ಸಾಂದರ್ಭಿಕ ಚಿತ್ರ 
ರಾಜ್ಯ

ವಿಜಯಪುರದಲ್ಲಿ ಮತ್ತೆ ಕಂಪಿಸಿದ ಭೂಮಿ; ರಿಕ್ಟರ್ ಮಾಪಕದಲ್ಲಿ 2.9 ತೀವ್ರತೆ ದಾಖಲು!

ಬೆಳಿಗ್ಗೆ 7.49ಕ್ಕೆ ಭೂಮಿ ಕಂಪಿಸಿದ್ದು, ವಿಜಯಪುರ ತಾಲ್ಲೂಕಿನ ಭೂತ್ನಾಳ್ ತಾಂಡಾದಿಂದ ವಾಯುವ್ಯಕ್ಕೆ ಸುಮಾರು 3.6 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ.

ವಿಜಯಪುರ: ವಿಜಯಪುರದಲ್ಲಿ ಮಂಗಳವಾರ ಬೆಳಿಗ್ಗೆ ಮತ್ತೆ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 2.9 ತೀವ್ರತೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.

ಬೆಳಿಗ್ಗೆ 7.49ಕ್ಕೆ ಭೂಮಿ ಕಂಪಿಸಿದ್ದು, ವಿಜಯಪುರ ತಾಲ್ಲೂಕಿನ ಭೂತ್ನಾಳ್ ತಾಂಡಾದಿಂದ ವಾಯುವ್ಯಕ್ಕೆ ಸುಮಾರು 3.6 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ.

ಭೂಕಂಪವು ಅಲ್ಪಪ್ರಮಾಣದಲ್ಲಿದ್ದು, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪನದ ತೀವ್ರತೆ ಕಡಿಮೆಯಾಗಿದ್ದು, ಭೂಕಂಪದ ಕೇಂದ್ರಬಿಂದುವಿನಿಂದ 50-60 ಕಿ.ಮೀ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಬಹುದು ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.

ಅಂತಹ ಭೂಕಂಪವು ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಏಕೆಂದರೆ, ತೀವ್ರತೆ ಕಡಿಮೆಯಾಗಿದೆ. ಆದರೂ, ಸ್ಥಳೀಯವಾಗಿ ಕಂಪನದ ಅನುಭವವಾಗಬಹುದು. ಹೀಗಾಗಿ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಅದು ಹೇಳಿದೆ.

ವಿಜಯಪುರ ಜಿಲ್ಲೆ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಕೆಲವು ದಿನಗಳಿಂದ ಭೂಕಂಪಗಳು ಸಂಭವಿಸುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

Flydubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್, 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ: ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ, Video!