ಡಾ. ನಟರಾಜ್ ತಲಘಟ್ಟಪುರ  
ರಾಜ್ಯ

ಬೆಂಗಳೂರು: ನವೆಂಬರ್ 22 ರಂದು ರೋರಿಕ್-ದೇವಿಕಾ ರಾಣಿ ಜೀವನಾಧಾರಿತ ನಾಟಕ ಸೇರಿ 5 ಕೃತಿಗಳ ಬಿಡುಗಡೆ

ಈ ನಾಟಕವು ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಸ್ವೆತಾಸ್ಲೋವ್ ರೋರಿಕ್ ಮತ್ತು ಪತ್ನಿ ದೇವಿಕಾ ರಾಣಿ ಅವರ ಜೀವನ ಮತ್ತು ಬದುಕಿನ ಕೊನೆಯ ದಿನಗಳ ಅವಸ್ಥೆಯನ್ನು ಆಧರಿಸಿದೆ. ಇ

ಬೆಂಗಳೂರು: ಲೇಖಕ ಡಾ. ನಟರಾಜ್ ತಲಘಟ್ಟಪುರ ಅವರ 'ಬಣ್ಣ ಮೆಚ್ಚಿದವರು' ಕನ್ನಡ ನಾಟಕದ ಇಂಗ್ಲಿಷ್ ಅನುವಾದ 'ಅಡ್ಮೈರರ್ಸ್ ಆಫ್ ಕಲರ್' ಮತ್ತು ಹಿಂದಿ ಅನುವಾದ 'ರಂಗೋನ್ ಕೆ ಉಪಾಸಕ್'' ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.

ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ಬಿ.ಎಲ್. ಶಂಕರ್ ಇದೇ ಶನಿವಾರ (ನವೆಂಬರ್ 22) ಸಂಜೆ 5 ಗಂಟೆಗೆ ಜಯನಗರ 4ನೇ ಬ್ಲಾಕಿನ ಭಾರತ್ ಎಜುಕೇಷನ್ ಸೊಸೈಟಿ ಸಭಾಂಗಣದಲ್ಲಿ ಬಿಡುಗಡೆ ಮಾಡಲಿದ್ದಾರೆ.

ಈ ನಾಟಕವು ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಸ್ವೆತಾಸ್ಲೋವ್ ರೋರಿಕ್ ಮತ್ತು ಪತ್ನಿ ದೇವಿಕಾ ರಾಣಿ ಅವರ ಜೀವನ ಮತ್ತು ಬದುಕಿನ ಕೊನೆಯ ದಿನಗಳ ಅವಸ್ಥೆಯನ್ನು ಆಧರಿಸಿದೆ. ಇದೇ ಸಂದರ್ಭದಲ್ಲಿ ಡಾ. ನಟರಾಜ್ ಅವರು ರಚಿಸಿರುವ ಐತಿಹಾಸಿಕ ನಾಟಕ 'ಬಯಲ ರೂಪ', ನಾಟಕ 'ಬೊಗಸೆ ತುಂಬ ಮಣ್ಣು' ಹಾಗೂ ಕಥಾ ಸಂಕಲನ 'ಮಿಡಿನಾಗರಗಳ ನಡುವೆ' ಸಹ ಬಿಡುಗಡೆ ಆಗಲಿವೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕ ಹಾಗೂ ಪತ್ರಕರ್ತರಾದ ರಘುನಾಥ ಚ.ಹ. ಕೃತಿಗಳ ಕುರಿತು ಮಾತನಾಡಲಿದ್ದಾರೆ. 'ಬಣ್ಣ ಮೆಚ್ಚಿದವರು' ನಾಟಕವನ್ನು ಇಂಗ್ಲಿಷ್ ಗೆ ಅನುವಾದಿಸಿರುವ ಡಾ. ರೇಖಾ ಕೌಶಿಕ್ ಪಿ. ಆರ್. ಹಾಗೂ ಹಿಂದಿಗೆ ಅನುವಾದಿಸಿರುವ ಪ್ರೊ. ಷಾಕಿರಾ ಖಾನಂ ಹಾಗೂ ಲೇಖಕ ಡಾ. ನಟರಾಜ್ ತಲಘಟ್ಟಪುರ ಅವರು ಉಪಸ್ಥಿತರಿರಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಆರ್ಥಿಕ ಬಿಕ್ಕಟ್ಟು: ಇಂಟರ್ನೆಟ್‌ ಸ್ಥಗಿತಗೊಳಿಸಿದರೂ ನಿಲ್ಲದ ಉದ್ವಿಗ್ನತೆ; 13ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ಈವರೆಗೂ 200ಕ್ಕೂ ಹೆಚ್ಚು ಮಂದಿ ಬಲಿ

4 ವರ್ಷಗಳಲ್ಲಿ ಮೊದಲ ಬಾರಿಗೆ ಖಜಾನೆ ಎಕ್ಸ್ಪೋಷರ್ ಕಡಿತಗೊಳಿಸಿದ ಆರ್‌ಬಿಐ

MGNREGA ಕುರಿತು ಚರ್ಚಿಸಲು ವಿಶೇಷ ಅಧಿವೇಶನ; ಜ. 26 ರಿಂದ ಕಾಂಗ್ರೆಸ್​​ನಿಂದ 'ಮನ್ರೇಗಾ ಉಳಿಸಿ' ಪಾದಯಾತ್ರೆ

ಛತ್ತೀಸ್‌ಗಢ: ಪೊಲೀಸ್ ವಾಹನದ ಚಾಲಕ ಸೇರಿ 5 ಜನರಿಂದ ಯುವತಿ ಮೇಲೆ ಗ್ಯಾಂಗ್ ರೇಪ್!

ಭೀಕರ: ಡಿವೈಡರ್ ಮೇಲೆ ಹಾರಿ ಜನರ ಮೇಲೆ ಬಿದ್ದ ದುಬಾರಿ ಕಾರು, ಬದುಕಿದ್ದೇ ಪವಾಡ.. Video Viral

SCROLL FOR NEXT