ಬೆಂಗಳೂರು: ನವೆಂಬರ್ 20 ರಂದು ಮುಕ್ತಾಯಗೊಂಡ ಬೆಂಗಳೂರು ಟೆಕ್ ಶೃಂಗಸಭೆ (BTS) 2025 ರಲ್ಲಿಇಂಗಾಲ ಹೊರಸೂಸುವಿಕೆಯಲ್ಲಿ ಶೇ. 37 ರಷ್ಟು ಕಡಿತ ಸಾಧಿಸಿರುವುದಾಗಿ ಪ್ರಿಯಾಂಕ್ ಖರ್ಗೆ ಭಾನುವಾರ ಘೋಷಿಸಿದ್ದಾರೆ. ಖರ್ಗೆ ನೇತೃತ್ವದಲ್ಲಿ ಶೃಂಗಸಭೆ ನಡೆಸಲಾಯಿತು.
"ಹೆಚ್ಚಿದ ಮೆಟ್ರೋ ಬಳಕೆ ಮತ್ತು ಸಂಬಂಧಿತ ಉಪಕ್ರಮಗಳಿಂದ ಇಂಗಾಲ ಹೂರಸೂಸುವಿಕೆಯಲ್ಲಿ ಶೇ. 37 ರಷ್ಟು ಕಡಿತ ಸಾಧಿಸಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.
ಪ್ರತಿನಿಧಿಗಳಿಗೆ 5,000ಕ್ಕೂ ಹೆಚ್ಚು ಬಾರಿ ಉಚಿತವಾಗಿ ಮೆಟ್ರೋದಲ್ಲಿ ಕರೆದೊಯ್ಯಲಾಗಿದೆ. ಇದರರ್ಥ ಸ್ಥಳಕ್ಕೆ 5,000 ಕಡಿಮೆ ವಾಹನದ ಪ್ರಯಾಣ ಎಂಬುದಾಗಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
ಸುಮಾರು 92,500 ಜನರು ಭಾಗವಹಿಸಿದ್ದ ಶೃಂಗಸಭೆಯಲ್ಲಿ 9,700 ಕೆಜಿಗಿಂತ ಹೆಚ್ಚು ತ್ಯಾಜ್ಯ ಉತ್ಪಾದನೆಯಾಗಿತ್ತು. ಅದನ್ನೆಲ್ಲ ಮರುಬಳಕೆ ಮಾಡಲಾಗಿದೆ. ಸುಸ್ಥಿರತೆ ಜಾಗೃತಿಯಾಗಿ ಸುಮಾರು 12,000 ಭಾಗವಹಿಸಿದ್ದ ಶೃಂಗಸಭೆಯಲ್ಲಿ 850 ಮಳಿಗೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದು ಹೇಳಿದ್ದಾರೆ.
"ನಾವೀನ್ಯತೆ ಮತ್ತು ಸುಸ್ಥಿರತೆ ಒಟ್ಟಿಗೆ ಹೋಗಬಹುದು ಮತ್ತು ಬೆಳೆಯಬಹುದು ಎಂಬುದನ್ನು ಬಿಟಿಎಸ್ ತೋರಿಸುವುದನ್ನು ಮುಂದುವರೆಸಿದೆ" ಎಂದು ಖರ್ಗೆ ಹೇಳಿದ್ದಾರೆ.