ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ದರೋಡೆ: ತಮಿಳುನಾಡು ಪೊಲೀಸ್ ಕುಟುಂಬ ಲೂಟಿ ಮಾಡಿದ ದುಷ್ಕರ್ಮಿಗಳು!

ಹಲಸೂರಿನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮುಗಿಸಿದ್ದ ತನ್ನ ಹಿರಿಯ ಮಗನನ್ನು ಕರೆದುಕೊಂಡು ಬರಲು ಶಾಜಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಬೆಂಗಳೂರಿಗೆ ಬರುತ್ತಿದ್ದರು.

ಬೆಂಗಳೂರು: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ, ತಮಿಳುನಾಡಿನ ನೀಲಗಿರಿಯ 54 ವರ್ಷದ ಸಬ್ ಇನ್ಸ್‌ಪೆಕ್ಟರ್ ಅವರನ್ನು ಬೈಕ್‌ನಲ್ಲಿ ಬಂದ ಮೂವರು ಶಸ್ತ್ರಸಜ್ಜಿತ ವ್ಯಕ್ತಿಗಳು ದರೋಡೆ ಮಾಡಿದ್ದಾರೆ.

ನೀಲಗಿರಿಯ ಪುದುಕುಳಿ ಗ್ರಾಮದ ಪಿಜೆ ಶಾಜಿ ನೀಲಗಿರಿಯ ಚೇರಂಬಾಡಿ ಪೊಲೀಸ್ ಠಾಣೆಯಲ್ಲಿ ವಿಶೇಷ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಲಸೂರಿನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮುಗಿಸಿದ್ದ ತನ್ನ ಹಿರಿಯ ಮಗನನ್ನು ಕರೆದುಕೊಂಡು ಬರಲು ಶಾಜಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಬೆಂಗಳೂರಿಗೆ ಬರುತ್ತಿದ್ದರು.

ನಿದ್ದೆ ಬಂದ ಕಾರಣ 1.45 ರ ಸುಮಾರಿಗೆ ಚನ್ನಪಟ್ಟಣ ಬಳಿಯ ಲಂಬಾಣಿ ತಾಂಡ್ಯ ಬಳಿಯ ಸರ್ವಿಸ್ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿದ್ದಾಗಿ ದೂರುದಾರರು ತಿಳಿಸಿದ್ದಾರೆ.

ಬೆಳಗಿನ ಜಾವ 2 ಗಂಟೆ ಸುಮಾರಿಗೆ, ಆರೋಪಿಗಳು ಶಾಜಿ ಅವರ ಕುಟುಂಬ ಸದಸ್ಯರನ್ನು ಚಾಕು ತೋರಿಸಿ ಬೆದರಿಸಿ 10,000 ರೂ. ಮೌಲ್ಯದ ಚಿನ್ನದ ಸರ ಮತ್ತು ಮೊಬೈಲ್ ಫೋನ್‌ಗಳನ್ನು ದೋಚಿದ್ದಾರೆ, ಒಟ್ಟು ಅಂದಾಜು 1.35 ಲಕ್ಷ ರೂ. ಮೌಲ್ಯದ ಚಿನ್ನ ದೋಚಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳು ಹೋದ ನಂತರ, ಶಾಜಿ ಗಸ್ತು ತಿರುಗುತ್ತಿದ್ದ ಪೊಲೀಸರನ್ನು ಕಂಡು ಅವರ ಸಹಾಯ ಕೋರಿದರು. ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ" ಎಂದು ಅಧಿಕಾರಿಯೊಬ್ಬರು ಹೇಳಿದರು. ಅಪರಿಚಿತ ಆರೋಪಿಗಳ ವಿರುದ್ಧ ದರೋಡೆ ಪ್ರಕರಣ (ಬಿಎನ್‌ಎಸ್ 309(4)) ದಾಖಲಾಗಿದೆ.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ, ತಮಿಳುನಾಡಿನ ನೀಲಗಿರಿಯ 54 ವರ್ಷದ ಸಬ್ ಇನ್ಸ್‌ಪೆಕ್ಟರ್ ಅವರನ್ನು ಬೈಕ್‌ನಲ್ಲಿ ಬಂದ ಮೂವರು ಶಸ್ತ್ರಸಜ್ಜಿತ ವ್ಯಕ್ತಿಗಳು ದರೋಡೆ ಮಾಡಿದ್ದಾರೆ.

ನೀಲಗಿರಿಯ ಪುದುಕುಳಿ ಗ್ರಾಮದ ಪಿಜೆ ಶಾಜಿ ನೀಲಗಿರಿಯ ಚೇರಂಬಾಡಿ ಪೊಲೀಸ್ ಠಾಣೆಯಲ್ಲಿ ವಿಶೇಷ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಲಸೂರಿನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮುಗಿಸಿದ್ದ ತನ್ನ ಹಿರಿಯ ಮಗನನ್ನು ಕರೆದುಕೊಂಡು ಬರಲು ಶಾಜಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಬೆಂಗಳೂರಿಗೆ ಬರುತ್ತಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

370ನೇ ವಿಧಿ ರದ್ದತಿ, SIR ಬಗ್ಗೆ ತೀರ್ಪು: 53ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಯಮೂರ್ತಿ ಸೂರ್ಯಕಾಂತ್!

"ನಮ್ಮ ಬೇರು ಅರಬ್, ಟರ್ಕಿಯದ್ದಲ್ಲ": ಭಾರತದೊಂದಿಗೆ ಸೇರಲು ಸಿದ್ಧ; ಸಿಂಧ್ ನಲ್ಲಿ ಪಾಕ್ ವಿರುದ್ಧ ಭುಗಿಲೆದ್ದ ಪ್ರತಿಭಟನೆ; ರಾಜನಾಥ್ ಹೇಳಿಕೆಗೆ ವ್ಯಾಪಕ ಬೆಂಬಲ!

ಪುರಿ ಜಗನ್ನಾಥ ದೇಗುಲದಲ್ಲಿ ಪವಾಡ?: ತಂದೆಯ ಪ್ರಾರ್ಥನೆ ಬಳಿಕ ಕಣ್ಣು ಬಿಟ್ಟ ಕೋಮದಲ್ಲಿದ್ದ ಬಾಲಕ!, Video

ನಾಗಾ ಸಾಧುಗಳ ಆಶೀರ್ವಾದ, ಹುಲಿಗೆಮ್ಮೆ ದೇವಿ ಜೋಗತಿ ಭವಿಷ್ಯ! ಅಯ್ಯಪ್ಪ ಮಾಲಾಧಾರಿಗಳಿಂದ ವಿಶೇಷ ಪ್ರಾರ್ಥನೆ, ಸಿಎಂ ಆಗೇಬಿಡ್ತಾರಾ ಡಿಕೆಶಿ?

ಅರುಣಾಚಲ ಪ್ರದೇಶ ಚೀನಾದ ಭಾಗ: ಶಾಂಘೈ ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಭಾರತೀಯ ಮಹಿಳೆಗೆ 'ಕಿರುಕುಳ'

SCROLL FOR NEXT