ಮೈಸೂರು: ಕಾಂತಾರ: ಚಾಪ್ಟರ್ 1 ಸಿನಿಮಾ ವೀಕ್ಷಣೆಗೆ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಇಡೀ ಥಿಯೇಟರ್ ಅನ್ನು ಬುಕ್ ಮಾಡಿದ್ದಾರೆ.
ಭಾನುವಾರ 4 ಗಂಟೆಗೆ ಕಾರ್ಯಕರ್ತರೆಲ್ಲ ಒಡಗೂಡಿ ಕಾಂತಾರ-2 ನೋಡೋಣ, ಡಿಆರ್‌ಸಿಯಲ್ಲಿ ಫುಲ್ ಸ್ಕ್ರೀನ್ ಬುಕ್ ಮಾಡಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಒಟ್ಟು 197 ಟಿಕೆಟಿಗೆ ಪ್ರತಾಪ್ ಸಿಂಹ 68,920 ರೂ. ಪಾವತಿಸಿ ಥಿಯೇಟರ್ ಬುಕ್ ಮಾಡಿದ್ದಾರೆ.
ತಮ್ಮ ಮೈಸೂರಿನ ಬಿಜೆಪಿ ಕಾರ್ಯಕರ್ತರಿಗಾಗಿ ಮೈಸೂರಿನ ಡಿಆರ್‌ಸಿ ಥಿಯೇಟರ್‌ನಲ್ಲಿ ಕಾಂತಾರ 1 ಟಿಕೆಟ್ ಬುಕ್ ಮಾಡಿದ್ದಾರೆ. ನಾಳೆ ಸಂಜೆ 4 ಗಂಟೆಗೆ ಸಿನಿಮಾ ಪ್ರದರ್ಶನ ಇದ್ದು, ನಾಳೆ 4 ಗಂಟೆಗೆ ಕಾರ್ಯಕರ್ತರೆಲ್ಲ ಒಡಗೂಡಿ ಕಾಂತಾರ-2 ನೋಡೋಣ, DRCಯಲ್ಲಿ ಫುಲ್ ಸ್ಕ್ರೀನ್ ಬುಕ್ ಮಾಡಿದ್ದೇನೆ ಅಂತ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.
ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ ಸಿನಿಮಾ ಭಾರತದಲ್ಲಿ ಒಟ್ಟು 6,500 ಚಿತ್ರ ಮಂದಿರಗಳಲ್ಲಿ ಸುಮಾರು 12,511ಕ್ಕೂ ಹೆಚ್ಚು ಶೋಗಳು ಪ್ರದರ್ಶನಗೊಂಡಿದ್ದವು.
ಈಗಾಗಲೇ ಎಲ್ಲಾ ಕಡೆ ಟಿಕೆಟ್ ಸೋಲ್ಡ್ ಔಟ್ ಆಗಿದ್ದು, ನಾಳೆ ಶನಿವಾರ, ನಾಡಿದ್ದು, ಭಾನುವಾರ ಹೌಸ್ ಫುಲ್ ಪ್ರದರ್ಶನಕ್ಕೆ ಸಜ್ಜಾಗಿದೆ.
ಹೊಂಬಾಳೆ ಫಿಲ್ಮ್ಸ್‌ನಿಂದ ನಿರ್ಮಿಸಲಾದ ಈ ಚಿತ್ರವು ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ತನ್ನ ವಿಜಯೋತ್ಸವವನ್ನು ಪ್ರಾರಂಭಿಸಿದೆ. ಅಕ್ಟೋಬರ್ 1 ರಂದು ನಡೆದ ಅದ್ಧೂರಿ ಪ್ರೀಮಿಯರ್‌ನಲ್ಲಿ ಹೌಸ್ ಫುಲ್ ಆಗುತ್ತಿದೆ, ಕಾಂತಾರ: ಅಧ್ಯಾಯ 1 ಅಕ್ಟೋಬರ್ 2 ರಂದು ರಾಜ್ಯಾದ್ಯಂತ ಹೌಸ್‌ಫುಲ್ ಪ್ರದರ್ಶನಗಳನ್ನು ದಾಖಲಿಸಿದೆ. ವಾರಾಂತ್ಯದ ದಟ್ಟಣೆಯು ಕಲೆಕ್ಷನ್‌ಗಳನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.
ಚಿತ್ರವನ್ನು ಬರೆದು, ನಿರ್ದೇಶಿಸಿ, ನಟಿಸಿರುವ ರಿಷಬ್ ಶೆಟ್ಟಿ ಅವರೊಂದಿಗೆ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾಮ್ ಮತ್ತು ಪ್ರಕಾಶ್ ತುಮಿನಾಡು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಏಳು ಭಾಷೆಗಳಲ್ಲಿ ಪ್ಯಾನ್-ಇಂಡಿಯನ್ ಬಿಡುಗಡೆಯಾಗುವುದರೊಂದಿಗೆ, ಚಿತ್ರದ ವ್ಯಾಪ್ತಿಯು ಕರ್ನಾಟಕವನ್ನು ಮೀರಿ ವಿಸ್ತರಿಸಿದೆ.