ಸಂಚಾರಿ ಕಾವೇರಿ 
ರಾಜ್ಯ

ಬೆಂಗಳೂರು: ಅಪಾರ್ಟ್'ಮೆಂಟ್ ಗಳಿಗೂ 'ಸಂಚಾರಿ ಕಾವೇರಿ' ಸೌಲಭ್ಯ ವಿಸ್ತರಣೆ

ಅಂತರ್ಜಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಈ ಯೋಜನೆಯನ್ನು ಅಪಾರ್ಟ್‌ಮೆಂಟ್‌ಗಳಿಗೂ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು: ಸಂಚಾರಿ ಕಾವೇರಿ ಯೋಜನೆಯಡಿ ನಿಗದಿತ ದರದಲ್ಲಿ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡುತ್ತಿರುವ ಬೆಂಗಳೂರು ಜಲಮಂಡಳಿ, ಮುಂದುವರಿದು ಅಪಾರ್ಟ್‌ಮೆಂಟ್‌ಗಳಿಗೂ 'ಬಲ್ಕ್ ವಾಟರ್‌ ಬುಕ್ಕಿಂಗ್‌ ಸೇವೆ' ಆರಂಭಿಸಲು ನಿರ್ಧರಿಸಿದೆ.

ಬೆಂಗಳೂರು ಜಲಮಂಡಳಿಯ ಕೆಂದ್ರ ಕಚೇರಿಯಲ್ಲಿ ಮಂಡಳಿಯ ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಮನೋಹರ್‌ ನೇತೃತ್ವದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಬಲ್ಕ್‌ ವಾಟರ್‌ ಬುಕ್ಕಿಂಗ್‌ ಸೇವೆ ನೀಡಲು ನಿರ್ಧರಿಸಲಾಗಿದೆ.

ಬೆಂಗಳೂರು ನಗರದ ಹೊರವಲಯದಲ್ಲಿರುವ ಬಹುತೇಕ ಅಪಾರ್ಟ್‌ಮೆಂಟ್‌ಗಳು ಅಂತರ್ಜಲದ ಮೇಲೆಯೇ ಹೆಚ್ಚು ಅವಲಂಬಿತವಾಗಿವೆ. ಈ ಅಪಾರ್ಟ್‌ಮೆಂಟ್‌ಗಳು ಬೇಸಿಗೆಯಲ್ಲಿ ಬೋರ್‌ವೆಲ್‌ ಬತ್ತಿದಾಗ ಖಾಸಗಿ ಟ್ಯಾಂಕರ್‌ಗಳಿಂದ ನೀರು ಖರೀದಿಸುತ್ತವೆ. ಹಾಗಾಗಿ, ಅಂತರ್ಜಲದ ಮೇಲಿನ ಅವಲಂಬನೆ ಕಡಿಮೆ ಮಾಡುವುದು ಮತ್ತು ಅವರಿಗೂ ಶುದ್ಧ ನೀರು ಪೂರೈಕೆ ಮಾಡುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಅವರಿಗೂ ಬಿಐಎಸ್‌ ಪ್ರಮಾಣೀಕೃತ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ 'ಬಲ್ಕ್‌ ವಾಟರ್‌ ಬುಕ್ಕಿಂಗ್‌ ವ್ಯವಸ್ಥೆ ಸೇವೆ' ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಡಾ. ರಾಮ್‌ ಪ್ರಸಾತ್‌ ಮನೋಹರ್‌ ಅವರು ಹೇಳಿದ್ದಾರೆ.

ಮೊದಲು ಬಂದವರಿಗೆ ಮೊದಲು ಅವಕಾಶ ಆಧಾರಿತ ಬುಕ್ಕಿಂಗ್‌, ಕನಿಷ್ಠ ಒಂದು ತಿಂಗಳ ಮುಂಗಡ ಪಾವತಿ ಅವಶ್ಯಕವಾಗಿದೆ. ಬಲ್ಕ್‌ ಬುಕ್ಕಿಂಗ್‌ ಮೂಲಕ ನಿರಂತರ ಸರಬರಾಜು ಖಚಿತಪಡಿಸಿಕೊಳ್ಳಬಹುದು. ಒಂದು ವರ್ಷದ ಅವಧಿಗೆ ಬುಕ್ಕಿಂಗ್‌ ಮಾಡುವ ವ್ಯವಸ್ಥೆಯೂ ಲಭ್ಯವಿದೆ. ಸಂಚಾರಿ ಕಾವೇರಿ ಯೋಜನೆಯು ಭಾರತದ ಮೊದಲ ತಾಂತ್ರಿಕ ವ್ಯವಸ್ಥೆಯ ಟ್ಯಾಂಕರ್‌ ಯೋಜನೆಯಾಗಿದ್ದು, ಜಿಪಿಎಸ್‌ ನಿಯಂತ್ರಣ, ಪೂರೈಕೆ ಶ್ರೇಣೀಕರಣ ಮತ್ತು ಪೂರೈಕೆ ನಿಯಂತ್ರಣ ಕೇಂದ್ರಗಳ ಮೂಲಕ ಬೆಂಗಳೂರು ನಗರದಲ್ಲಿ ಅವಶ್ಯಕ ನೀರು ಲಭ್ಯವಾಗುವಂತೆ ಮಾಡಲಾಗುತ್ತಿದೆ. ಬುಕ್ಕಿಂಗ್‌ ಮಾಡುವ ಮೂಲಕ ಟ್ಯಾಂಕರ್‌ ನೀರು ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಚಾರಿ ಕಾವೇರಿ ಮೊಬೈಲ್‌ ಆ್ಯಪ್‌ ಹಾಗೂ ವೆಬ್‌ಸೈಟ್‌ ಮುಖಾಂತರ ನೀರಿನ ಬುಕ್ಕಿಂಗ್‌ ಮಾಡಬಹುದಾಗಿದೆ.

ಬಿಡಬ್ಲ್ಯೂಎಸ್‌ಎಸ್‌ಬಿ ಜನರ ಜಲ ಮಂಡಳಿಯಾಗಿ ರೂಪಾಂತರಗೊಳ್ಳುತ್ತಿದೆ. ಮುಂದಿನ ಪೀಳಿಗೆಗೆ ಸುರಕ್ಷಿತ ನೀರಿನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ನಾವು ಹೊಂದಿದ್ದೇವೆ. ಅಂತರ್ಜಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಈ ಯೋಜನೆಯನ್ನು ಅಪಾರ್ಟ್‌ಮೆಂಟ್‌ಗಳಿಗೂ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Demographic manipulation: ಒಳನುಸುಳುವಿಕೆಗಿಂತ ಸಾಮಾಜಿಕ ಸಾಮರಸ್ಯಕ್ಕೆ ಇದೇ 'ದೊಡ್ಡ ಅಪಾಯ'- ಪ್ರಧಾನಿ ಮೋದಿ

RSS Centenary: ಇದೇ ಮೊದಲು; 'ಭಾರತ ಮಾತೆ'ಯ ಚಿತ್ರವುಳ್ಳ 100 ನಾಣ್ಯ ರೂ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ಮೈಸೂರು: ಮುಂದಿನ ವರ್ಷಗಳಲ್ಲೂ ದಸರಾದಲ್ಲಿ ನಾನೇ ಪುಷ್ಪಾರ್ಚನೆ: ಡಿಕೆಶಿ ಕನಸಿಗೆ 'ಕೊಳ್ಳಿ' ಇಟ್ರಾ ಸಿದ್ದರಾಮಯ್ಯ?

DA hike: ಕೇಂದ್ರ ಸರ್ಕಾರಿ ನೌಕರರಿಗೆ 'ದಸರಾ ಗಿಫ್ಟ್' ; ಶೇ. 3 ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಸಂಪುಟ ಅನುಮೋದನೆ

ತಮಿಳುನಾಡು: ಅರುಣಾಚಲೇಶ್ವರ ದೇವಸ್ಥಾನಕ್ಕೆ ಬಂದಿದ್ದ ಆಂಧ್ರ ಮಹಿಳೆ ಮೇಲೆ ಅತ್ಯಾಚಾರ; ಇಬ್ಬರು ಪೊಲೀಸರ ಬಂಧನ!

SCROLL FOR NEXT