ಬೆಂಗಳೂರು: ಭಜರಂಗಿ ನಟಿಯ ಆಭರಣ ಕದ್ದ ಚಾಲಕನ ಬಂಧನ; ದುಬಾರಿ ವಸ್ತುಗಳು ವಶಕ್ಕೆ

ಹತ್ತು ಲಕ್ಷ ರೂಪಾಯಿ ಬೆಳೆಬಾಳುವ ಡೈಮಂಡ್‌ ರಿಂಗ್‌. 3 ಲಕ್ಷ ರೂ. ಮೌಲ್ಯದ ಮತ್ತೊಂದು ರಿಂಗ್‌, ಒಂದೂವರೆ ಲಕ್ಷ ಬೆಳೆಬಾಳುವ ಹ್ಯಾಂಡ್‌ಬ್ಯಾಗ್‌, 75 ಸಾವಿರ ರೂನ ಪರ್ಸ್‌, ದುಬಾರಿ ವಾಚ್‌ ಸೇರಿದಂತೆ 23 ಲಕ್ಷ ರೂಪಾಯಿಯ ವಸ್ತುಗಳು ಕಳ್ಳತನವಾಗಿತ್ತು.
Rukmini Vijayakumar
ರುಕ್ಷ್ಮಿಣಿ ವಿಜಯ್ ಕುಮಾರ್
Updated on

ಬೆಂಗಳೂರು: ಮಂಗಳವಾರ ನಗರ ಪೊಲೀಸರು ತಮಿಳುನಾಡಿನ 45 ವರ್ಷದ ಕ್ಯಾಬ್ ಚಾಲಕನನ್ನು ಬಂಧಿಸಿ, ಸುಮಾರು 23 ಲಕ್ಷ ರೂಪಾಯಿ ಮೌಲ್ಯದ ವಜ್ರಾಭರಣ, ರೋಲೆಕ್ಸ್ ಗಡಿಯಾರ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದ ಬ್ಯಾಗ್ ವಶಪಡಿಸಿಕೊಂಡಿದ್ದಾರೆ.

ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟಿ ರುಕ್ಮಿಣಿ ವಿಜಯಕುಮಾರ್‌ ಅವರ ಬ್ಯಾಗ್‌ನಲ್ಲಿದ್ದ ದುಬಾರಿ ಡೈಮಂಡ್‌ ರಿಂಗ್‌, ಪರ್ಸ್‌, ವಾಚ್‌ ಕಳ್ಳತನವಾಗಿದ್ದು, ಬ್ಯಾಗ್‌ ಕಳ್ಳನನ್ನು ಪೊಲೀಸರು ಹಿಡಿದಿದ್ದಾರೆ. ಬೆಂಗಳೂರಿನ ಕಬ್ಬನ್‌ ಪಾರ್ಕ್‌ಗೆ ನಟಿ ವಾಕಿಂಗ್‌ಗೆ ಬಂದಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಕಾರನ್ನು ಸರಿಯಾಗಿ ಲಾಕ್‌ ಮಾಡದೆ ವಾಕಿಂಗ್‌ಗೆ ತೆರಳಿದ್ದರು. ಅಲ್ಲೇ ಇದ್ದ ಕ್ಯಾಬ್‌ ಚಾಲಕನೊಬ್ಬ ಕಾರಿನಲ್ಲಿದ್ದ ಬ್ಯಾಗ್‌ ಕಳ್ಳತನ ಮಾಡಿದ್ದ. ಈ ಘಟನೆ ಮೇ 11ರಂದು ನಡೆದಿತ್ತು.

ಕೋರಮಂಗಲದ 4 ನೇ ಬ್ಲಾಕ್ ನಿವಾಸಿ ರುಕ್ಮಿಣಿ (42) ಬೆಳಗಿನ ವಾಕಿಂಗ್ ಗಾಗಿ ತನ್ನ ಕಾರಿನಲ್ಲಿ ಕಬ್ಬನ್ ಪಾರ್ಕ್‌ಗೆ ಹೋಗಿದ್ದರು. ನಟಿ ರುಕ್ಮಿಣಿ ವಿಜಯಕುಮಾರ‌ ಅವರು ಚಿನ್ನಸ್ವಾಮಿ ಸ್ಟೇಡಿಯಂ ಸಮೀಪದ ಗೇಟ್‌ ನಂಬರ್‌ 18ರ ಹತ್ತಿರ ಕಾರು ಪಾರ್ಕ್‌ ಮಾಡಿ ಕಬ್ಬನ್‌ ಪಾರ್ಕ್‌ಗೆ ವಾಕಿಂಗ್‌ಗೆ ತೆರಳಿದ್ದರು. ಈ ಸಮಯದಲ್ಲಿ ಕಾರನ್ನು ಸರಿಯಾಗಿ ಲಾಕ್‌ ಮಾಡಿರಲಿಲ್ಲ. ಇವರ ಕಾರಿನೊಳಗೆ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಒಳಗೊಂಡ ಬ್ಯಾಗ್‌ ಇತ್ತು. ಇದನ್ನು ಕ್ಯಾಬ್‌ ಚಾಲಕ ರಾಜ್ ಮಹಮ್ಮದ್‌ ಮಸ್ತಾನ್ ಎಗರಿಸಿದ್ದ. ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ.

Rukmini Vijayakumar
ಬೆತ್ತಲೆಯಾಗಿ, ಮುಖಕ್ಕೆ ಮಾಸ್ಕ್ ಹಾಕಿಕೊಂಡು 85 ಮೊಬೈಲ್ ಕಳ್ಳತನ; ಬೆಂಗಳೂರಿನಲ್ಲೊಬ್ಬ ವಿಚಿತ್ರ ಕಳ್ಳ!

ವರದಿಗಳ ಪ್ರಕಾರ ನಟಿಯ ಬ್ಯಾಗ್‌ನಲ್ಲಿ ಹತ್ತು ಲಕ್ಷ ರೂಪಾಯಿ ಬೆಳೆಬಾಳುವ ಡೈಮಂಡ್‌ ರಿಂಗ್‌ ಇತ್ತು. 3 ಲಕ್ಷ ರೂ.ನ ಮತ್ತೊಂದು ರಿಂಗ್‌, ಒಂದೂವರೆ ಲಕ್ಷ ಬೆಳೆಬಾಳುವ ಹ್ಯಾಂಡ್‌ಬ್ಯಾಗ್‌, 75 ಸಾವಿರ ರೂನ ಪರ್ಸ್‌, ದುಬಾರಿ ವಾಚ್‌ ಸೇರಿದಂತೆ 23 ಲಕ್ಷ ರೂಪಾಯಿಯ ವಸ್ತುಗಳು ಕಳ್ಳತನವಾಗಿತ್ತು.

ಈ ಘಟನೆ ಕುರಿತು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ. ದಯಾನಂದ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಕಾರಿನ ಡೋರ್‌ ಸರಿಯಾಗಿ ಲಾಗ್‌ ಆಗಿರಲಿಲ್ಲ. ಇದನ್ನು ನೋಡಿದ ಕ್ಯಾಬ್‌ ಚಾಲಕ ನೋಡೇ ಬಿಡುವ ಎಂಬಂತೆ ಕಾರಿನ ಹ್ಯಾಂಡಲ್‌ ತಿರುಗಿಸಿದ್ದಾನೆ. ಕಾರಿನ ಬಾಗಿಲು ತೆರೆದುಕೊಂಡಿದೆ. ತಕ್ಷಣ ಕಾರಿನೊಳಗಿದ್ದ ಬ್ಯಾಗ್‌ ಹಿಡಿದುಕೊಂಡು ಪರಾರಿಯಾಗಿದ್ದ. ನಟಿ ದೂರು ನೀಡಿದ ಬಳಿಕ ಪೊಲೀಸರು ಕಳ್ಳನ ಜಾಡು ಪತ್ತೆ ಮಾಡಿ ಹಿಡಿದಿದ್ದಾರೆ.

ನೃತ್ಯ ಸಂಯೋಜಕಿ, ಭರತನಾಟ್ಯ ನರ್ತಕಿ ಮತ್ತು ನಟಿ ಆಗಿ ರುಕ್ಮಿಣಿ ಖ್ಯಾತಿ ಪಡೆದಿದ್ದಾರೆ. ಕನ್ನಡದ ಭಜರಂಗಿ ಸಿನಿಮಾದಲ್ಲಿ ನಂದನಂದನಾ ನೀನು ಶ್ರೀಕೃಷ್ಣ ಹಾಡಿಗೆ ಹೆಜ್ಜೆ ಹಾಕಿದ್ದರು. ಆನಂದ ತಾಂಡವಂ (2009), ಭಜರಂಗಿ (2013), ಕೊಚ್ಚಡೈಯಾನ್ (2014), ಫೈನಲ್ ಕಟ್ ಆಫ್ ಡೈರೆಕ್ಟರ್ (2016), ಕಾಟ್ರು ವೆಲಿಯಿಡೈ (2017), ಮತ್ತು ಸೀತಾ ರಾಮಂ (2022) ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com