ಬೆಂಗಳೂರು: ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪೂರ್ಣಗೊಳಿಸಲು ಆದ್ಯತೆ ನೀಡುವಂತೆ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಈ ಸೂಚನೆ ನಗರದ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಮೇಲೂ ಪರಿಣಾಮ ಬೀರಿದೆ.
ಸರ್ಕಾರದ ಸೂಚನೆಯಂತೆ ಅಕ್ಟೋಬರ್ 31 ರೊಳಗೆ ನಗರದ ಎಲ್ಲಾ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗುವುದಿಲ್ಲ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳು ಹೇಳಿದ್ದಾರೆ.
ರಸ್ತೆ ಗುಂಡಿ ಸಮಸ್ಯೆ ದೂರಾಗಿಸಲು ಸಿಬ್ಬಂದಿಗಳಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಈ ನಡುವೆ ಜಾತಿ ಸಮೀಕ್ಷೆ ಕಾರ್ಯ ಕೂಡ ಎದುರಾಗಿದೆ. ಪ್ರತಿಯೊಬ್ಬ ಗಣತಿದಾರನಿಗೆ ದಿನಕ್ಕೆ 25 ಮನೆಗಳಲ್ಲಿ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಪ್ರತೀ ಮನೆಯಲ್ಲಿ ಎಲ್ಲಾ ಪ್ರಶ್ನೆಗಳ ಕೇಳಲು ಸುಮಾರು 30-35 ನಿಮಿಷ ಸಮಯ ಬೇಕಾಗುತ್ತಿದೆ. ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕಾದರೆ ಪ್ರತಿಯೊಬ್ಬ ಗಣತಿದಾರ ಏಳು ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸರ್ಕಾರದ ಒತ್ತಡ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರ ನಿರ್ದೇಶನಗಳು ಮತ್ತು ಎಫ್‌ಐಆರ್‌ಗಳು, ಇಲಾಖಾ ವಿಚಾರಣೆ ಮತ್ತು ಉದ್ಯೋಗ ನಷ್ಟದ ಎಚ್ಚರಿಕೆ ಜೊತೆಗೆ ಜಾತಿ ಜನಗಣತಿ ಕಾರ್ಯವೂ ನಮ್ಮ ಆದ್ಯತೆಯಾಗಿದೆ.
ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಗುತ್ತಿಗೆದಾರರ ಮೇಲೆ ಬಿಡಲು ಸಾಧ್ಯವಿಲ್ಲ; ಭ್ರಷ್ಟಾಚಾರ ನಡೆಯುವ ಸಾಧ್ಯತೆಗಳಿದ್ದು, ಸರಿಯಾದ ಮೇಲ್ವಿಚಾರಣೆ ಅಗತ್ಯವಿದೆ. ಹೀಗಾಗಿಯೇ ಕಾಮಗಾರಿ ಬಾಕಿ ಉಳಿದಿದೆ. ಸೋಮವಾರದ ಬಳಿಕ ಸಮಯ ಸಿಗುತ್ತದೆ ಎಂದು ತಿಳಿಸಿದ್ದಾರೆ.
ಸಮೀಕ್ಷಾ ಕಾರ್ಯವರು ರಾಜ್ಯದಲ್ಲಿ ತೆರಿಗೆ ಸಂಗ್ರಹ, ತಪಾಸಣೆ, ನಗರ ಯೋಜನೆ ಮತ್ತು ಪರಿಸರ ಕರ್ತವ್ಯಗಳಂತಹ ಇತರ ಇಲಾಖಾ ಕಾರ್ಯಗಳ ಮೇಲೆ ಪರಿಣಾಮ ಬೀರಿದೆ.
ತೆರಿಗೆ ಸಂಗ್ರಹ ಮತ್ತು ದೂರು ಪರಿಹಾರಕ್ಕಾಗಿ ಕಂದಾಯ ಕಚೇರಿಗಳಲ್ಲಿ ಸಿಬ್ಬಂದಿಗಳಿಲ್ಲ ಎಂಬ ದೂರುಗಳು ಬರುತ್ತಿವೆ. ಕಸ ಸಂಗ್ರಹಣೆ ಮತ್ತು ಮೇಲ್ವಿಚಾರಕರ ಕೊರತೆಯ ಬಗ್ಗೆಯೂ ದೂರುಗಳು ಬರುತ್ತಿವೆ ಎಂದು ವಲಯ ಆಯುಕ್ತರು ಹೇಳಿದ್ದಾರೆ.