ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಸಚಿವ ಪರಮೇಶ್ವರ್.  
ರಾಜ್ಯ

ಜೈಲಿನಲ್ಲಿ ಕೈದಿಗಳು ಪಾರ್ಟಿ, ಡ್ಯಾನ್ಸ್: ರಾಜಾತಿಥ್ಯ ಪತ್ತೆಗೆ ಸಮಿತಿ ರಚಿಸಲು ರಾಜ್ಯ ಸರ್ಕಾರ ಮುಂದು, ಇಂದು ಮಹತ್ವದ ಸಭೆ

ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಐಷಾರಾಮಿ ಸವಲತ್ತುಗಳು ದೊರಕುತ್ತಿರುವ ವಿಷಯ ನಮ್ಮ ಸರ್ಕಾರದ ಗಮನಕ್ಕೆ ಬಂದಿದೆ.

ಬೆಂಗಳೂರು: ಪರಪ್ಪನ ಅಗ್ರಹಾರ ಕೈದಿಗಳಿಗೆ ನಿಯಮ ಮೀರಿ ವಿಶೇಷ ಸವಲತ್ತು ನೀಡಿರುವ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಿತಿ ರಚಿಸಲು ಮುಂದಾಗಿದೆ.

ಗೃಹ ಸಚಿವ ಜಿ.ಪರಮೇಶ್ವರ್ ಅವರು ಇಂದು ಜೈಲಿನ ಅಧಿಕಾರಿಗಳೊಂದಿಗೆ ಸಭೆ ಕರೆದಿದ್ದು, ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಪ್ರಕರಣ ಸಂಬಂಧ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಐಷಾರಾಮಿ ಸವಲತ್ತುಗಳು ದೊರಕುತ್ತಿರುವ ವಿಷಯ ನಮ್ಮ ಸರ್ಕಾರದ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ರಜೆಯ ಮೇಲೆ ತೆರಳಿದ್ದರು. ಗೃಹ ಸಚಿವರು ಈ ಬಗ್ಗೆ ಸಭೆ ಕರೆದಿದ್ದಾರೆ. ತಪ್ಪು ಮಾಡಿದವರ ಮೇಲೆ ಗಂಭೀರ ಕ್ರಮ ಕೈಗೊಳ್ಳಲಾಗುವುದು ಹಾಗೂ ಇನ್ನೂ ಮುಂದೆ ಇಂಥದ್ದು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಹೇಳಿದ್ದರು.

ಗೃಹ ಸಚಿವ ಪರಮೇಶ್ವರ್ ಅವರು ಮಾತನಾಡಿ, ಮಂಗಳೂರು, ಬೆಳಗಾವಿ ಮತ್ತು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವಾರು ಜೈಲು ಅಧಿಕಾರಿಗಳನ್ನು ಕೈದಿಗಳಿಗೆ ವಿಶೇಷ ಸವಲತ್ತು ನೀಡಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ, ಆದಾಗ್ಯೂ, ಬೆಂಗಳೂರಿನಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ. ಬಿ. ದಯಾನಂದ ಅವರನ್ನು ಕಾರಾಗೃಹದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದ್ದು, ಅವರು ನಿನ್ನೆ ರಜೆಯಲ್ಲಿದ್ದರು,

ನಾನು ಅವರೊಂದಿಗೆ ಮಾತನಾಡಿದ್ದೇನೆ. ಕಾರಾಗೃಹದಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಲೇ ಇದೆ. ಯಾರೇ ಜವಾಬ್ದಾರರಾಗಿದ್ದರೂ, ಅದು ಸೂಪರಿಂಟೆಂಡೆಂಟ್ ಆಗಿರಲಿ ಅಥವಾ ಕೆಳ ಹಂತದ ಸಿಬ್ಬಂದಿಯಾಗಿರಲಿ ಅವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು, ಈ ಬಗ್ಗೆ ವರದಿಯನ್ನು ಸಲ್ಲಿಸಬೇಕು ಎಂದು ಹೇಳಿದರು.

ಇಂತಹ ಘಟನೆಗಳನ್ನು ಸರ್ಕಾರ ಸಹಿಸುವುದಿಲ್ಲ. ಇಂತಹ ಘಟನೆಗಳು ಸಂಭವಿಸಬಾರದು. ಅಧಿಕಾರಿಗಳು ಕೆಲವೊಮ್ಮೆ ಸಿಬ್ಬಂದಿ ಕೊರತೆ ಇದೆ ಎಂದು ಹೇಳುತ್ತಾರೆ, ಆದರೂ, ಇಂತಹ ಘಟನೆಗಳನ್ನು ಕ್ಷಮಿಸಲ್ಲ. ಅಧಿಕಾರಿಗಳು ತಮ್ಮ ಕೆಲಸವನ್ನು ಸರಿಯಾಗಿ ಮಾಡಬೇಕು. ಮೊಬೈಲ್ ಫೋನ್‌ಗಳು ಮತ್ತು ಟಿವಿಗಳನ್ನು ಅನುಮತಿಸಿದರೆ, ಅದನ್ನು ಜೈಲು ಎಂದು ಕರೆಯಲಾಗುವುದಿಲ್ಲ ಎಂದು ತಿಳಿಸಿದರು.

ಅಧಿಕಾರಿಗಳ ಸಭೆ ಕರೆದು ಭದ್ರತಾ ಲೋಪಗಳ ಬಗ್ಗೆ ಚರ್ಚಿಸುತ್ತೇನೆ. ನಾವು ಈಗಾಗಲೇ ಸಿಸಿಟಿವಿ ಕ್ಯಾಮೆರಾಗಳು ಮತ್ತು ಜಾಮರ್‌ಗಳನ್ನು ಒದಗಿಸಿದ್ದೇವೆ. ಕೆಲವು ಸ್ಥಳಗಳಲ್ಲಿ ಇವುಗಳನ್ನು ಅಳವಡಿಸಲಾಗಿದೆ. ತನಿಖಾ ವರದಿಯನ್ನು ಕೋರಲಾಗಿದ್ದು, ವರದಿಯಿಂದ ತೃಪ್ತರಾಗದಿದ್ದರೆ, ಲೋಪಗಳನ್ನು ಅಧ್ಯಯನ ಮಾಡಲು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ವಿವಿಧ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸುತ್ತೇವೆ. ವೀಡಿಯೊಗಳು ಹಳೆಯದಾಗಿರಲಿ ಅಥವಾ ಹೊಸದಾಗಿರಲಿ ಪರವಾಗಿಲ್ಲ, ಇಂತಹ ಘಟನೆಗಳು ಮತ್ತೆ ಸಂಭವಿಸಬಾರದು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರ ಮೊದಲ ಹಂತದ ಚುನಾವಣೆ: NDA ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಿತೀಶ್ ಕುಮಾರ್ ಹೆಸರು ಪ್ರಸ್ತಾಪಿಸಿದ ಬಿಜೆಪಿ!

Video: ಮಹಾಪಚಾರ, ಪವಿತ್ರ ತಿರುಮಲದಲ್ಲಿ ಮಾಂಸಾಹಾರ ಸೇವಿಸಿದ 'ಸಿಬ್ಬಂದಿಗಳು', TTD ಕಠಿಣ ಕ್ರಮ

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ!

ನಾಯಕತ್ವ ಬದಲಾವಣೆ ಜಟಾಪಟಿ: 5 ವರ್ಷವೂ ನಾನೇ ಸಿಎಂ ಎಂದು ಡಿಕೆಶಿ ನೋಡಿದಾಕ್ಷಣ ಸ್ವರ ಬದಲಿಸಿದ ಸಿದ್ದು, ಊಹಾಪೋಹ ಶುರು

ಕೂಡ್ಲಿಗಿ ಕಾರ್ಯಕ್ರಮದಲ್ಲಿ CM-DCM ನಡುವಿನ ವೈಮನಸ್ಸು ಬಹಿರಂಗ; ಅಕ್ಕ ಪಕ್ಕ ಕುಳಿತರೂ ಮಾತನಾಡದ ಸಿದ್ದು-ಡಿಕೆಶಿ..!

SCROLL FOR NEXT