ಓಂ ಪ್ರಕಾಶ್  
ರಾಜ್ಯ

ನಿವೃತ್ತ ಡಿಜಿಪಿ ಓಂ ಪ್ರಕಾಶ್ ದೇಹದ ಮೇಲೆ 34 ಗಾಯದ ಗುರುತು, ನಾಲ್ಕೈದು ಬಾರಿ ಇರಿತ; ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗ

ಕೃತಿ ತನ್ನ ಅರ್ಜಿಯಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಹಲವಾರು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಬೆಂಗಳೂರು: ಪತ್ನಿಯಿಂದಲೇ ಬರ್ಬರವಾಗಿ ಕೊಲೆಯಾದ ಮಾಜಿ ಪೊಲೀಸ್ ಮಹಾನಿರ್ದೇಶಕ ಮತ್ತು ಇನ್ಸ್‌ಪೆಕ್ಟರ್ ಜನರಲ್ ಓಂ ಪ್ರಕಾಶ್ ಅವರ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗವಾಗಿದೆ. ಓಂ ಪ್ರಕಾಶ್ ದೇಹದ ಮೇಲೆ 34 ಗಾಯಗಳಿದ್ದು, ಅದರಲ್ಲಿ ತಲೆಯ ಹಿಂಭಾಗ, ಕುತ್ತಿಗೆ ಮತ್ತು ಬೆನ್ನಿನ ಮೇಲೆ 4–5 ಬಾರಿ ಇರಿದಿರುವ ಗಾಯಗಳಿದ್ದವು ಎಂದು ತಿಳಿದುಬಂದಿದೆ.

ಪ್ರಕರಣದ ಎರಡನೇ ಆರೋಪಿ ಪ್ರಕಾಶ್ ಅವರ ಮಗಳು ಕೃತಿ ಅವರ ಬೆರಳಚ್ಚುಗಳು ಇರುವುದನ್ನು ಬೆರಳಚ್ಚು ತಜ್ಞರು ದೃಢಪಡಿಸಿದ್ದಾರೆ. ರೆಫ್ರಿಜರೇಟರ್‌ನ ಕೆಳಗಿನ ಭಾಗದಲ್ಲಿ ಆಕೆಯ ಎಡಗೈ ತೋರುಬೆರಳು ಮತ್ತು ಮಧ್ಯದ ಬೆರಳಿನ ಫಿಂಗರ್ ಪ್ರಿಂಟ್ ಕಂಡುಬಂದಿವೆ.

ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಕೃತಿ ಅವರ ನಿರೀಕ್ಷಣಾ ಜಾಮೀನು ಅರ್ಜಿಗೆ ಕೇಂದ್ರ ಅಪರಾಧ ವಿಭಾಗ ವಿರೋಧ ವ್ಯಕ್ತ ಪಡಿಸಿದೆ (ಸಿಸಿಬಿ), ಪ್ರಕಾಶ್ ಪದೇ ಪದೇ ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾಗಿದ್ದಾರೆ ಎಂದು ಹೇಳಿದೆ. ಕೊಲೆಗೆ ನಾಲ್ಕು ವರ್ಷಗಳ ಮೊದಲು, ಅವರ ಪತ್ನಿ ಪಲ್ಲವಿ ಅವರ ಮೇಲೆ ರುಬ್ಬುವ ಕಲ್ಲಿನಿಂದ ಹಲ್ಲೆ ನಡೆಸಿದ್ದರು, ಇದರಿಂದಾಗಿ ತಲೆಗೆ ಗಾಯಗಳಾಗಿದ್ದವು ಎಂದು ಸಿಸಿಬಿ ತಿಳಿಸಿದೆ.

ಕೊಲೆಗೆ ಹತ್ತು ದಿನಗಳ ಮೊದಲು, ಪ್ರಕಾಶ್ ಮಲಗಿದ್ದಾಗ ಅವರ ಕಿವಿಗೆ ಪಲ್ಲವಿ ಟಾಯ್ಲೆಟ್ ಕ್ಲೀನರ್ ಸುರಿದಿದ್ದಾರೆ ಎಂದು ಆರೋಪಿಸಲಾಗಿದೆ. ಖಿನ್ನತೆಗೆ ಒಳಗಾದ ಅವರು ತಮ್ಮ ಸಹೋದರಿಯ ಮನೆಯಲ್ಲಿ ಆಶ್ರಯ ಪಡೆದರು, ಆದರೆ ಮಗಳು ಕೃತಿ ಅವರನ್ನು ಮನೆಗೆಹಿಂತಿರುಗುವಂತೆ ಒತ್ತಾಯಿಸಿದರು. ಸಿಸಿಬಿ ಪ್ರಕಾರ, ತಮ್ಮ ಮನೆಗೆ ಹಿಂತಿರುಗಿದ ಎರಡು ದಿನಗಳ ನಂತರ ಅವರನ್ನು ಕೊಲೆ ಮಾಡಲಾಯಿತು. ಮೇ 5 ರಂದು ಕೃತಿ ತಮ್ಮ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿ, ನ್ಯಾಯಾಲಯ ಹೊರಡಿಸಿದ್ದ ವಾರಂಟ್ ಅರಿದು ಹಾಕಿದ್ದಾರೆ, ಅವರ ಕಸ್ಟಡಿ ವಿಚಾರಣೆ ಅಗತ್ಯ ಎಂದು ಎಂದು ಸಿಸಿಬಿ ಹೇಳಿದೆ.

ಕೃತಿ ತನ್ನ ಅರ್ಜಿಯಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಹಲವಾರು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ, ಆದರೆ ನಿಮ್ಹಾನ್ಸ್ ನಡೆಸಿದ ಎರಡು ದಿನಗಳ ಪರೀಕ್ಷೆಗಳಲ್ಲಿ ಯಾವುದೇ ಪ್ರಮುಖ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ಕಂಡುಬಂದಿಲ್ಲ, ಅವರು ಹಿಂದಿನ ಕಾಯಿಲೆಗಳಿಂದ ಚೇತರಿಸಿಕೊಂಡಿದ್ದಾರೆ ಎಂದು ಹೇಳಿದೆ.

ಕೃತಿ ಪುಸ್ತಕಗಳು ಮತ್ತು ಪ್ಯಾಕೆಟ್‌ಗಳನ್ನು ಹೊರಗೆ ಎಸೆಯುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ ಎಂದು ವರದಿಯಾಗಿದೆ, ಆದರೆ ಇದು ಸಾಕ್ಷ್ಯಗಳನ್ನು ನಾಶಮಾಡುವ ಪ್ರಯತ್ನವಾಗಿರಬಹುದು ಎಂದು ಸಿಸಿಬಿ ತಿಳಿಸಿದೆ. ಅವರು ಬಳಸಿದ ಸ್ನಾನಗೃಹದ ವಾಶ್ ಬೇಸಿನ್ ಬಳಿ ರಕ್ತದ ಕಲೆಗಳು ಕಂಡುಬಂದಿವೆ, ಇವುಗಳನ್ನು ಡಿಎನ್‌ಎ ಪ್ರೊಫೈಲಿಂಗ್‌ಗಾಗಿ ಕಳುಹಿಸಲಾಗುತ್ತಿದೆ.

ಏಪ್ರಿಲ್ 24 ಮತ್ತು 29 ರಂದು ನೋಟಿಸ್ ನೀಡಲಾಗಿದ್ದರೂ, ಕೃತಿ ವಿಚಾರಣೆಗೆ ಹಾಜರಾಗಿರಲಿಲ್ಲ, ಮೇ 3 ರಂದು ಬರುವುದಾಗಿ ತಿಳಿಸಿದ್ದರು. ಆದಾಗ್ಯೂ, ಅವರು ಹಾಜರಾಗಲಿಲ್ಲ. ಮೇ 5 ರಂದು ಕಳುಹಿಸಲಾದ ಅಂತಿಮ ನೋಟಿಸ್ ಅನ್ನು ಸಹ ಅವರು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕೃತಿ ಅವರ ಫೋನ್ ನಲ್ಲಿ ಆಸ್ತಿ ವಿವಾದ ಸಂಬಂಧ ದೂರುದಾರರಾದ ಪ್ರಕಾಶ್ ಮತ್ತು ಅವರ ಮಗನ ನಡುವಿನ ಸಂಭಾಷಣೆಗಳಿವೆ ಎಂದು ಆರೋಪಿಸಲಾಗಿದೆ. ಏಪ್ರಿಲ್ 20 ರಂದು ಕೃತಿ ಮತ್ತು ಪಲ್ಲವಿ ಇಬ್ಬರೂ ಅಪರಾಧ ನಡೆದ ಸ್ಥಳದಲ್ಲಿದ್ದರು ಎಂದು ಫೋನ್ ದಾಖಲೆಗಳು ತಿಳಿಸಿವೆ.

ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, 53 ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಅನಿತಾ ಆರೋಪಿ ಕೃತಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

SCROLL FOR NEXT