ನಂದಿನಿ ತುಪ್ಪ  
ರಾಜ್ಯ

ಕೆಟ್ಟ ಮೇಲೆ ಬುದ್ದಿ ಕಲಿತ KMF: ಫೇಕ್ ನಂದಿನಿ ತುಪ್ಪ ಕಡಿವಾಣಕ್ಕೆ ಭರ್ಜರಿ ಪ್ಲಾನ್; ನಕಲಿ ಶೂರರಿಗೆ ಮಾಸ್ಟರ್ ಸ್ಟ್ರೋಕ್!

ಕೆಎಂಎಫ್‌ಗೂ ನಕಲಿ ಉತ್ಪನ್ನಗಳ ಹಾವಳಿ ಜೋರಾಗಿ ತಟ್ಟಿದೆ. ಅದೂ ಪದೇ ಪದೇ ನಕಲಿ ಹಾವಳಿಗೆ ಸಿಲುಕಿ ನಲುಗುತ್ತಿರೋ ಕೆಎಂಎಫ್ ಈಗ ನಕಲಿ ಶೂರರಿಗೆ ಮಾಸ್ಟರ್ ಸ್ಟ್ರೋಕ್ ಕೊಡಲು ಪ್ಲಾನ್ ರೂಪಿಸಿದೆ.

ಬೆಂಗಳೂರು: ನಮ್ಮ ಹೆಮ್ಮೆಯ ನಂದಿನಿ ತುಪ್ಪಕ್ಕೆ ಎಲ್ಲೆಲ್ಲಿದ ಬೇಡಿಕೆ ಇದೆ. ಅದರಲ್ಲೂ ತಿರುಪತಿ ತಿಮ್ಮಪ್ಪನಿಗೂ ನಮ್ಮ ಕೆಂಎಫ್ ನಂದಿನಿ ತುಪ್ಪ ಬೇಕು. ಇದನ್ನೇ ಬಂಡವಾಳ ಮಾಡಿಕೊಂಡ ನಕಲಿ ತುಪ್ಪ ಮಾರಾಟ ಮಾಡುವ ಜಾಲ ಪತ್ತೆಯಾಗಿದೆ. ಇದಕ್ಕೆ ಕಡಿವಾಣ ಹಾಕಲು ಇದೀಗ ಕೆಎಂಎಫ್ ಭರ್ಜರಿ ಪ್ಲಾನ್ ಮಾಡಿದೆ.

ಕೆಎಂಎಫ್‌ಗೂ ನಕಲಿ ಉತ್ಪನ್ನಗಳ ಹಾವಳಿ ಜೋರಾಗಿ ತಟ್ಟಿದೆ. ಅದೂ ಪದೇ ಪದೇ ನಕಲಿ ಹಾವಳಿಗೆ ಸಿಲುಕಿ ನಲುಗುತ್ತಿರೋ ಕೆಎಂಎಫ್ ಈಗ ನಕಲಿ ಶೂರರಿಗೆ ಮಾಸ್ಟರ್ ಸ್ಟ್ರೋಕ್ ಕೊಡಲು ಪ್ಲಾನ್ ರೂಪಿಸಿದೆ. ಇಡೀ ದೇಶದಲ್ಲಿ ತನ್ನದೇ ಆದ ವಿಶಿಷ್ಟ ರುಚಿ ಹೊಂದಿರೋ ಕೆಎಂಎಫ್ ತುಪ್ಪವನ್ನ ನಕಲಿ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಈ ನಕಲಿ ತುಪ್ಪ ಜಾಲವನ್ನ ಪತ್ತೆ ಹಚ್ಚಿದ್ದ ಕೆಎಂಎಫ್ ಈಗ ರಾಜ್ಯಾದ್ಯಂತ ನಕಲಿ ತುಪ್ಪ ಹಾವಳಿ ತಡೆಗಟ್ಟೋಕೆ ನೇರ ಹೆಡ್ ಶಾಟ್ ಕೊಡಲು ಪ್ಲಾನ್ ರೂಪಿಸುತ್ತಿದೆ.

ಕೆಟ್ಟ ಮೇಲೆ ಕೊನೆಗೂ ಬುದ್ದಿ ಕಲಿತ ಕೆಎಂಎಫ್ ನಂದಿನಿ ಬ್ರ‍್ಯಾಂಡ್‌ಗೆ ಹೊಡೆತ ಬೀಳಬಾರದು ಎಂಬ ಉದ್ದೇಶದಿಂದ ಆಹಾರ ಇಲಾಖೆ ತಜ್ಞರ ಜೊತೆ ಚರ್ಚಿಸಿ ಮಾಸ್ಟರ್ ಪ್ಲಾನ್ ಮಾಡಿದೆ. ಕ್ಯೂ ಆರ್ ಕೋಡ್ ಬಳಸಿದಲ್ಲಿ ತುಪ್ಪದ ಉತ್ಪಾದನೆ, ಪೂರೈಕೆ, ಯಾವ ಮಳಿಗೆ, ಯಾರಿಗೆ ಮಾರಾಟ ಮಾಡಿದ್ದಾರೆ ಎಂಬುದು ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವುದರಿಂದ ತಿಳಿಯಲಿದೆ.

ಆ ಮೂಲಕ ಗ್ರಾಹಕರು ಖರೀದಿ ಮಾಡಿರುವುದು ಅಸಲಿಯೋ, ನಕಲಿಯೋ ಎಂಬುದು ಗೊತ್ತಾಗಲಿದೆ. ಆದರೆ ಇದಕ್ಕೆ ಆಗುವ ಹೆಚ್ಚುವರಿ ವೆಚ್ಚವನ್ನು ಗ್ರಾಹಕರ ಮೇಲೆ ಹೊರಿಸದೆ ಕೆಎಂಎಫ್ ಭರಿಸಲು ಮುಂದಾಗಿದೆ.

ಕ್ಯೂಆರ್ ಕೋಡ್‌ನಲ್ಲಿ ಏನಿರುತ್ತೆ?

ಯಾವ ಒಕ್ಕೂಟದಿಂದ ಉತ್ಪಾದನೆಯಾಗಿದೆ

ಯಾವ ಡಿಪೋಗೆ ಸರಬರಾಜು ನೀಡಲಾಗಿದೆ

ಯಾವ ಏರಿಯಾಗೆ ಡೆಲಿವರಿ ನೀಡಲಾಗಿದೆ

ಯಾವ ರೀಟೇಲ್ ಅಂಗಡಿಗೆ ಸೇಲ್ ಮಾಡಲಾಗಿದೆ ಎಂಬ ಮಾಹಿತಿ ಇದರಲ್ಲಿ ಇರುತ್ತದೆ. ಕ್ಯೂಆರ್ ಕೋಡ್ ಮೂಲಕ ಗ್ರಾಹಕರು ತುಪ್ಪದ ಉತ್ಪಾದನೆ, ಪೂರೈಕೆ, ಯಾವ ಮಳಿಗೆ, ಯಾರಿಗೆ ಮಾರಾಟ ಮಾಡಿದ್ದಾರೆ ಎಂಬುದನ್ನು ತಿಳಿಯಬಹುದು. ಇದರಿಂದ ಗ್ರಾಹಕರು ಖರೀದಿ ಮಾಡಿರೋದು ಅಸಲಿಯೋ ನಕಲಿಯೋ ಅನ್ನೋದು ಗ್ರಾಹಕರೇ ತಿಳಿಯಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel

ಜೈ ಜವಾನ್, ಜೈ ಕಿಸಾನ್: ಐತಿಹಾಸಿಕ ಶತಕದ ಬಳಿಕ ಹೊಸ ಟ್ಯಾಟೂ ರಿವೀಲ್ ಮಾಡಿದ Dhruv Jurel