ಬೆಂಗಳೂರು: ಉಮಾ ರೆಡ್ಡಿ ಅವರು ರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (FKCCI) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಂಸ್ಥೆಯ 108 ವರ್ಷಗಳ ಇತಿಹಾಸದಲ್ಲಿ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸರ್ ಎಂ ವಿಶ್ವೇಶ್ವರಯ್ಯ ಅವರು 1916 ರಲ್ಲಿ ಸ್ಥಾಪಿಸಿದಾಗಿನಿಂದ, ಎಫ್‌ಕೆಸಿಸಿಐ ನ್ನು ಸಾಂಪ್ರದಾಯಿಕವಾಗಿ ಪುರುಷರು ಮುನ್ನಡೆಸಿಕೊಂಡು ಬರುತ್ತಿದ್ದರು. ಇದೇ ಮೊದಲ ಸಲ ಮಹಿಳೆಯೊಬ್ಬರು ಅಧ್ಯಕ್ಷತೆ ವಹಿಸಿಕೊಂಡಿದ್ದು ಹೆಗ್ಗುರುತು ಸಾಧನೆಯಾಗಿದೆ ಎಂದು ಚೇಂಬರ್ ಹೇಳಿಕೆಯಲ್ಲಿ ತಿಳಿಸಿದೆ.
ಉಮಾ ರೆಡ್ಡಿ ಅವರು ಅಧ್ಯಕ್ಷ ಸ್ಥಾನಕ್ಕೆ ಬಲವಾದ ಬಲವಾದ ಎಂಜಿನಿಯರಿoಗ್ ಮತ್ತು ತಂತ್ರಜ್ಞಾನ ಹಿನ್ನೆಲೆಯನ್ನು ಹೊಂದಿದ್ದಾರೆ, ಅವರು ತಾಂತ್ರಿಕ ಪರಿಣತಿಯನ್ನು ಉದ್ಯಮಶೀಲತಾ ದೃಷ್ಟಿಕೋನದೊಂದಿಗೆ ಸರಾಗವಾಗಿ ಬೆರೆಸುವ ನಾಯಕಿಯಾಗಿ ಗುರುತಿಸಿಕೊಳ್ಳುತ್ತಾರೆ.
ಅವರು ಪವರ್ ಎಲೆಕ್ಟ್ರಾನಿಕ್ ಭಾಗಗಳ ಘಟಕಗಳಲ್ಲಿ ಪರಿಣತಿ ಹೊಂದಿರುವ ಮೆಸರ್ಸ್ ಹೈಟೆಕ್ ಮ್ಯಾಗ್ನೆಟಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಾರೆ-ಇದು ಮಹಿಳಾ ಪ್ರಾತಿನಿಧ್ಯ ಸೀಮಿತವಾಗಿರುವ ವಲಯವಾಗಿದೆ.
ಮೂರು ದಶಕಗಳಿಗೂ ಹೆಚ್ಚು ಕಾಲದ ಅನುಭವ ಹೊಂದಿರುವ ಶ್ರೀಮತಿ ಉಮಾ ರೆಡ್ಡಿ ನಾವೀನ್ಯತೆ, ಮಹಿಳಾ ಉದ್ಯಮಿಗಳು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME) ಸಬಲೀಕರಣಕ್ಕೆ ದೃಢವಾದ ಬೆಂಬಲ ನೀಡುತ್ತಾರೆ. ಅವರು ಹಲವಾರು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕೈಗಾರಿಕಾ ಸಮಿತಿಗಳಿಗೆ ಕೊಡುಗೆ ನೀಡಿದ್ದಾರೆ.
ಮಹಿಳಾ ನೇತೃತ್ವದ ಉದ್ಯಮಗಳಿಗೆ ಮಾರ್ಗದರ್ಶನ ಮತ್ತು ಬೆಂಬಲ ನೀಡಿದ್ದಾರೆ. ಅವರ ಸಹೋದ್ಯೋಗಿಗಳು ಅವರನ್ನು ಡಿಜಿಟಲ್ ರೂಪಾಂತರ ಮತ್ತು ನವೀಕರಿಸಬಹುದಾದ ಇಂಧನದಿAದ ಹಿಡಿದು ಜಾಗತಿಕವಾಗಿ ಸ್ಪರ್ಧಿಸುವಾಗ MSMEಗಳು ಎದುರಿಸುವ ಸವಾಲುಗಳವರೆಗೆ ಉದ್ಯಮ ಬದಲಾವಣೆಗಳನ್ನು ನಿರೀಕ್ಷಿಸುವ ಸಾಮರ್ಥ್ಯ ಹೊಂದಿರುವ ಪ್ರಾಯೋಗಿಕ ತಂತ್ರಜ್ಞ ಎಂದು ಬಣ್ಣಿಸುತ್ತಾರೆ.