ಮಂಗಳೂರು: ಧರ್ಮಸ್ಥಳ ಮೂಲದ ಯುವತಿ ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಆಕಾಂಕ್ಷ ಎಸ್ ನಾಯರ್ (22ವ) ಮೃತ ಯುವತಿ.
22 ವರ್ಷದ ಆಕಾಂಕ್ಷ ಎಸ್ ನಾಯರ್ ಏರೋಸ್ಪೇಸ್ ಉದ್ಯೋಗಿಯಾಗಿದ್ದರು. ಧರ್ಮಸ್ಥಳ ಬಳಿಯ ಬೊಳಿಯಾರ್ ಗ್ರಾಮದ ನಿವಾಸಿ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿ ಪುತ್ರಿ. ಆರು ತಿಂಗಳ ಹಿಂದೆ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗಕ್ಕೆ ಸೇರಿದ್ದರು.
ಪಂಜಾಬಿನ ಎಲ್.ಪಿ.ಯು ಪಗ್ವಾಡ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದುಕೊಂಡಿದ್ದರು. ಎಲ್.ಪಿ.ಯು ಪಗ್ವಾಡ ಕಾಲೇಜಿನಿಂದ ಸರ್ಟಿಫಿಕೇಟ್ ಪಡೆಯಲು ಆಕಾಂಕ್ಷ ಪಂಜಾಬ್ಗೆ ತೆರಳಿದ್ದರು. ಅಲ್ಲಿ ಉಳಿದುಕೊಂಡಿದ್ದ ಕೊಠಡಿಯ 3ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ.
ಈ ವಿಷಯ ತಿಳಿದ ಕೂಡಲೇ ಪಂಜಾಬ್ನ ಜಲಂದರ್ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಯುವತಿ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಹುಟ್ಟಿಕೊಂಡಿದ್ದು, ಪಂಜಾಬ್ನ ಜಲಂದರ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.