ಸೈಯದ್ ಸದಾತ್ ವುಲ್ಲಾ ಸಖಾಫ್ ಸನ್ಮಾನಿಸಿದ ಹಿಂದೂ ಮುಖಂಡರು 
ರಾಜ್ಯ

ರಾಮನಗರ: ಕೋಟ್ಯಂತರ ರೂ ವೆಚ್ಚದಲ್ಲಿ 'ಹಿಂದೂ ದೇವಾಲಯ' ಕಟ್ಟಿಸಿಕೊಟ್ಟ ಮುಸ್ಲಿಂ ಉದ್ಯಮಿ!

ಸೈಯದ್ ಸದಾತ್ ವುಲ್ಲಾ ಸಖಾಫ್ ಅವರನ್ನು ಹಿಂದೂ ಮುಖಂಡರು ಸನ್ಮಾನಿಸಿದ್ದು, ಬೆಳ್ಳಿ‌ ಕಿರೀಟ ತೊಡಿಸಿ, ಹೂವಿನ ಮಳೆ ಸುರಿಸಿ ಜೈಕಾರ ಹಾಕಲಾಗಿದೆ.

ರಾಮನಗರ: ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಬೊಂಬೆನಗರಿ ಚನ್ನಪಟ್ಟಣ ಸಾಕ್ಷಿಯಾಗಿದೆ. ಇಲ್ಲಿನ ಮಂಗಳವಾರಪೇಟೆಯಲ್ಲಿರುವ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಬಸವೇಶ್ವರ ದೇವಾಲಯವನ್ನು ಮುಸ್ಲಿಂ ಉದ್ಯಮಿಯೊಬ್ಬರು ಕೋಟ್ಯಂತರ ರೂ. ವೆಚ್ಚ ಮಾಡಿ ಕಟ್ಟಿಸಿಕೊಟ್ಟಿದ್ದಾರೆ.

ಶಿಥಿಲಗೊಂಡಿದ್ದ ದೇವಾಲಯ ಪುನರ್ ನಿರ್ಮಾಣಕ್ಕೆ ರೂ. 3 ಕೋಟಿ ಹಣವನ್ನ ದೇಣಿಗೆ ನೀಡಿರುವ ಎಸ್. ಕೆ. ಬೀಡಿ ಮಾಲೀಕ ಸೈಯದ್ ಸದಾತ್ ವುಲ್ಲಾ ಸಖಾಫ್ , ನೂತನ ದೇಗುಲದ ಉದ್ಘಾಟನೆ ಹಿನ್ನಲೆ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗುವ ಮೂಲಕ ಮಾದರಿಯಾಗಿದ್ದಾರೆ.

ಸೈಯದ್ ಸದಾತ್ ವುಲ್ಲಾ ಸಖಾಫ್ ಅವರನ್ನು ಹಿಂದೂ ಮುಖಂಡರು ಸನ್ಮಾನಿಸಿದ್ದು, ಬೆಳ್ಳಿ‌ ಕಿರೀಟ ತೊಡಿಸಿ, ಹೂವಿನ ಮಳೆ ಸುರಿಸಿ ಜೈಕಾರ ಹಾಕಲಾಗಿದೆ.

ದೇವಾಲಯ ನಿರ್ಮಾಣಕ್ಕೆ ಇದೇ ಗ್ರಾಮದ ಕೆಂಪಮ್ಮ ಹಾಗೂ ಮೋಟೇಗೌಡರು ತಮ್ಮ ಸ್ವಂತ ಜಾಗ ಬಿಟ್ಟುಕೊಟ್ಟಿದ್ದು, ನಂತರ ಸೈಯದ್ ಉಲ್ಲಾ ಸಖಾಫ್ ಅವರು ಸುಮಾರು 3 ಕೋಟಿಗೂ ಅಧಿಕ ವೆಚ್ಚದಲ್ಲಿ ಕಲ್ಲಿನ ದೇವಸ್ಥಾನ ಕಟ್ಟಿಸಿಕೊಡುವ ಮೂಲಕ ಮಾದರಿಯಾಗಿದ್ದಾರೆ.

ಲೋಕಾರ್ಪಣೆಗೊಂಡ ದೇವಸ್ಥಾನ ರಾಷ್ಟ್ರವಾಸಿಗಳಿಗೆ ಶಾಂತಿ, ಸೌಹಾರ್ದತೆ ಹಾಗೂ ಭಾವೈಕ್ಯತೆಯ ಸಹಬಾಳ್ವೆ ಸಂದೇಶವನ್ನು ಸಾರುತ್ತಿದೆ. ಅದರಲ್ಲೂ ಹಿಂದೂ-ಮುಸ್ಲಿಂ ಒಗ್ಗಟ್ಟಾಗಿರಬೇಕೆಂಬ ಸಂದೇಶ ನೀಡುತ್ತಿರುವುದು ವಿಶೇಷ.

ಈ ಹಿಂದೆಯೂ ಸಂತೇ ಮೊಗೇನಹಳ್ಳಿಯಲ್ಲಿ ಸ್ವಂತ ಹಣದಲ್ಲಿ ವೀರಭದ್ರೇಶ್ವರ ದೇಗುಲವನ್ನು ನಿರ್ಮಾಣ ಮಾಡುವ ಮೂಲಕ ಸೈಯದ್ ಉಲ್ಲಾ ಭಾವೈಕ್ಯತೆ ಮರೆದಿದ್ದರು. ಹಿಂದೂ ದೇವಾಲಯ ಹಾಗೂ ಮುಸ್ಲಿಂ ಗೋರಿಯನ್ನು ಒಂದೇ ಕಾಂಪೌಂಡಿನೊಳಗೆ ನಿರ್ಮಾಣ ಮಾಡುವ ಮೂಲಕ ಮಾದರಿಯಾಗಿದ್ದು, ಇದೀಗ ಮತ್ತೊಂದು ದೇವಸ್ಥಾನ ಕಟ್ಟಿಸಿ ಸೈಯದ್ ಉಲ್ಲಾ ಸಖಾಫ್ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಾರ್ಖಂಡ್‌ ಸಮೀಪ ಚಾತ್ರಾದಲ್ಲಿ ಪತನಗೊಂಡ ರಾಂಚಿ–ದೆಹಲಿ ಏರ್ ಆಂಬ್ಯುಲೆನ್ಸ್: ಎಲ್ಲಾ 7 ಮಂದಿ ಸಾವು-Video

CM ಪಟ್ಟ ಜಟಾಪಟಿ: ಮತ್ತಷ್ಟು ಹರಿತವಾಯ್ತು ದಲಿತ ಸಿಎಂ ಅಸ್ತ್ರ, DKS ವಿರುದ್ಧ ಸಿದ್ದು ಬಣ ಪ್ರತಿತಂತ್ರ..!

ಉಗ್ರರ ವಿರುದ್ಧ 'ಪ್ರಹಾರ್' ನಿರ್ಣಾಯಕ: ಕೇಂದ್ರದಿಂದ ದೇಶದ ಮೊದಲ ಭಯೋತ್ಪಾದನಾ ವಿರೋಧಿ ನೀತಿ ಬಿಡುಗಡೆ!

ರನ್ ರೇಟ್ ಹೆಚ್ಚಿಸಿಕೊಳ್ಳಲು ಜಿಂಬಾಬ್ವೆ ವಿರುದ್ಧ ದಾಖಲೆಯ 254 ರನ್ ಸಿಡಿಸಿದ ವೆಸ್ಟ್ ಇಂಡೀಸ್, ಭಾರತಕ್ಕೆ ಕಂಟಕ!

T20 World Cup 2026: ಜಿಂಬಾಬ್ವೆ ವಿರುದ್ಧ ವೆಸ್ಟ್ ಇಂಡೀಸ್ ಗೆ 107 ರನ್ ಗಳ ಭರ್ಜರಿ ಜಯ

SCROLL FOR NEXT