ಹೆಬ್ಬಾಳ ಮೇಲ್ಸೇತುವೆ ಮೇಲೆ ಸರಣಿ ಅಪಘಾತ 
ರಾಜ್ಯ

ಬೆಂಗಳೂರು: ಹೆಬ್ಬಾಳ ಫ್ಲೈ ಓವರ್ ಮೇಲೆ ಸರಣಿ ಅಪಘಾತ; ಓರ್ವ ಸಾವು, ಇಬ್ಬರಿಗೆ ಗಾಯ

ಕಸ ತುಂಬಿದ್ದ ಲಾರಿಯ ಮೇಲೆ ಕಲ್ಲು ತುಂಬಿದ್ದ ಟ್ರಕ್ ಪಲ್ಟಿಯಾಗಿದ್ದು, ಲಾರಿ ಚಾಲಕ ಮೃತಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಕಾರು ಡಿಕ್ಕಿಯಾಗಿದೆ. ಮೂರು ವಾಹನಗಳ ನಡುವೆ ಅಪಘಾತ ಸಂಭವಿಸಿದೆ.

ಬೆಂಗಳೂರು: ಹೆಬ್ಬಾಳದ ಕೊಡಿಗೇಹಳ್ಳಿ ಫ್ಲೈ ಓವರ್ ಮೇಲೆ ಭೀಕರ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಲಾರಿ ಚಾಲಕರೊಬ್ಬರು ಸಾವಿಗೀಡಾಗಿದ್ದಾರೆ.

ಕಸ ತುಂಬಿದ್ದ ಲಾರಿಯ ಮೇಲೆ ಕಲ್ಲು ತುಂಬಿದ್ದ ಟ್ರಕ್ ಪಲ್ಟಿಯಾಗಿದ್ದು, ಲಾರಿ ಚಾಲಕ ಮೃತಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಕಾರು ಡಿಕ್ಕಿಯಾಗಿದೆ. ಮೂರು ವಾಹನಗಳ ನಡುವೆ ಅಪಘಾತ ಸಂಭವಿಸಿದೆ.

ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಬರುವ ಮಾರ್ಗದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಹೆಬ್ಬಾಳ ಫ್ಲೈ ಓವರ್ ಮೇಲೆ ಸರಣಿ ಅಪಘಾತ ನಡೆದಿದೆ. 10 ವ್ಹೀಲರ್ ಓಪನ್ ಬಾಡಿ ವಾಹನ, ಕಸದ ಲಾರಿ ಮತ್ತು ಎರ್ಟಿಗಾ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಈ ಪರಿಣಾಮ ರಸ್ತೆ ಮೇಲೆಯೇ ಕಲ್ಲು ತುಂಬಿದ್ದ ಟ್ರಕ್ ಪಲ್ಟಿ ಹೊಡೆದಿದೆ.

ಅಪಘಾತದಲ್ಲಿ ಇಬ್ಬರಿಗೆ ಗಾಯವಾಗಿದ್ದು, ಕಸದ ಲಾರಿ ಚಾಲಕ ಫಯಾಜ್ ಅಹಮ್ಮದ್ ಸಾವನಪ್ಪಿದ್ದಾರೆ. ಕಸದ ಲಾರಿಗೆ ಕಲ್ಲಿನ ಬ್ಲಾಕ್ ತುಂಬಿಕೊಂಡಿದ್ದ 10 ವ್ಹೀಲರ್ ವಾಹನ ಹಿಂಬದಿಯಿಂದ ಡೆಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ಕಲ್ಲು ತುಂಬಿದ್ದ ಟ್ರಕ್​ ರಸ್ತೆಯಲ್ಲೇ ಪಲ್ಟಿ ಹೊಡೆದಿದೆ. ಈ ವೇಳೆ ಕಸದ ಲಾರಿ ಮತ್ತು ಟ್ರಕ್​ ಮಧ್ಯೆ ಸಿಲುಕಿ ಚಾಲಕ ಸಾವನಪ್ಪಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

34 ಮಾನವ ಬಾಂಬ್‌, 400 ಕೆಜಿ RDX 14 ಪಾಕ್ ಭಯೋತ್ಪಾದಕರು! ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ- ಎಲ್ಲೆಡೆ ಕಟ್ಟೆಚ್ಚರ!

'Delhi Metroಗೆ ಹೋಲಿಕೆ ಮಾಡಿದರೆ Bengaluru Metro ದರ ಅತ್ಯಂತ ದುಬಾರಿ': BMRCL, ರಾಜ್ಯ ಸರ್ಕಾರದ ವಿರುದ್ಧ Tejasvi Surya ಕಿಡಿ!

"Dismantle India" Post: 'ಭಾರತವನ್ನು ಕೆಡವಿ, ವಿಭಜಿಸಿ' ಎಂದಿದ ಆಸ್ಟ್ರಿಯಾ ಅರ್ಥಶಾಸ್ತ್ರಜ್ಞನ 'X' ಖಾತೆ ನಿಷೇಧ!

ಇಂಧನ ಬೆಲೆ ಸೇರಿದಂತೆ ಉಕ್ರೇನ್ ಸಂಘರ್ಷದ ಪ್ರತಿಕೂಲ ಪರಿಣಾಮ ಜಾಗತಿಕ ದಕ್ಷಿಣ ದೇಶಗಳ ಮೇಲೆ ಬೀರುತ್ತಿದೆ: UNGA ಯಲ್ಲಿ ಭಾರತ ವಿಷಾದ

ನಾನು ಹೇಳಿದ್ರೂ ಕೇಳೋಲ್ವಾ, ಎಷ್ಟು ಧೈರ್ಯ ನಿನಗೆ? ಮಹಿಳಾ IPS ಅಧಿಕಾರಿ ಜೊತೆ ಅಜಿತ್ ಪವಾರ್ ವಾಗ್ವಾದ; ವಿಡಿಯೋ ವೈರಲ್

SCROLL FOR NEXT