ಬಲೂನು ಮಾರಾಟದಲ್ಲಿ ತೊಡಗಿರುವ ವಲಸಿಗರ ಕುಟುಂಬ  
ರಾಜ್ಯ

ಬಲೂನ್ ಮಾರುತ್ತಿದ್ದ ಬಾಲಕಿ ಅತ್ಯಾಚಾರ ಕೊಲೆ ಪ್ರಕರಣ: ದೂರು ದಾಖಲಿಸಲು ಆಧಾರ್, ಪಡಿತರ ಚೀಟಿಗಳಿಲ್ಲದೆ ವಲಸಿಗರ ಪರದಾಟ!

ಹಲವು ವರ್ಷಗಳಿಂದ, ಕಲಬುರಗಿಯ 50 ಕ್ಕೂ ಹೆಚ್ಚು ಕುಟುಂಬಗಳು ದಸರಾ ಸಮಯದಲ್ಲಿ ಮೈಸೂರನ್ನು ತಮ್ಮ ತಾತ್ಕಾಲಿಕ ಮನೆಯನ್ನಾಗಿ ಮಾಡಿಕೊಂಡಿವೆ. ಅವರು ತಮ್ಮ ಮಕ್ಕಳ ಜೊತೆ ವರ್ಣರಂಜಿತ ಬಲೂನ್‌ಗಳು ಮತ್ತು ಆಟಿಕೆ ಸಾಮಾನುಗಳನ್ನು ಬೀದಿ ಬದಿಗಳಲ್ಲಿ ಮಾರಾಟ ಮಾಡುತ್ತಾರೆ.

ಮೈಸೂರು: ಮೈಸೂರಿನಲ್ಲಿ ಎಂಟು ವರ್ಷದ ವಲಸೆ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ನಗರವನ್ನೇ ಬೆಚ್ಚಿಬೀಳಿಸಿದೆ. ಆದರೆ ಕಲ್ಯಾಣ ಕರ್ನಾಟಕದ ಜನರಿಗೆ ಪ್ರತಿದಿನವೂ ಬದುಕು ಹೋರಾಟವಾಗಿದೆ.

ಹಲವು ವರ್ಷಗಳಿಂದ, ಕಲಬುರಗಿಯ 50 ಕ್ಕೂ ಹೆಚ್ಚು ಕುಟುಂಬಗಳು ದಸರಾ ಸಮಯದಲ್ಲಿ ಮೈಸೂರನ್ನು ತಮ್ಮ ತಾತ್ಕಾಲಿಕ ಮನೆಯನ್ನಾಗಿ ಮಾಡಿಕೊಂಡಿವೆ. ಅವರು ತಮ್ಮ ಮಕ್ಕಳ ಜೊತೆ ವರ್ಣರಂಜಿತ ಬಲೂನ್‌ಗಳು ಮತ್ತು ಆಟಿಕೆ ಸಾಮಾನುಗಳನ್ನು ಬೀದಿ ಬದಿಗಳಲ್ಲಿ ಮಾರಾಟ ಮಾಡುತ್ತಾರೆ.

ಆದರೆ ಈ ಕುಟುಂಬಗಳಲ್ಲಿ ಅನೇಕರಿಗೆ ರಾಜ್ಯ ಸರ್ಕಾರ ನೀಡುವ ಆಧಾರ್, ಪಡಿತರ ಚೀಟಿಗಳು ಅಥವಾ ಜನನ ಪ್ರಮಾಣಪತ್ರಗಳು ಸೇರಿದಂತೆ ಯಾವುದೇ ದಾಖಲೆಗಳಿಲ್ಲ. ಇದರಿಂದಾಗಿ, ಅವರು ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

ನಾವು 13 ವರ್ಷಗಳಿಂದ ಮೈಸೂರಿಗೆ ಬಂದು ಬಲೂನ್‌ಗಳನ್ನು ಮಾರಾಟ ಮಾಡುತ್ತಿದ್ದೇವೆ" ಎಂದು ಹೊಸಮನಿ ಹೇಳುತ್ತಾರೆ, ಅವರು ಕನಿಷ್ಠ 20 ರಿಂದ 30 ಕುಟುಂಬಗಳೊಂದಿಗೆ ದಸರಾ ಹಬ್ಬದ ಸಮಯದಲ್ಲಿ ಮೈಸೂರಿಗೆ ಬಂದು ಶಿಬಿರ ಹೂಡುತ್ತಾರೆ.

ನಮ್ಮ ಬಗ್ಗೆ ಯಾರಿಗೂ ತಿಳಿದಿಲ್ಲ, ಯಾರೂ ನಮ್ಮನ್ನು ಲೆಕ್ಕಿಸುವುದಿಲ್ಲ. ನಾವು ಕಲಬುರಗಿಯ ಸರ್ವೇ ಕಚೇರಿಯ ಬಳಿ ಇರುತ್ತೇವೆ, ಇನ್ನೂ ಕೆಲವರು ಅಫ್ಜಲ್‌ಪುರದ ಟೆಂಟ್‌ಗಳಲ್ಲಿ ವಾಸಿಸುತ್ತೇವೆ. ನಮ್ಮಲ್ಲಿ ಹೆಚ್ಚಿನವರು ದಾಖಲೆಗಳನ್ನು ಹೊಂದಿಲ್ಲ ಮತ್ತು ನಾವು ಆಧಾರ್‌ಗಾಗಿ ಪ್ರಯತ್ನಿಸಿದಾಗ ನಮಗೆ 3,000 ರೂ. ಪಾವತಿಸಲು ಕೇಳಲಾಯಿತು" ಎಂದು ಅವರು ಹೇಳಿದರು.

"ಗುರುತಿನ ಪುರಾವೆ ಒದಗಿಸುವುದು ಕಡ್ಡಾಯವಾಗಿರುವುದರಿಂದ ಎಫ್‌ಐಆರ್ ಗಾಗಿ ದೂರು ದಾಖಲಿಸುವುದು ಸಹ ಕಷ್ಟಕರವಾಗಿರುತ್ತದೆ" ಎಂದು ಗುಂಪಿನ ಮತ್ತೊಬ್ಬ ಸದಸ್ಯರು ಹೇಳಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬ ಸದಸ್ಯರು ಮತ್ತು ಸಂಬಂಧಿಕರಿಗೆ ದಾಖಲೆಗಳನ್ನು ಒದಗಿಸುವುದು ಎಷ್ಟು ಕಷ್ಟಕರವಾಗಿತ್ತು ಎಂದು ಹೇಳಿದರು. ಸರ್ಕಾರದ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಕೂಡ ಅವರಿಗೆ ತಲುಪುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉಗ್ರರಿಗೆ ನೆರವು: ನಿಷೇಧಿತ ಜಮಾತ್-ಇ-ಇಸ್ಲಾಂಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಮ್ಮು-ಕಾಶ್ಮೀರ ಪೊಲೀಸರು ದಾಳಿ, ತೀವ್ರ ಶೋಧ

ಮೀರತ್​ ಕೊಲೆ ಪ್ರಕರಣ: ಹೆಣ್ಣು ಮಗುವಿಗೆ ರಾಧಾ ಎಂದು ಹೆಸರಿಟ್ಟ ಮುಸ್ಕಾನ್, DNA ಪರೀಕ್ಷೆಗೆ ಸೌರಭ್ ಕುಟುಂಬಸ್ಥರ ಆಗ್ರಹ

ಬೆಳಗಾವಿ: ಖಾನಾಪುರದಲ್ಲಿ ತಹಶಿಲ್ದಾರ್ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ಕಚ್ಚಾಟ!

ರಾಜ್ಯದಲ್ಲಿ ಶಾಸನವಿಲ್ಲದ 'ದುಶ್ಯಾಸನ' ಆಡಳಿತ: 'ಪಾಂಚಜನ್ಯ' ಮೊಳಗಿಸಲು ಮೋದಿ ಬರ್ತಿದ್ದಾರೆ; ಸುನಿಲ್ ಕುಮಾರ್

ಬಿಜೆಪಿಗೆ ಡಿ.ಕೆ ಶಿವಕುಮಾರ್ ಅವಶ್ಯಕತೆಯಿಲ್ಲ: ಅವರನ್ನು ಕಟ್ಟಿಕೊಂಡು ನಾವು ಏನು ಮಾಡೋಣ? ವಿ. ಸೋಮಣ್ಣ

SCROLL FOR NEXT