ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು. 
ರಾಜ್ಯ

ಮಂಡ್ಯ: ಬಟ್ಟೆ ತೊಳೆಯಲು ನಾಲೆಗೆ ಹೋಗಿದ್ದ ನಾಲ್ವರು ವಿದ್ಯಾರ್ಥಿನಿಯರು ನೀರುಪಾಲು..!

ಮೈಸೂರಿನ ಶಾಂತಿನಗರದಲ್ಲಿರುವ ಮದರಸಾದಿಂದ ಮೂವರು ಸಿಬ್ಬಂದಿಗಳೊಂದಿಗೆ ಒಟ್ಟು 15 ಮಕ್ಕಳು ಟಾಟಾ ಎಸ್‍ ನಲ್ಲಿ ಮಂಡ್ಯದಕೊಪ್ಪಲು ಬಳಿಯ ರಾಮಸ್ವಾಮಿ ಅಣೆಕಟ್ಟೆಯ ನಾಲೆ ಬಳಿ ಬಂದು ತಮ್ಮ ಬಟ್ಟೆ ಒಗೆದು, ಪಾತ್ರೆಗಳನ್ನು ತೊಳೆದು ಒಣಗಲು ಹಾಕಿದ್ದರು.

ಶ್ರೀರಂಗಪಟ್ಟಣ: ಬಟ್ಟೆ ತೊಳೆಯಲು ನಾಲೆಗೆ ಹೋಗಿದ್ದ ನಾಲ್ವರು ವಿದ್ಯಾರ್ಥಿನಿಯರು ನೀರುಪಾಲಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಾದೇವಪುರ ಬೋರೆ ಗ್ರಾಮದ ರಾಮಸ್ವಾಮಿ ನಾಲೆಯಲ್ಲಿ ಭಾನುವಾರ ನಡೆದಿದೆ.

ಮೃತರನ್ನು ಅಫ್ರಿನ್ (13), ಹನಿ (14), ತರ್ಬಿಮ್ (13) ಮತ್ತು ಆಯೇಷಾ (14) ಎಂದು ಗುರುತಿಸಲಾಗಿದೆ. ಮೈಸೂರಿನ ಶಾಂತಿನಗರದಲ್ಲಿರುವ ಮದರಸಾದಿಂದ ಮೂವರು ಸಿಬ್ಬಂದಿಗಳೊಂದಿಗೆ ಒಟ್ಟು 15 ಮಕ್ಕಳು ಟಾಟಾ ಎಸ್‍ ನಲ್ಲಿ ಮಂಡ್ಯದಕೊಪ್ಪಲು ಬಳಿಯ ರಾಮಸ್ವಾಮಿ ಅಣೆಕಟ್ಟೆಯ ನಾಲೆ ಬಳಿ ಬಂದು ತಮ್ಮ ಬಟ್ಟೆ ಒಗೆದು, ಪಾತ್ರೆಗಳನ್ನು ತೊಳೆದು ಒಣಗಲು ಹಾಕಿದ್ದರು.

ನಂತರ ಎಲ್ಲರೂ ಮೈಸೂರಿಗೆ ಮತ್ತೆ ಹೊರಡುವ ವೇಳೆ ಅಣೆಕಟ್ಟೆ ಬಳಿ ಬಟ್ಟೆ, ಪಾತ್ರೆಗಳನ್ನು ತರಲು ಹೋದ ಓರ್ವ ವಿದ್ಯಾರ್ಥಿ ಕಾಲು ಜಾರಿ ನಾಲೆಗೆ ಬಿದ್ದು ಕೊಚ್ಚಿ ಹೋಗಿದ್ದಾನೆ. ಇದನ್ನು ನೋಡಿದ ಇತರೆ ವಿದ್ಯಾರ್ಥಿನಿಯರು ಆತನನ್ನು ರಕ್ಷಿಸಲು ಒಬ್ಬರಂತೆ ಒಬ್ಬರು ಸೇರಿ ಒಟ್ಟು ಆರು ಮಂದಿ ನಾಲೆಗೆ ಬಿದ್ದು ನೀರಲ್ಲಿ ಕೊಚ್ಚಿ ಹೋಗಿದ್ದರು.

ಈ ವೇಳೆ ಸ್ಥಳೀಯರು ಮೂವರನ್ನು ನೀರಿನಿಂದ ರಕ್ಷಣೆ ಮಾಡಿ ಹೊರಕ್ಕೆ ತಂದು ಆಸ್ಪತ್ರೆಗೆ ದಾಖಲಿಸಿದ್ದರು. ಓರ್ವ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ವಿದ್ಯಾರ್ಥಿ ಸೇರಿದಂತೆ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾತ್ರಿಯಿಂದಲೇ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಕತ್ತಲಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಂಡು ಭಾನುವಾರ ಮುಂದುವರೆಸಿ ನಾಲೆಯಲ್ಲಿ ಕೊಚ್ಚಿ ಹೋಗಿದ್ದ ಶವಗಳನ್ನು ಹುಡುಕಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ದುಬೈ ಏರ್‌ಪೋರ್ಟ್‌ ಬಳಿ ಡ್ರೋನ್‌ ದಾಳಿ; ವಿಮಾನ ಸಂಚಾರ ತಾತ್ಕಾಲಿಕ ಸ್ಥಗಿತ, 'Hormuz' ರಕ್ಷಣೆಗೆ NATO ನೆರವು ಕೋರಿದ ಟ್ರಂಪ್

ಹಾರ್ಮುಜ್ ನಿಂದ ದೇಶಕ್ಕೆ ತೈಲ ಹಡಗುಗಳ ಸುಗಮ ಸಂಚಾರ: ಇರಾನ್ ನ ಭಾರತ ಒಪ್ಪಿಸಿದ್ದು ಹೇಗೆ?: ಜೈಶಂಕರ್ ಬಿಚ್ಚಿಟ್ಟ ಮಾಹಿತಿ ಇದು...

ಒಡಿಶಾದ SCB ವೈದ್ಯಕೀಯ ಕಾಲೇಜಿನಲ್ಲಿ ಭಾರೀ ಅಗ್ನಿ ಅವಘಡ: ಕನಿಷ್ಠ 10 ಮಂದಿ ಸಾವು, ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ

ಗಡುವು ಮೀರಿ 5 ತಿಂಗಳಾದರೂ ಮುಕ್ತಾಯಗೊಳ್ಳದ ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನವೀಕರಣ ಕಾಮಗಾರಿ!

ರಾಜ್ಯಸಭೆಗೆ 26 ಮಂದಿ ಅವಿರೋಧ ಆಯ್ಕೆ: 3ರಾಜ್ಯಗಳಲ್ಲಿ ಬಿಗ್ ಫೈಟ್; ಮೇಲ್ಮನೆಯಲ್ಲಿ ಬಿಜೆಪಿಗೆ ಮತ್ತಷ್ಟು ಬಲ!

SCROLL FOR NEXT