ಸ್ಫಟಿಕಪುರಿ ಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ ಹಾಗೂ ಡಿಕೆ.ಶಿವಕುಮಾರ್ 
ರಾಜ್ಯ

ಬಿಕ್ಕಟ್ಟಿನ ಸಮಯದಲ್ಲೂ ಎದೆಗುಂದಲಿಲ್ಲ, ಸಿಎಂ ಆಗಲು ಅವಕಾಶ ನೀಡಿ: ಡಿಕೆಶಿ ಪರ ಮತ್ತೋರ್ವ ಸ್ವಾಮೀಜಿ ಬ್ಯಾಟಿಂಗ್..!

ಡಿಕೆ ಶಿವಕುಮಾರ್ ಸಮುದಾಯದ ಅಗ್ರಗಣ್ಯ ನಾಯಕ. ಆ ಪಕ್ಷಕ್ಕೆ ಕೊಟ್ಟ ಕೊಡುಗೆ ಮರೆಯಲಾಗಲ್ಲ. ಅವರು ಪಟ್ಟ ನೋವು ಯಾರು ಪಟ್ಟಿಲ್ಲ. ಬಹಳ ಇಕ್ಕಟ್ಟಿನ ವೇಳೆ ಅಧ್ಯಕ್ಷ ಸ್ಥಾನ ಕೊಟ್ಟರು.

ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರು ಪಟ್ಟಷ್ಟು ನೋವು ಯಾರು ಪಟ್ಟಿಲ್ಲ. ಬಿಕ್ಕಟ್ಟಿನ ಸಮಯದಲ್ಲೂ ಅವರು ಎದೆಗುಂದಲಿಲ್ಲ, ರಾಜ್ಯದ ಮುಖ್ಯಮಂತ್ರಿಯಾಗಲು ಅವರಿಗೆ ಅವಕಾಶ ನೀಡಬೇಕೆಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರವಾಗಿ ಮತ್ತೋರ್ವ ಸ್ವಾಮೀಜಿ ಬ್ಯಾಟಿಂಗ್ ಮಾಡಿದ್ದಾರೆ.

ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ ಹಾಗೂ ಒಕ್ಕಲಿಗ ಸಮುದಾಯದ ಎಚ್ಚರಿಕೆ ಬೆನ್ನಲ್ಲೇ ಶುಕ್ರವಾರ ಬೆಂಗಳೂರಿನಲ್ಲಿರುವ ಡಿ.ಕೆ.ಶಿವಕುಮಾರ್‌ ಮನೆಗೆ ಭೇಟಿ ಸ್ಫಟಿಕಪುರಿ ಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿಗಳು ಭೇಟಿ ನೀಡಿ, ಕೆಲ ಹೊತ್ತು ಮಾತುಕತೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಸಮುದಾಯದ ಅಗ್ರಗಣ್ಯ ನಾಯಕ. ಆ ಪಕ್ಷಕ್ಕೆ ಕೊಟ್ಟ ಕೊಡುಗೆ ಮರೆಯಲಾಗಲ್ಲ. ಅವರು ಪಟ್ಟ ನೋವು ಯಾರು ಪಟ್ಟಿಲ್ಲ. ಬಹಳ ಇಕ್ಕಟ್ಟಿನ ವೇಳೆ ಅಧ್ಯಕ್ಷ ಸ್ಥಾನ ಕೊಟ್ಟರು. ಆ ಸಂದರ್ಭದಲ್ಲೂ ಎದೆಗುಂದದೆ ಪಕ್ಷ ಕಟ್ಟಿದ್ದರು. ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಕುಟುಂಬಕ್ಕೆ ನಿಷ್ಠರಾಗಿ ಇದ್ದಾರೆ ಎಂದು ಹೇಳಿದರು.

ಡಿಕೆಶಿ ಅವರು ಸಿದ್ದರಾಮಯ್ಯ ಸಹಯೋಗದಲ್ಲಿ ಪಕ್ಷವನ್ನು ತಂದರು. ನಾವು ಕೇಳೋದು ಇಷ್ಟೇನೇ. ಅಹಿಂದ ಇರಬಹುದು, ಒಕ್ಕಲಿಗರು ಏನು ಮಾಡಬೇಕು. ಅವರಿಗೂ ಒಂದು ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.

ದೇವರಾಜ ಅರಸು ಅವರು ಎಲ್ಲಾ ಸಮುದಾಯವನ್ನು ಗುರುತಿಸಿದರು. ಇಂದಿನ ದಿನಮಾನದಲ್ಲಿ ಯಾರು ಸಹಾಯಕ್ಕೆ ಬರಲ್ಲ. ನಾವು ಕೇಳೋದು ಎಲ್ಲ ವರ್ಗಕ್ಕೂ ಸಲ್ಲುವವರು. ಮೊದಲ ಅವಧಿಯಲ್ಲಿ ಸಿಎಂ ಆಗುತ್ತಾರೆ ಎಂದುಕೊಂಡಿದ್ದೆವು. ಸಿದ್ದರಾಮಯ್ಯನವರು ಹಿರಿಯರಿದ್ದಾರೆ. ಅವರಿಗೆ 75 ವರ್ಷ ಆಗಿದೆ. ಅವರಿಗೆ ಅವಕಾಶ ಕೊಡಬೇಕು ಎಂದು ಸಿಎಂ ಸ್ಥಾನ ಕೊಟ್ಟರು. ಎರಡೂವರೆ ವರ್ಷಕ್ಕೆ ಸಿಎಂ ಆಗಲಿ ಎಂದು ಮಾಡಿದರು.

ಸಿದ್ದರಾಮಯ್ಯ ಅವರು ಹೈಕಮಾಂಡ್ ಗೆ ಮಾತು ಕೊಟ್ಟಿದ್ದರು. ಎಲ್ಲಾ ವರ್ಗ ಸಮಾಜ ಶಿವಕುಮಾರ್ ಅವರ ಪರವಾಗಿ ಇದೆ. ಮೊದಲು ಅಲ್ಲಿ ಇತ್ಯರ್ಥ ಆಗಲಿ. ಶಿವಕುಮಾರ್ ಗೂ ಒಂದು ಅವಕಾಶ ಕೊಡಲಿ ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 World Cup: ಭಾರತಕ್ಕೆ ಬರದಿದ್ದರೇ ಟೂರ್ನಿಯಿಂದ ಹೊರಕ್ಕೆ; ಬಾಂಗ್ಲಾಗೆ ಐಸಿಸಿಯಿಂದ 24 ಗಂಟೆ ಅಂತಿಮ ಗಡುವು!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯ ನಡೆಸಲು ನಾವು ರೆಡಿ, ಆದರೆ RCB ಹಿಂಜರಿಯುತ್ತಿದೆ: ವೆಂಕಟೇಶ್ ಪ್ರಸಾದ್

ರಾಸಲೀಲೆ ಪ್ರಕರಣ: ಅಮಾನತುಗೊಂಡ ಡಿಜಿಪಿ ರಾಮಚಂದ್ರ ರಾವ್ ಸ್ಥಾನಕ್ಕೆ ಉಮೇಶ್ ಕುಮಾರ್ ನೇಮಕ

ಜಂಟಿ ಅಧಿವೇಶನ: ಸದನ ಕದನಕ್ಕೆ ಆಡಳಿತರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಸಿದ್ಧತೆ

ಶಬರಿಮಲೆ ಚಿನ್ನ ಕಳವು ಪ್ರಕರಣ: EDಯಿಂದ 1.3 ಕೋಟಿ ರೂ. ಆಸ್ತಿ ಮುಟ್ಟುಗೋಲು, ಚಿನ್ನದ ಗಟ್ಟಿ ವಶಕ್ಕೆ!

SCROLL FOR NEXT