ರಾಜ್ಯ

ರಾಮನಗರದಲ್ಲಿ ರೇವ್ ಪಾರ್ಟಿ ಮೇಲೆ ಪೊಲೀಸ್ ದಾಳಿ: 35 ಯುವತಿಯರು ಸೇರಿದಂತೆ 130 ಮಂದಿ ವಶಕ್ಕೆ, Video

ಬೆಂಗಳೂರಿನ ಹೊರವಲಯದಲ್ಲಿರುವ ದೇವಿಗೆರೆ ಕ್ರಾಸ್ ಬಳಿ ನಡೆದ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ 35 ಯುವತಿಯರು ಸೇರಿದಂತೆ 130 ಜನರನ್ನು ಬೆಂಗಳೂರು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬೆಂಗಳೂರಿನ ಹೊರವಲಯದಲ್ಲಿರುವ ದೇವಿಗೆರೆ ಕ್ರಾಸ್ ಬಳಿ ನಡೆದ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ 35 ಯುವತಿಯರು ಸೇರಿದಂತೆ 130 ಜನರನ್ನು ಬೆಂಗಳೂರು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಎಲ್ಲಾ ಆರೋಪಿಗಳು 20 ವರ್ಷ ವಯಸ್ಸಿನವರು. ಕಗ್ಗಲೀಪುರ ಠಾಣೆಗೆ ಬಂದ ಸುಳಿವು ಆಧರಿಸಿ ಶನಿವಾರ ಬೆಳಗಿನ ಜಾವ 3 ಗಂಟೆಗೆ ದಾಳಿ ನಡೆಸಲಾಗಿದ್ದು ಬೆಂಗಳೂರು ದಕ್ಷಿಣ ಎಸ್ಪಿ ಆರ್ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ಪಾರ್ಟಿ ಆಯೋಜಕರನ್ನು ವಶಕ್ಕೆ ಪಡೆದು ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.

ಬಂಧಿತ ಎಲ್ಲ ಯುವಕ-ಯುವತಿಯರು ಮಾದಕ ವಸ್ತುಗಳ ಸೇವನೆ ಪರಿಶೀಲಿಸಲು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆಸ್ತಿ ಸುಹಾಸ್ ಗೌಡ ಎಂಬ ವ್ಯಕ್ತಿಗೆ ಸೇರಿದೆ ಎಂದು ತಿಳಿದುಬಂದಿದೆ. ಈ ಪಾರ್ಟಿಯನ್ನು ವಾಟ್ಸಾಪ್ ಗ್ರೂಪ್ ಸಂದೇಶದ ಮೂಲಕ ಆಯೋಜಿಸಲಾಗಿತ್ತು. ಗಾಂಜಾ ಸೇವನೆ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.

ಈ ಪ್ರಾಪರ್ಟಿಗೆ ಯಾವುದೇ ಅನುಮತಿ ಇರಲಿಲ್ಲ ಆದರೂ ಹೋಂಸ್ಟೇ ಆಗಿ ಕಾರ್ಯನಿರ್ವಹಿಸುತ್ತಿತ್ತು. ತನಿಖಾಧಿಕಾರಿಗಳು ಕೆಲ ವಸ್ತುಗಳನ್ನು ವಶಕ್ಕೆ ಪಡೆದಿದ್ದು ಅದನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ಒಳಪಡಿಸಲಾಗುತ್ತದೆ. ಪರವಾನಗಿ ಇಲ್ಲದ ಆಸ್ತಿಯ ಸಂಘಟಕರು ಮತ್ತು ಮಾಲೀಕರನ್ನು ಪ್ರಶ್ನಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

India-Nepal ಸಂಬಂಧ ಬಲವರ್ಧನೆಗೆ ಮಹತ್ವದ ಹೆಜ್ಜೆ; ಪ್ರಧಾನಿ ಮೋದಿ ಜೊತೆ ಬಾಲೆನ್ ಶಾ ದ್ವಿಪಕ್ಷೀಯ ಮಾತುಕತೆ; ಪ್ರವಾಹ ಪರಿಹಾರ ಪ್ಯಾಕೇಜ್, ರೈಲು ಸಂಪರ್ಕ ವಿಸ್ತರಣೆಗೆ ಒತ್ತು..!

90ಕ್ಕೂ ಹೆಚ್ಚು ಗುಣಮಟ್ಟದ ಪರೀಕ್ಷೆ ನಡೆಸುತ್ತೇವೆ; ‘Bromate ನಿಗದಿತ ಮಿತಿಯಲ್ಲಿದೆ, ನಮ್ಮ ಕುಡಿಯುವ ನೀರು ಸುರಕ್ಷಿತ’: FSSAI ಕ್ರಮದ ಬೆನ್ನಲ್ಲೇ Bisleri ಸ್ಪಷ್ಟನೆ..!

ಫ್ರೀಡಂ ಪಾರ್ಕ್‌ನಲ್ಲಿ 7ನೇ ದಿನಕ್ಕೆ ಕಾಲಿಟ್ಟ ಧರಣಿಯಿಂದ ಬಿಗಡಾಯಿಸಿದ "ಆಶಾ" ಆರೋಗ್ಯ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ 17 ಕಾರ್ಯಕರ್ತೆಯರು

Gold Price: ಚಿನ್ನ, ಬೆಳ್ಳಿ ಬೆಲೆ ದಿಢೀರ್ ಭಾರಿ ಏರಿಕೆ; ಬೆಲೆ ವಿವರಗಳು ಇಂತಿವೆ...

ಬದಲಾಗುತ್ತಿರುವ ಭಾರತದ ಆರ್ಥಿಕ ಪಯಣಕ್ಕೆ ಹೊಸ ಕನ್ನಡಿ; ವಾಣಿಜ್ಯ ಪತ್ರಿಕೋದ್ಯಮಕ್ಕೆ The New Indian Express ಹೊಸ ಕೊಡುಗೆ, 'The Financial Standard' ಲೋಕಾರ್ಪಣೆ