ಹಾಸನ: ಕಾದಾಟದಲ್ಲಿ ದಂತ ಮುರಿದುಕೊಂಡ ಭೀಮ ಯಾರ ಕಣ್ಣಿಗೂ ಕಾಣದಂತೆ ನಾಪತ್ತೆಯಾಗಿದ್ದು, ಭೀಮನಿಗಾಗಿ ಅರಣ್ಯಾಧಿಕಾರಿಗಳು ತೀವ್ರ ಶೋಧದಲ್ಲಿ ತೊಡಗಿದ್ದಾರೆ.
ಹೌದು.. ಕಾಡಾನೆ ಭೀಮ ಹಾಗೂ ಕ್ಯಾಪ್ಟನ್ ನಡುವೆ ನಡೆದ ಭೀಕರ ಕಾಳಗದಲ್ಲಿ ಕಾಡಾನೆ ಭೀಮ ತನ್ನ ದಂತ ಮುರಿದುಕೊಂಡ ಸುದ್ದಿ ವ್ಯಾಪಕ ವೈರಲ್ ಆಗಿತ್ತು.
ಕಳೆದ ಒಂದು ವಾರದಿಂದ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಹಲವು ಗ್ರಾಮಗಳಲ್ಲಿ ಓಡಾಡುತ್ತಿದ್ದ ಕಾಡಾನೆ ಭೀಮ ಇತ್ತೀಚೆಗೆ ಮತ್ತೊಂದು ಕಾಡಾನೆ ಕ್ಯಾಪ್ಟನ್ ಜೊತೆ ಕಾಣಿಸಿಕೊಂಡಿತ್ತು. ಬೇಲೂರು ತಾಲ್ಲೂಕಿನ ಜಗಬೋರನಹಳ್ಳೀ ಗ್ರಾಮದಲ್ಲಿ ಕಾಡಾನೆ ಭೀಮ ಮತ್ತು ಕ್ಯಾಪ್ಟನ್ ಆನೆಗಳು ಕಾದಾಡಿದ್ದು ಈ ವೇಳೆ ಭೀಮ ಆನೆಯ ದಂತ ಮುರಿದಿದೆ.
ಭೀಕರ ಕಾಳಗ
ಇನ್ನು ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಹಲವು ಗ್ರಾಮಗಳಲ್ಲಿ ಕಾಣಿಸಿಕೊಂಡು ಭೀತಿ ಹುಟ್ಟಿಸಿದ್ದ ಭೀಮ ಬೇಲೂರು ತಾಲ್ಲೂಕಿನ ಜಗಬೋರನಹಳ್ಳೀ ಗ್ರಾಮದಲ್ಲಿ ಕ್ಯಾಪ್ಟನ್ ಕಾಡಾನೆ ಜೊತೆ ಕಾಳಗಕ್ಕೆ ಇಳಿದಿತ್ತು. ಕ್ಯಾಫ್ಟನ್ ಜೊತೆಗಿನ ಕಾದಾಟದಲ್ಲಿ ಭೀಮನ ಒಂದು ದಂತ ಸಂಪೂರ್ಣ ಮುರಿದು ಬಿದ್ದಿದೆ. ಇನ್ನು ಮೂಲಗಳ ಪ್ರಕಾರ ಹೀಗೆ ಮುರಿದು ಬಿದ್ದ ಭೀಮ ಆನೆಯ ದಂತದ ತೂಕವೇ ಬರೊಬ್ಬರಿ 22 ಕೆಜಿ ಇತ್ತು ಎಂದು ಹೇಳಲಾಗಿದೆ.
ನಾಪತ್ತೆಯಾದ ಭೀಮ
ಇನ್ನು ದಂತ ಮುರಿತದ ಬಳಿಕ ತೀವ್ರ ನೋವಿನಲ್ಲಿದ್ದ ಕಾಡಾನೆ ಭೀಮ, ಬಳಿಕ ನಾಪತ್ತೆಯಾಗಿದೆ ಎನ್ನಲಾಗಿದೆ. ಕ್ಯಾಪ್ಟನ್ ಕಾಡಾನೆ ಜೊತೆಗಿನ ಕಾಡಾನೆ ಜೊತೆಗಿನ ಕಾದಾಟದಲ್ಲಿ ಭೀಮ ಆನೆಯ ಕಿವಿ ಕೂಡ ಹರಿದಿದ್ದು, ಭೀಮನಿಗೆ ಕೂಡಲೇ ಚಿಕಿತ್ಸೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈಗಾಗಲೇ ಅರಣ್ಯ ಇಲಾಖೆ ಕೂಡ ಚಿಕಿತ್ಸೆ ಕೊಡಿಸಲು ಸಿದ್ಧ ಎಂದು ಹೇಳಿದೆ. ಆದರೆ ಗಾಯಗೊಂಡ ಕಾಡಾನೆ ಭೀಮ ಮಾತ್ರ ನಾಪತ್ತೆಯಾಗಿದೆ.
ಈಗೆಲ್ಲಿದ್ದಾನೆ?
ಭಾನುವಾರ (ನ.9) ಸಂಜೆ 6:30ರ ಸುಮಾರಿಗೆ ಹಳೆ ಬಿಕ್ಕೋಡು ಬಳಿ ಭೀಮ ಕಾಣಿಸಿಕೊಂಡಿದ್ದ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಕಣ್ತಪ್ಪಿಸಿ ಮರೆಯಾಗಿದ್ದಾನೆ. ದಂತ ಮುರಿದುಕೊಂಡ ಬಳಿಕ ಭೀಮನ ಆರೋಗ್ಯದ ಸ್ಥಿತಿ ಬಗ್ಗೆ ತಿಳಿಯಲು ಭೀಮನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆದರೆ ರಾತ್ರಿಯಿಡಿ ಶೋಧ ನಡೆಸಿದರೂ ಸಹ ಭೀಮನ ಸುಳಿವು ಸಿಕ್ಕಿಲ್ಲ. ಕಾಳಗದಲ್ಲಿ ದಂತ ಮುರಿತದ ಬಳಿಕ ಭೀಮ ಆನೆಗೆ ತೀವ್ರ ರಕ್ತಸ್ರಾವವಾಗಿದ್ದು, ತುರ್ತು ಚಿಕಿತ್ಸೆಯ ಅವಶ್ಯಕತೆ ಇದೆ. ಸ್ಥಳೀಯರು ನೀಡಿದ ಮಾಹಿತಿ ಅನ್ವಯ ಭೀಮ ಆನೆ ಸುಸ್ತಾಗಿದೆ ಎಂದು ಹೇಳಿದ್ದಾರೆ.
ಕಳೆದ ಐದಾರು ವರ್ಷಗಳಿಂದ ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಬೇಲೂರು ತಾಲ್ಲೂಕಿನ ವಿವಿದೆಡೆ ಸಂಚಾರ ಮಾಡುತ್ತಾ, ಶಾಂತವಾಗಿ ಓಡಾಡುತ್ತಿದ್ದ ಭೀಮ ಇದೀಗ ಆತಂಕ ಸೃಷ್ಟಿಸಿದೆ. ಕಳೆದ ಒಂದು ವಾರದಿಂದ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಹಲವು ಗ್ರಾಮಗಳ ಮುಖ್ಯಬೀದಿಯಲ್ಲೇ ನಡೆದು ಹೋಗಿದ್ದ ಭೀಮ, ಇಂದು ಮತ್ತೊಂದು ದೈತ್ಯಾಕಾರದ ಕ್ಯಾಫ್ಟನ್ ಹೆಸರಿನ ಕಾಡಾನೆ ಜೊತೆಗೆ ಓಡಾಡುತ್ತಾ ಭೀತಿ ಸೃಷ್ಟಿಸಿತ್ತು. ಇಂದು ಬೆಳಿಗ್ಗೆ ಬೇಲೂರು ತಾಲ್ಲೂಕಿನ ಜಗಬೋರನಹಳ್ಳೀ ಗ್ರಾಮದಲ್ಲಿ ಎರಡೂ ಆನೆಗಳು ಕಾಳಗ ಶುರುಮಾಡಿದ್ದು, ರೋಷಾವೇಶದಿಂದ ಗ್ರಾಮದೊಳಗೆ ಎಂಟ್ರಿಯಾದ ಭೀಮ, ನೀರಿನ ಟ್ಯಾಂಕರ್ ಪುಡಿಗಟ್ಟಿ, ಎತ್ತಿನ ಗಾಡಿ ಎತ್ತಿ ಬಿಸಾಡಿ ರೌದ್ರಾವತಾರ ಪ್ರದರ್ಶನ ಮಾಡಿತ್ತು.
ಶಾರ್ಪ್ ಶೂಟರ್ ವೆಂಕಟೇಶ್ ಕೊಂದಿದ್ದ ಭೀಮ
2023ರ ಆಗಸ್ಟ್ ತಿಂಗಳಲ್ಲಿ ಬೆನ್ನಿನ ಕೆಳಬಾಗದಲ್ಲಿ ದೊಡ್ಡ ಗಾಯವಾಗಿ ನರಳಾಡಿದ್ದ ಭೀಮನಿಗೆ ಸೆಪ್ಟೆಂಬರ್ 25ರಂದು ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ವೈದ್ಯರ ಮೂಲಕ ಚಿಕಿತ್ಸೆ ಕೊಡಿಸಿದ್ದರು. ಆದರೆ ಅದು ಪರಿಣಾಮಕಾರಿಯಾಗದ್ದರಿಂದ ಆಗಸ್ಟ್ 31ರಂದು ಭೀಮನಿಗೆ ಅರವಳಿಕೆ ಮದ್ದು ನೀಡಿ ಚಿಕಿತ್ಸೆ ನೀಡಲಾಗಿತ್ತು. ಆಪರೇಷನ್ ನಡೆಸುತ್ತಿದ್ದ ವೇಳೆ ಮದವೇರಿದ್ದ ಭೀಮ ಏಕಾ ಏಕಿ ಅಂದಿನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಶಾರ್ಪ್ ಶೂಟರ್ ವೆಂಕಟೇಶ್ ಮೇಲೆ ದಾಳಿ ಮಾಡಿ ಕೊಂದಿತ್ತು.