್ಷಗಳಿಂದ ಬ್ಯಾಂಕಿನೊಂದಿಗೆ ಸಂಬಂಧ ಹೊಂದಿದ್ದರು.

ವಿದ್ಯಾಮಾನ ನಗರದ ನಿವಾಸಿ ಸಿರಿಷಾ, ಮೇ 2024 ರಲ್ಲಿ ಲಾಕರ್‌ನಲ್ಲಿ ಇರಿಸಿದ್ದ ಬೆಲೆಬಾಳುವ ವಸ್ತುಗಳನ್ನು ತನ್ನ ಸಹೋದ್ಯೋಗಿಗಳಿಗೆ ತೋರಿಸಿದ್ದರು. ಆಭರಣಗಳ ಜೊತೆಗೆ, ಅವರ ಮಾರ್ಕ್ ಕಾರ್ಡ್‌ಗಳು, ಚೆಕ್ ಪುಸ್ತಕಗಳು ಮತ್ತು ಇತರ ದಾಖಲೆಗಳನ್ನು ಸಹ ಒಳಗೆ ಇಡಲಾಗಿತ್ತು.

ಸಿರಿಷಾ ತನ್ನ ಪರ್ಸ್ ಅನ್ನು ಮರೆತು ಬಿಟ್ಟು ಹೋಗಿದ್ದ ವೇಳೆ ಆರೋಪಿ ಆಕೆಯ ಲಾಕರ್‌ನ ಕೀಲಿಗಳನ್ನು ತೆಗೆದುಕೊಂಡಿದ್ದ ಎಂದು ಅಧಿಕಾರಿಯೊಬ್ಬರು ಹೇಳಿದರು. ಲಾಕರ್‌ಗೆ ಪ್ರವೇಶಿಸಲು ಎರಡು ಸೆಟ್ ಕೀಗಳು ಬೇಕಾಗಿದ್ದವು, ಒಂದು ಗ್ರಾಹಕರದ್ದಾಗಿದ್ದು, ಇನ್ನೊಂದು ಸೇಫ್ ಕಸ್ಟಡಿಯಲ್ಲಿರುವ ವ್ಯಕ್ತಿಯ ಬಳಿ ಇತ್ತು. ಎರಡನೇ ಸೆಟ್ ಕೀಗಳನ್ನು ಐಶ್ವರ್ಯಾ ಹೊಂದಿದ್ದ ಕಾರಣ, ಲಾಕರ್ ತೆರೆಯಲು ಹರ್ಷಿತ್ ಜೊತೆ ಸಂಚು ರೂಪಿಸಿದಳು. ಈ ಇಬ್ಬರು ವಿದ್ಯುತ್ ವೈಫಲ್ಯಕ್ಕಾಗಿ ಕಾಯುತ್ತಿದ್ದರು, ಏಕೆಂದರೆ ಕರೆಂಟ್ ಇರದ ವೇಳೆ ಸಿಸಿಟಿವಿಗಳು ಕಾರ್ಯನಿರ್ವಹಿಸುತ್ತಿರಲಿಲ್ಲ.

ಸಿರಿಷಾ ತನ್ನ ಕೀಲಿಗಳನ್ನು ಕಳೆದುಕೊಂಡಿರುವುದಾಗಿ ತಿಳಿದು ಕೊಂಡಿದ್ದರು. ಬ್ಯಾಂಕಿನ ವರ್ಷಾಂತ್ಯದ ಲೆಕ್ಕಪರಿಶೋಧನೆಯ ಸಮಯದಲ್ಲಿ, ಪ್ರೋಟೋಕಾಲ್ ಪ್ರಕಾರ ಆಕೆ ಬೀಗ ತೆಗೆದು ನೋಡಿದಾಗ ಅವರ ಎಲ್ಲಾ ಆಭರಣಗಳು ಕಾಣೆಯಾಗಿರುವುದು ತಿಳಿದುಬಂದಿದೆ.

"ಹೊರಗಿನವರಿಗೆ ಆ ಪ್ರದೇಶಕ್ಕೆ ಪ್ರವೇಶವಿಲ್ಲದ ಕಾರಣ, ಅದು ಒಳಗಿನ ಕೆಲಸ ಎಂದು ಸ್ಪಷ್ಟವಾಯಿತು" ಎಂದು ಅಧಿಕಾರಿಯೊಬ್ಬರು ಹೇಳಿದರು. ಹೆಚ್ಚಿನ ವಿಚಾರಣೆಗಾಗಿ ಬರುವಂತೆ ಸೂಚಿಸಿದಾಗ ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡರು. ನಂತರ ಅವರು ನಿರೀಕ್ಷಣಾ ಜಾಮೀನು ಪಡೆದರು, ವಿಚಾರಣೆಯ ನಂತರ, ಅಪರಾಧವನ್ನು ಒಪ್ಪಿಕೊಂಡರು. ಅವರು ಮಾರಾಟ ಮಾಡಿದ್ದ 170 ಗ್ರಾಂ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡರು. ಮನೆ ನಿರ್ಮಿಸುತ್ತಿದ್ದ ಐಶ್ವರ್ಯಾ ಮತ್ತು ಸಾಲ ಪಾವತಿಸುವ ಸಲುವಾಗಿ ಹರ್ಷಿತ್ ಕದ್ದ ಹಣವನ್ನು ಹಂಚಿಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT