ಸಚಿವ ರಾಮಲಿಂಗಾರೆಡ್ಡಿ 
ರಾಜ್ಯ

BMTC: 'ದಿವ್ಯ ದರ್ಶನ' ವೀಕೆಂಡ್ ಟೂರ್ ಪ್ಯಾಕೇಜ್ ಆರಂಭ; ಪ್ರಸಿದ್ಧ ದೇವಾಲಯಗಳ ದರ್ಶನಕ್ಕೆ ಅವಕಾಶ

'ದಿವ್ಯ ದರ್ಶನ' ಬಸ್‌ಗೆ ವಯಸ್ಕರಿಗೆ ರೂ.450 ಹಾಗೂ ಮಕ್ಕಳಿಗೆ ರೂ.350 ದರ ನಿಗದಿಸಲಾಗಿದೆ. ಈ ಬಸುಗಳು ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್ ಬಿಎಂಟಿಸಿ) ಬೆಳಿಗ್ಗೆ 8.30 ಕ್ಕೆ ಆರಂಭ ಆಗಲಿದ್ದು, ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್ ಬಿಎಂಟಿಸಿ) ಸಂಜೆ 6ಕ್ಕೆ ವಾಪಸ್ ಬರಲಿದೆ.

ಬೆಂಗಳೂರು: ವರ್ಷದಲ್ಲಿ 50,000 ಕ್ಕೂ ಹೆಚ್ಚು ಪ್ರಯಾಣಿಕರನ್ನು ಆಕರ್ಷಿಸಿದ ‘ಬೆಂಗಳೂರು ದರ್ಶಿನಿ’ ಮತ್ತು ‘ಬೆಂಗಳೂರು–ಇಶಾ ಫೌಂಡೇಶನ್’ ಟೂರ್ಸ್ ಯಶಸ್ಸಿನೊಂದಿಗೆ ಬೆಂಗಳೂರು ಮಹಾನಗರ ಪಾಲಿಕೆ ಸಂಸ್ಥೆ ಮತ್ತೊಂದು ಟೂರ್ ಪ್ಯಾಕೇಜ್ ‘ದಿವ್ಯ ದರ್ಶನ’ವನ್ನು ಆರಂಭಿಸಿದೆ.

8 ಪ್ರಸಿದ್ದ ದೇವಾಲಯಗಳ ವೀಕ್ಷಣೆಯ ಒನ್ ಡೇ ಟೆಂಪಲ್ ಟೂರ್ ಯೋಜನೆಗೆ ಬುಧವಾರ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ನಗರದ ವ್ಯಾಪ್ತಿಯ ಎಂಟು ದೇವಸ್ಥಾನಗಳ ದರ್ಶನ ಪಡೆಯಲು ಸಾಧ್ಯವಾಗುವಂತ ಪ್ಯಾಕೇಜ್ ಮಾಡಿದ್ದೇವೆ. ಕನಿಷ್ಠ ದರದಲ್ಲಿ ಎಸಿ ಬಸ್‌ನಲ್ಲಿ ದೇವಸ್ಥಾನ ದರ್ಶನ ಪಡೆಯಲು ಇದರಿಂದ ಸಾಧ್ಯವಾಗಲಿದೆ ಎಂದು ಹೇಳಿದರು.

ಈ ಪ್ಯಾಕೇಜ್‌ನಲ್ಲಿ ಬೆಂಗಳೂರಿನ ಪ್ರಮುಖ 8 ದೇವಾಲಯಗಳ ದರ್ಶನ ಮಾಡಿಸಲಾಗುತ್ತದೆ. ಬೆಂಗಳೂರಿನ ಪ್ರಮುಖ ದೇವಾಲಯಗಳಿಗೆ ಒಂದೇ ದಿನದಲ್ಲಿ ಭೇಟಿಮಾಡಬೇಕು ಎಂದುಕೊಂಡವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್. ರಾಮಚಂದ್ರನ್ ಮಾತನಾಡಿ, ಬೆಂಗಳೂರು ದರ್ಶಿನಿ, ಈಶ ಫೌಂಡೇಶನ್‌ಗೆ ತೆರಳುವವರಿಗೆ ಅನುಕೂಲವಾಗುವ ವ್ಯವಸ್ಥೆ ಈಗಾಗಲೇ ಇದೆ. ಇದೀಗ ಬಿಎಂಟಿಸಿ ವತಿಯಿಂದ ಬೆಂಗಳೂರು ನಗರದ ವ್ಯಾಪ್ತಿಯ ಎಂಟು ದೇವಸ್ಥಾನಗಳ ದರ್ಶನ ಪಡೆಯಲು ಸಾಧ್ಯವಾಗುವಂತ ಪ್ಯಾಕೇಜ್ ಮಾಡಿದ್ದೇವೆ. ಕಡಿಮೆ ದರದಲ್ಲಿ ಎಸಿ ಬಸ್‌ನಲ್ಲಿ ದೇವಸ್ಥಾನ ದರ್ಶನ ಪಡೆಯಲು ಇದರಿಂದ ಸಾಧ್ಯವಾಗಲಿದೆ ಎಂದರು.

ಮುಂದಿನ ದಿನಗಳಲ್ಲಿ ನಿಸರ್ಗ, ವಾಸ್ತುಶಿಲ್ಪ ಥೀಮ್ ಅಡಿ ಈ ರೀತಿಯ ಪ್ಯಾಕೇಜ್ ಮಾಡುವ ಉದ್ದೇಶವಿದೆ. ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ನಂದಿಬೆಟ್ಟ ಸೇರಿ ಇತರೆಡೆ ವಿಶೇಷ ಬಸ್ ಕಲ್ಪಿಸುವಂತೆ ಬೇಡಿಕೆ ಇದೆ. ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಈ ಪ್ಯಾಕೇಜ್ ಒಳಗೊಂಡಿಲ್ಲ ಎಂದು ತಿಳಿಸಿದರು.

'ದಿವ್ಯ ದರ್ಶನ' ಬಸ್‌ಗೆ ವಯಸ್ಕರಿಗೆ ರೂ.450 ಹಾಗೂ ಮಕ್ಕಳಿಗೆ ರೂ.350 ದರ ನಿಗದಿಸಲಾಗಿದೆ. ಈ ಬಸುಗಳು ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್ ಬಿಎಂಟಿಸಿ) ಬೆಳಿಗ್ಗೆ 8.30 ಕ್ಕೆ ಆರಂಭ ಆಗಲಿದ್ದು, ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್ ಬಿಎಂಟಿಸಿ) ಸಂಜೆ 6ಕ್ಕೆ ವಾಪಸ್ ಬರಲಿದೆ.

ಮೇ 31ಕ್ಕೆ ಮೊದಲ ಟ್ರಿಪ್ ಆರಂಭವಾಗಲಿದ್ದು, ಪ್ರತಿ ಶನಿವಾರ, ಭಾನುವಾರ ಹಾಗೂ ಸಾರ್ವತ್ರಿಕ ರಜೆ ದಿನಗಳಂದು ಮಾತ್ರ ಈ ಪ್ಯಾಕೇಜ್ ಸಿಗಲಿದೆ.

ಮುಂಗಡ ಆಸನಗಳನ್ನು ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ನಲ್ಲಿ ಕಾಯ್ದಿರಿಸಿ ಕೊಳ್ಳಬಹುದು. ಅಥವಾ ಬಿಎಂಟಿಸಿ ಸಹಾಯವಾಣಿ 080 22483777, 7760991170 ಸಂಪರ್ಕಿಸಿ ಟಿಕೆಟ್ ಕಾಯ್ದಿರಿಸಬಹುದು.

ಎಂಟು ದೇವಸ್ಥಾನಗಳು ಯಾವುವು?

  • ಗಾಳಿ ಆಂಜನೇಯ ಸ್ವಾಮೀ ದೇವಸ್ಥಾನ

  • ರಾಜರಾಜೇಶ್ವರಿ ದೇವಸ್ಥಾನ

  • ಶೃಂಗಗಿರಿ ಶ್ರೀ ಷಣ್ಮುಖ ದೇವಸ್ಥಾನ

  • ದೇವಿ ಕರುಮಾರಿ ಅಮ್ಮನವರ ದೇವಸ್ಥಾನ

  • ಓಂಕಾರ ಹೀಲ್ಸ್

  • ಇಸ್ಕಾನ್‌ ದೇವಸ್ಥಾನ (ವಸಂತಪುರ) ವೈಕುಂಠ

  • ಬನಶಂಕರಿ ದೇವಸ್ಥಾನ

  • ಆರ್ಟ್ ಆಫ್ ಲಿವಿಂಗ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT