ಬೆಂಗಳೂರು: ರಾಜ್ಯದ ಐದು ಕಡೆಗಳಲ್ಲಿ ವಿಶ್ವ ದರ್ಜೆ ಗುಣಮಟ್ಟದ ಏರೋಸ್ಪೆಸ್ ಹಾಗೂ ರಕ್ಷಣಾ ಪಾರ್ಕ್ ಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿದೆ.
ಈ ಮೂಲಕ ಅತ್ಯಾಧುನಿಕ ತಂತ್ರಜ್ಞಾನ ಸಾಮರ್ಥ್ಯವನ್ನು ಬಲಪಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೋಮವಾರ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಡಿಕೆ ಶಿವಕುಮಾರ್, ಕೌಶಲಯುಕ್ತ ಪ್ರತಿಭಾವಂತರಿಗೆ ಹೊಸ ಅವಕಾಶ ಸೃಷಿಸುವ ಮೂಲಕ ಏರೋಸ್ಪೆಸ್ ಹಾಗೂ ರಕ್ಷಣಾ ಸರಕುಗಳ ಉತ್ಪಾದನೆಯಲ್ಲಿ ರಾಜ್ಯದ ಮುಂಚೂಣಿಯನ್ನು ಬಲಪಡಿಸುವ ಗುರಿ ಹೊಂದಲಾಗಿದೆ ಎಂದಿದ್ದಾರೆ.
ಬೆಂಗಳೂರು, ಮೈಸೂರು, ಬೆಳಗಾವಿ, ತುಮಕೂರು ಮತ್ತು ಚಾಮರಾಜನಗರದಲ್ಲಿ ಇವುಗಳನ್ನು ಅಭಿವೃದ್ಧಿಪಡಿಸುತ್ತಿದ್ದು, 60,000 ಕೌಶಲ್ಯಯುಕ್ತ ಉದ್ಯೋಗದ ಸೃಷ್ಟಿ ಹಾಗೂ ರೂ.45,000 ಕೋಟಿ ಹೂಡಿಕೆಯನ್ನು ಆಕರ್ಷಿಸುವ ಉದ್ದೇಶ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.