ಎತ್ತಿನಹೊಳೆ 
ರಾಜ್ಯ

ರಾಜ್ಯಕ್ಕೆ ಕೇಂದ್ರ ಸರ್ಕಾರ ಶಾಕ್: ಎತ್ತಿನಹೊಳೆ, ಶರಾವತಿ ಪಂಪ್‌ ಸ್ಟೋರೇಜ್‌ ಯೋಜನೆಗೆ ತಡೆ..!

ಯೋಜನೆಯ ಮೊದಲ ಹಂತದಲ್ಲಿ ಹಲವು ಕಾಮಗಾರಿಗಳು ಅನಧಿಕೃತವಾಗಿದೆ. ಇಂತಹ ಕಾಮಗಾರಿಗಳಿಂದ ಪರಿಸರದ ಮೇಲೆ ಭಾರಿ ಅನಾಹುತವಾಗಿದೆ ಎಂದು ಕೇಂದ್ರ ಪರಿಸರ ಇಲಾಖೆಯ ಸಲಹಾ ಸಮಿತಿ ಹೇಳಿದೆ.

ನವದೆಹಲಿ: ರಾಜ್ಯದ ಎತ್ತಿನಹೊಳೆ ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರ್ಕಾರ ತಡೆಯೊಡ್ಡಿದ್ದು, ಈ ಮೂಲಕ ರಾಜ್ಯಕ್ಕೆ ಕೇಂದ್ರ ಸರ್ಕಾರ ದೊಡ್ಡ ಶಾಕ್ ನೀಡಿದೆ.

ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಸೇರಿ ದಕ್ಷಿಣ ಕರ್ನಾಟಕದ 7 ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಉದ್ದೇಶ ಹೊಂದಿರುವ ಎತ್ತಿನಹೊಳೆ ಯೋಜನೆಗೆ ಹಂತ 1 ನೀರಾವರಿ ಯೋಜನೆಯ ಮುಂದಿನ ಹಂತಕ್ಕೆ ಕೇಂದ್ರ ಸರ್ಕಾರ ತಡೆಯೊಡ್ಡಿದೆ.

ಯೋಜನೆಯ ಮೊದಲ ಹಂತದಲ್ಲಿ ಹಲವು ಕಾಮಗಾರಿಗಳು ಅನಧಿಕೃತವಾಗಿದೆ. ಇಂತಹ ಕಾಮಗಾರಿಗಳಿಂದ ಪರಿಸರದ ಮೇಲೆ ಭಾರಿ ಅನಾಹುತವಾಗಿದೆ ಎಂದು ಕೇಂದ್ರ ಪರಿಸರ ಇಲಾಖೆಯ ಸಲಹಾ ಸಮಿತಿ ಹೇಳಿದೆ.

ಕಾಮಗಾರಿಗಳನ್ನು ಪರಿಶೀಲಿಸಿದ ಹೊರತೂ ಯೋಜನೆಯ ಮುಂದುವರೆದ ಭಾಗಕ್ಕೆ ಅನುಮತಿ ನೀಡದಂತೆ ಸಲಹೆ ನೀಡಲಾಗಿದೆ.

ಅಕ್ಟೋಬರ್ 27 ರಂದು ನಡೆದ ಕೇಂದ್ರ ಪರಿಸರ ಇಲಾಖೆ ಸಭೆಯಲ್ಲಿ ಎತ್ತಿನ ಹೊಳೆ ಮೊದಲ ಹಂತದ ಯೋಜನೆಯ ಬಗ್ಗೆ ದಾಖಲಾದ ಅನೇಕ ಆರೋಪಗಳ ಬಗ್ಗೆ ಸಲಹಾ ಸಮಿತಿ ಬೆಳಕು ಚೆಲ್ಲಿದ್ದು, ಮೊದಲ ಹಂತದ ಹಲವು ಯೋಜನೆಗಳಿಗೆ ಅಕ್ಷೇಪ ಎತ್ತಿದೆ.

ಇದಲ್ಲದೆ, ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಾಗಿ ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟ ಪ್ರದೇಶದ ಸುಮಾರು 54 ಹಕ್ಟೇರ್ ಅರಣ್ಯ ಪ್ರದೇಶವನ್ನು ಬಳಕೆ ಮಾಡುವ ಕರ್ನಾಟಕ ಸರ್ಕಾರದ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ. ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಸಭೆ ಈ ನಿರ್ಧಾರ ಕೈಗೊಂಡಿದೆ.

ಈ ಮೂಲಕ ಯೋಜನೆ ಜಾರಿಗೆ ಪಟ್ಟು ಹಿಡಿದಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನೆಡೆಯಾಗಿದೆ. ಇದರೊಂದಿಗೆ ಪರಿಸರವಾದಿಗಳು ಸ್ಥಳೀಯರ ಹೋರಾಟಕ್ಕೆ ಗೆಲುವು ಸಿಕ್ಕಂತಾಗಿದೆ.

ಅಕ್ಟೋಬರ್ 27ರಂದು ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಸಭೆ ನಡೆಸಿದ್ದು, ಅದರಲ್ಲಿ ಯೋಜನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ 15,000ಕ್ಕೂ ಹೆಚ್ಚು ಮರಗಳ ಕಡಿತಕ್ಕೆ ಕಾರಣವಾಗುತ್ತದೆ. ಈ ಮರಗಳಲ್ಲಿ ಹಲವು ವಿಶ್ವದ 34 ಜೀವ ವೈವಿಧ್ಯ ಕೇಂದ್ರಗಳಲ್ಲಿ ಒಂದಾದ ಪಶ್ಚಿಮ ಘಟ್ಟಕ್ಕೆ ಮಾತ್ರವೇ ಸೀಮಿತವಾಗಿದೆ. ಅಪರೂಪದ ಪ್ರಾಣಿ ಸಂಕುಲಕ್ಕೆ ಅಪಾಯವಿದೆ. ಭೂ ಸವಕಳಿ, ಭೂಕುಸಿತಕ್ಕೂ ಕಾರಣವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಶರಾವತಿಗೆ ಸಾಗರ ತಾಲೂಕಿನ ತಲಕಳಲೆಯಲ್ಲಿ ಅಣೆಕಟ್ಟು ಕಟ್ಟಲಾ ಗಿದೆ. ಇಲ್ಲಿ ನೀರನ್ನು ವಿದ್ಯುತ್ ಉತ್ಪಾದನೆಗಾಗಿ ಬಳಸಿಕೊಂಡು, ಮುಂದೆ ಗೇರುಸೊಪ್ಪ ಅಣೆಕಟ್ಟೆಗೆ ಬಿಡಲಾಗುತ್ತಿದೆ. ಗೇರುಸೊಪ್ಪದಲ್ಲಿಯೂ ವಿದ್ಯುತ್‌ ಉತ್ಪಾದಿಸಿ, ನಂತರ ಶರಾವತಿ ನದಿ ಹೊನ್ನಾವರದ ಮೂಲಕ ಅರಬ್ಬಿ ಸಮುದ್ರ ಸೇರುತ್ತದೆ. ಆದರೆ, ರಾಜ್ಯ ಸರ್ಕಾರ ಉದ್ದೇಶಿಸಿ ರುವ ಪಂಪ್ಟ್ ಸ್ಟೋರೇಜ್ ಯೋಜನೆಯು, ಗೇರುಸೊಪ್ಪೆದಲ್ಲಿ ವಿದ್ಯುತ್ ಉತ್ಪಾದನೆಗೆ ಬಳಕೆಯಾದ ನೀರನ್ನು ಪುನಃ ತಲಕಳಿಲೆಗೆ ಅಂದರೆ ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಮೇಲಿಕ್ಕಿಗೆ ಕಳಿಸುವ ಗುರಿ ಹೊಂದಿದೆ. ಹಾಗೆ ಗೇರುಸೊಪ್ಪೆದಿಂದ ಎತ್ತಿ ತಂದ ನೀರಿನಿಂದ ಮತ್ತೆ 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವುದು ಯೋಜನೆಯ ಉದ್ದೇಶವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರ ಮೊದಲ ಹಂತದ ಚುನಾವಣೆ: NDA ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಿತೀಶ್ ಕುಮಾರ್ ಹೆಸರು ಪ್ರಸ್ತಾಪಿಸಿದ ಬಿಜೆಪಿ!

Video: ಮಹಾಪಚಾರ, ಪವಿತ್ರ ತಿರುಮಲದಲ್ಲಿ ಮಾಂಸಾಹಾರ ಸೇವಿಸಿದ 'ಸಿಬ್ಬಂದಿಗಳು', TTD ಕಠಿಣ ಕ್ರಮ

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ!

ನಾಯಕತ್ವ ಬದಲಾವಣೆ ಜಟಾಪಟಿ: 5 ವರ್ಷವೂ ನಾನೇ ಸಿಎಂ ಎಂದು ಡಿಕೆಶಿ ನೋಡಿದಾಕ್ಷಣ ಸ್ವರ ಬದಲಿಸಿದ ಸಿದ್ದು, ಊಹಾಪೋಹ ಶುರು

ಕೂಡ್ಲಿಗಿ ಕಾರ್ಯಕ್ರಮದಲ್ಲಿ CM-DCM ನಡುವಿನ ವೈಮನಸ್ಸು ಬಹಿರಂಗ; ಅಕ್ಕ ಪಕ್ಕ ಕುಳಿತರೂ ಮಾತನಾಡದ ಸಿದ್ದು-ಡಿಕೆಶಿ..!

SCROLL FOR NEXT