ರಾಯಚೂರು: 'PhonePe' ಮೂಲಕ 9ನೇ ತರಗತಿ ವಿದ್ಯಾರ್ಥಿನಿಯನ್ನ ಪ್ರೀತಿಯ ಬಲೆಯಲ್ಲಿ ಬೀಳಿಸಿದ್ದ ಯುವಕರನೋರ್ವ ಆಕೆಯನ್ನು ಗರ್ಭಿಣಿ ಮಾಡಿ ಇದೀಗ ಜೈಲು ಸೇರಿದ್ದಾನೆ. ರಾಯಚೂರು ಜಿಲ್ಲೆಯ ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಬಂಧಿತ ಆರೋಪಿಯನ್ನು 25 ವರ್ಷದ ಶಿವಮೂರ್ತಿ ಎಂದು ಗುರುತಿಸಲಾಗಿದೆ. ಆರೋಪಿ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಸಂತ್ರಸ್ತ ಬಾಲಕಿಯ ತಂದೆ ಚಿಕನ್ ಶಾಪ್ ನಡೆಸುತ್ತಿದ್ದರು. ಮಾಂಸ ಖರೀದಿಗೆ ಬಂದಿದ್ದ ಶಿವಮೂರ್ತಿ ಫೋನ್ ಫೇ ಮೂಲಕ ಹಣ ಪಾವತಿಸಿದ್ದಾನೆ.
ಆ ನಂಬರ್ ಪಡೆದ ಶಿವಮೂರ್ತಿ ವಿದ್ಯಾರ್ಥಿನಿಯನ್ನು ಪರಿಚಯಿಸಿಕೊಂಡು ಪ್ರೀತಿಯ ಮಾತುಗಳನ್ನಾಡಲು ಶುರು ಮಾಡಿದ್ದಾನೆ. ನಂತರ ಇಬ್ಬರು ದೈಹಿಕವಾಗಿ ಹತ್ತಿರವಾಗಿದ್ದಾರೆ. ಇನ್ನು ಅಕ್ಟೋಬರ್ 30ರಂದು ಅಪ್ರಾಪ್ತ ಬಾಲಕಿ ಮೂತ್ರ ವಿಸರ್ಜನೆಗೆಂದು ಹೊರಗೆ ಹೋಗಿದ್ದವಳು ಮಿಸ್ಸಿಂಗ್ ಆಗುತ್ತಾಳೆ. ಈ ಸಂಬಂಧ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ.
ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದಾಗ ಬಾಲಕಿ ಗರ್ಭಿಣಿ ಅನ್ನೋ ವಿಷಯ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗರ್ಭಿಣಿಯಾಗಿದ್ದ ವಿದ್ಯಾರ್ಥಿನಿಗೆ ಗರ್ಭಪಾತಕ್ಕೆ ಶಿವಮೂರ್ತಿ ಒತ್ತಾಯಿಸಿದ್ದಾನೆ. ಅಲ್ಲದೆ ಮಾತ್ರೆಗಳನ್ನು ಕೊಟ್ಟಿದ್ದ. ಅತಿ ಹೆಚ್ಚು ಮಾತ್ರೆ ಸೇವಿಸಿದರ ಪರಿಣಾಮ ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದಳು. ಹೀಗಾಗಿ ಆಕೆಯನ್ನು ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.