ನಂದಿನಿ ಹಾಲಿನ ಪ್ಯಾಕೆಟ್ 
ರಾಜ್ಯ

ಮತ್ತೆ ನಂದಿನಿ ಹಾಲಿನ ದರ ಏರಿಕೆ: ಸುಳಿವು ಕೊಟ್ಟ ಡಿ.ಕೆ ಸುರೇಶ್ ಹೇಳಿದ್ದೇನು?

ಹಾಲಿನ ದರ ಹೆಚ್ಚಳ ಬಗ್ಗೆ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಪರೋಕ್ಷವಾಗಿ ಸುಳಿವು ನೀಡಿದ್ದು, ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿಲ್ಲ. ನಾವು ಮಂಡಳಿಗೆ ಮನವಿ ಸಲ್ಲಿಸಿದ್ದೇವೆ.

ಬೆಂಗಳೂರು: ರಾಜ್ಯದಲ್ಲಿ ಮತ್ತೆ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದ್ದು ಈ ಬಗ್ಗೆ ಸ್ವತಃ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಬುಧವಾರ ಮಾಹಿತಿ ನೀಡಿದ್ದಾರೆ.

ಹಾಲಿನ ದರ ಹೆಚ್ಚಳ ಬಗ್ಗೆ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಪರೋಕ್ಷವಾಗಿ ಸುಳಿವು ನೀಡಿದ್ದು, ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿಲ್ಲ. ನಾವು ಮಂಡಳಿಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

ನಮ್ಮ ರಾಜ್ಯದಲ್ಲಿ ಮಾತ್ರ ಕಡಿಮೆ ಬೆಲೆ ಇದೆ ಬೇರೆ ರಾಜ್ಯಗಳಲ್ಲಿ ಹಾಲಿನ ದರ ಇನ್ನೂ‌ ಹೆಚ್ಚಿದೆ. ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿಲ್ಲ. ನಾವು ಮಂಡಳಿಗೆ ಮನವಿ ಸಲ್ಲಿಸಿದ್ದೇವೆ ಇಷ್ಟು ಅಂತ ದರದ ಬಗ್ಗೆ ಹೇಳಿಲ್ಲ. ಅರ್ಧ ಲೀಟರ್ ಮಾರಿದರೆ ನಷ್ಟವಾಗುತ್ತದೆ.

ಒಂದು ಲೀಟರ್ ಹಾಲು ಮಾರಿದರೆ ಲಾಭ ಆಗುತ್ತದೆ. ತುಪ್ಪ ಇವತ್ತು ದರ ಏರಿಕೆ ಮಾಡಲಾಗಿದ್ದು, ಬೇರೆ ಕಂಪನಿಯ ಹಾಲು ಆನ್‌ಲೈನ್‌ ಮಾರ್ಕೆಟಿಂಗ್ ಜಾಸ್ತಿ ಆಗಿದ್ದು, ನಾವು ರೈತರಿಗೆ ಹಾಲು ಕೂಡಲೇ ಹಣ ಕೊಡಬೇಕು. ಬೇರೆ ರಾಜ್ಯಗಳು ಹೆಚ್ಚು ಹಣ ಬಾಕಿ ಉಳಿಸಿಕೊಂಡಿಲ್ಲ ಅನ್ಸುತ್ತೆ ಎಂದು ಡಿಕೆ ಸುರೇಶ್ ಹೇಳಿದರು.

50 ಲಕ್ಷ ಲೀಟರ್ ಹಾಲಿಗೆ ನಮ್ಮ ಕೈಯಿಂದಲೇ ರೈತರಿಗೆ ಹಣ ಕೊಡುತ್ತಿದ್ದೇವೆ

ನಮ್ಮಲ್ಲಿ 95 ಲಕ್ಷದಿಂದ 1 ಕೋಟಿ ಲೀಟರ್ ಹಾಲು ಉತ್ಪತ್ತಿಯಾಗುತ್ತದೆ. ಆದರೆ 50 ಲಕ್ಷ ಲೀಟರ್ ಹಾಲು ಮಾತ್ರ ಮಾರಾಟ ಆಗುತ್ತದೆ. ಸರ್ಕಾರ ಹಾಲಿನ ಮೇಲೆ ದರ ಹೆಚ್ಚಳ ಮಾಡಿರುವ 4 ರುಪಾಯಿಯನ್ನ ರೈತರಿಗೆ ಕೊಡಲು ಸೂಚಿಸಿದ್ದೇವೆ.

50 ಲಕ್ಷ ಲೀಟರ್ ಮಾರಾಟ ಮಾಡುವುದಕ್ಕೆ ಮಾತ್ರ ನಮಗೆ ಹಣ ಬರುತ್ತಿದೆ. ಉಳಿದ 50 ಲಕ್ಷ ಲೀಟರ್ ಹಾಲಿಗೆ ನಮ್ಮ ಕೈಯಿಂದ ರೈತರಿಗೆ ಹಣ ಕೊಡುತ್ತಿದ್ದೇವೆ. ಸದ್ಯ ಬೆಣ್ಣೆ ಮತ್ತು ತುಪ್ಪಕ್ಕೆ ಬೇಡಿಕೆ ಇದ್ದು ಈಗ ನಾವು ತುಪ್ಪಕ್ಕೆ ನಿಗದಿ ಮಾಡಿರುವ ಮಾರುಕಟ್ಟೆಗಿಂತ ಕಡಿಮೆಯಿದೆ. ಆದರೆ ಗುಣಮಟ್ಟದಲ್ಲಿ ನಾವೇ ಮುಂಚೂಣಿಯಲ್ಲಿದ್ದೇವೆ ಎಂದರು.

ಒಕ್ಕೂಟಗಳ ಮನವಿ ಮೇರೆಗೆ ತುಪ್ಪದ ದರ ಜಾಸ್ತಿ ಮಾಡಲಾಗಿದೆ. ಹಾಲಲ್ಲೂ ಕೆಲವು ಕಡೆ ನಮಗೆ ನಷ್ಟವಾಗುತ್ತಿದೆ. ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ನೋಡಬೇಕಿದೆ. ನಮಗೆ ಹಾಲು ಉತ್ಪಾದಕರು ಹಾಗೂ ಒಕ್ಕೂಟಗಳು ದರ ಹೆಚ್ಚಳಕ್ಕೆ ಮನವಿ ಮಾಡಿದ್ದಾರೆ. ಹಾಲು ದರ ಏರಿಕೆ ಮಾಡಲು ಮನವಿ ಮಾಡಿದ್ದೇವೆ.

ನಮಗೆ ಆಗುತ್ತಿರುವ ನಷ್ಟದ ಬಗ್ಗೆ ಸರ್ಕಾರಕ್ಕೆ ತಿಳಿಸಿ ಹಾಲಿನ ದರ ಮತ್ತೆ ಏರಿಕೆ ಮಾಡುವಂತೆ ಮನವಿ ಮಾಡುತ್ತೇವೆ. ಹಾಲಿನ ದರ ಏರಿಕೆ ಮಾಡುತ್ತೇವೆ ಎಂದರೆ ಗಲಾಟೆ ಮಾಡುತ್ತಾರೆ. ಉಳ್ಳವರು ತಿನ್ನುವ ಕಾರಣ ತುಪ್ಪದ (Ghee) ಬೆಲೆ ಏರಿಕೆ ಮಾಡಿದ್ದೇವೆ. ಬೆಣ್ಣೆ ದರವನ್ನು ಏರಿಕೆ ಮಾಡಲು ತಿಳಿಸಿದ್ದೇವೆ. ಬೆಣ್ಣೆ ದರವನ್ನೂ ಪರಿಷ್ಕರಿಸಲಾಗುವುದು ಎಂದು ಡಿಕೆ ಸುರೇಶ್ ತಿಳಿಸಿದರು.

ಇತ್ತೀಚೆಗಷ್ಟೇ ಕೆಎಂಎಫ್ ನಂದಿನ ತುಪ್ಪದ ದರ ಏರಿಕೆ ಮಾಡಿದ್ದು, ನೂತನ ದರ ಇಂದಿನಿಂದಲೇ ಜಾರಿಗೆ ಬಂದಿದೆ. ಅದಾಗಲೇ ಮತ್ತೆ ಹಾಲಿನ ದರ ಏರಿಕೆಗೆ ಸಿದ್ಧತೆ ನಡೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಕರ್ನಾಟಕದ ಗ್ಯಾರಂಟಿ ಮಾದರಿ' ಗುರುತಿಸಿ, ಹೆಚ್ಚಿನ ಆರ್ಥಿಕ ಬೆಂಬಲ ನೀಡಿ: ಕೇಂದ್ರಕ್ಕೆ ಸಿದ್ದರಾಮಯ್ಯ ಆಗ್ರಹ

ಚುನಾವಣಾ ಆಯೋಗ ಕೇಂದ್ರದ ಜತೆ ಸೇರಿ ಪ್ರಜಾಪ್ರಭುತ್ವದ 'ಕತ್ತು ಹಿಸುಕುತ್ತಿದೆ': ಸಿದ್ದರಾಮಯ್ಯ

'ಕೊಟ್ಟ ಮಾತು ಉಳಿಸಿಕೊಳ್ಳಿ': ಕ್ರಿಕೆಟ್ ದಂತಕಥೆ ಸುನೀಲ್ ಗವಾಸ್ಕರ್ ಗೆ ಜೆಮಿಮಾ ಆಗ್ರಹ! Video

SIR ವಿರುದ್ಧ ಕಾನೂನು ಹೋರಾಟಕ್ಕೆ ಕೇರಳ ಸರ್ಕಾರ ನಿರ್ಧಾರ; ಪ್ರತಿಪಕ್ಷಗಳಿಂದಲೂ ಬೆಂಬಲ

ಹರಿಯಾಣದಲ್ಲೂ ಮತಗಳ್ಳತನ: ರಾಹುಲ್ ಹೇಳಿಕೆ ಆಧಾರರಹಿತ ಎಂದ ಚುನಾವಣಾ ಆಯೋಗ

SCROLL FOR NEXT