ಮೋಹನ್ ದಾಸ್ ಪೈ, ತೇಜಸ್ವಿ ಸೂರ್ಯ ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರಿನಲ್ಲಿ 'ಖಾಸಗಿ ಬಸ್' ಗಳಿಗೆ ಅನುಮತಿ: ಮೋಹನ್ ದಾಸ್ ಪೈ, ತೇಜಸ್ವಿ ಸೂರ್ಯ ಹೇಳಿಕೆ ಅಪಾಯಕಾರಿ; ತಜ್ಞರ ಸಲಹೆ

ಸಾರ್ವಜನಿಕ ಸಾರಿಗೆ ಸಲಹಾ ಸಂಸ್ಥೆ ಟ್ರಾನ್ಸಿಟ್ ಇಂಟೆಲಿಜೆನ್ಸ್‌ನ ಸಂಸ್ಥಾಪಕ ರವಿ ಗಡೇಪಲ್ಲಿ ಮಾತನಾಡಿ, ಬಸ್ ಸೇವೆಗಳನ್ನು ಖಾಸಗೀಕರಣಗೊಳಿಸುವುದು ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದರು.

ಬೆಂಗಳೂರು: ಬೆಂಗಳೂರಿನಲ್ಲಿ ಖಾಸಗಿ ಕಂಪನಿಗಳಿಗೆ ಬಸ್ ಸೇವೆ ಒದಗಿಸಲು ಅನುಮತಿ ನೀಡಿರುವುದು ಈಗಿರುವ ಸಮಸ್ಯೆಗಳನ್ನು ಪರಿಹರಿಸುವ ಬದಲು ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಇದು ಅಪಾಯಕಾರಿ ಕ್ರಮವಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಕ್ರಮವು ಖಾಸಗಿ ನಿರ್ವಾಹಕರು ಲಾಭದಾಯಕ ಮಾರ್ಗಗಳಿಗೆ ಆದ್ಯತೆ ನೀಡಲು ಮತ್ತು ಟಿಕೆಟ್ ದರಗಳನ್ನು ಹೆಚ್ಚಿಸಿ, ಪ್ರವೇಶವನ್ನು ಕಡಿಮೆ ಮಾಡಲು ಕಾರಣವಾಗುತ್ತದೆ ಎಂದು ಅವರು ಹೇಳಿದರು.

ಬಿಎಂಟಿಸಿ ತೆಗೆದುಹಾಕಬೇಕು: ಬಿಎಂಟಿಸಿ ಏಕಸ್ವಾಮ್ಯ ರದ್ದುಗೊಳಿಸುವಂತೆ ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಟಿವಿ ಮೋಹನ್‌ದಾಸ್ ಪೈ ಇತ್ತೀಚಿಗೆ ಸಲಹೆ ನೀಡಿದ್ದರು. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಖಾಸಗಿ ನಿರ್ವಾಹಕರಿಗೆ ಬೆಂಗಳೂರಿನಲ್ಲಿ ಬಸ್ ಸೇವೆಗಳನ್ನು ನಡೆಸಲು ಅನುಮತಿ ನೀಡಬೇಕು ಎಂದು ಹೇಳಿದ್ದರು. ಇದರ ಪರಿಣಾಮಗಳ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.

ಸಾರ್ವಜನಿಕ ಸಾರಿಗೆ ಸಲಹಾ ಸಂಸ್ಥೆ ಟ್ರಾನ್ಸಿಟ್ ಇಂಟೆಲಿಜೆನ್ಸ್‌ನ ಸಂಸ್ಥಾಪಕ ರವಿ ಗಡೇಪಲ್ಲಿ ಮಾತನಾಡಿ, ಬಸ್ ಸೇವೆಗಳನ್ನು ಖಾಸಗೀಕರಣಗೊಳಿಸುವುದು ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಸರ್ಕಾರದ ಆರ್ಥಿಕ ಬೆಂಬಲವಿಲ್ಲದೆ ಸಂಪೂರ್ಣ ಖಾಸಗೀಕರಣವು ಖಾಸಗಿ ನಿರ್ವಾಹಕರು ಹೆಚ್ಚಿನ ಬೇಡಿಕೆಯ, ಲಾಭದಾಯಕ ಮಾರ್ಗಗಳಿಗೆ ಮಾತ್ರ ಆದ್ಯತೆ ನೀಡಲು ಕಾರಣವಾಗುತ್ತದೆ. ಇದರ ಪರಿಣಾಮ ದರಗಳು ಹೆಚ್ಚಾಗುತ್ತವೆ ಎಂದರು.

ಯಾವುದೇ ಜಾಗತಿಕ ನಗರ ಸೇವಾ ನಿಬಂಧನೆಗಳನ್ನು ಖಾಸಗೀಕರಣಗೊಳಿಸುವ ಮೂಲಕ "ಉತ್ತಮ-ಗುಣಮಟ್ಟದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹೊಂದಿಲ್ಲ. ವಾಸ್ತವವಾಗಿ, ಕೆಲವು ಮೆಟ್ರೋಪಾಲಿಟನ್ ನಗರಗಳಿಗೆ ಹೋಲಿಸಿದರೆ BMTC ಕನಿಷ್ಠ ಆರ್ಥಿಕ ನಷ್ಟವನ್ನು ಹೊಂದಿದೆ. ಇದು ವೈಫಲ್ಯವೆಂದು ನೋಡುವುದಕ್ಕಿಂತ ಹೆಚ್ಚಿನ ಹೂಡಿಕೆಯ ಅಗತ್ಯವನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.

ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ ಸದಸ್ಯ ವಿನಯ್ ಶ್ರೀನಿವಾಸ್ ಮಾತನಾಡಿ, ಬೆಂಗಳೂರಿಗೆ ನಿಜವಾಗಿಯೂ ಬೇಕಾಗಿರುವುದು ಬಿಎಂಟಿಸಿಯನ್ನು ಬಲಪಡಿಸುವುದು, ಹೆಚ್ಚಿನ ಬಸ್‌ಗಳು, ಮಿನಿ ಬಸ್‌ಗಳು ಮತ್ತು ಪ್ರತ್ಯೇಕವಾದ ಬಸ್ ಪಥ. ಇವುಗಳು ಜಾರಿಯಲ್ಲಿದ್ದರೆ ವ್ಯವಸ್ಥೆ ಸುಧಾರಿಸುತ್ತದೆ ಮತ್ತು ಹೆಚ್ಚು ಜನರು ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರೆ ಎಂದರು.

ಪೈ, ತೇಜಸ್ವಿ ಸೂರ್ಯ ಹೇಳಿಕೆ ಅಪಾಯಕಾರಿ: "ಮೋಹನ್‌ದಾಸ್ ಪೈ ಮತ್ತು ಸೂರ್ಯ ಹೇಳುತ್ತಿರುವುದು ತುಂಬಾ ಅಪಾಯಕಾರಿ. ಮೊದಲನೆಯದಾಗಿ, ಖಾಸಗಿ ಬಸ್‌ಗಳಿಗೆ ಅನುಮತಿ ನೀಡುವಂತೆ ಹೇಳುವ ಮೂಲಕ ಅವರು ಯಾವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ? ಮೆಟ್ರೋಗೆ ನಾವು ಸಾವಿರಾರು ಕೋಟಿಗಳನ್ನು ಖರ್ಚು ಮಾಡುತ್ತೇವೆ - ರಾಜ್ಯ ಮತ್ತು ಕೇಂದ್ರ ಎರಡರಿಂದಲೂ ಹಣ ವೆಚ್ಚ ಮಾಡಲಾಗುತ್ತದೆ. ಆದ್ದರಿಂದ ಬಿಎಂಟಿಸಿಯಲ್ಲಿ ಅದೇ ರೀತಿಯಲ್ಲಿ ಯಾಕೆ ಹೂಡಿಕೆ ಮಾಡಬಾರದು? ಎಂದು ಅವರು ಪ್ರಶ್ನಿಸಿದರು.

ಖಾಸಗಿಯವರು ಏನಂತಾರೆ?

ಆದರೆ, ಕರ್ನಾಟಕ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಎಸ್ ನಟರಾಜ್ ಶರ್ಮಾ, ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡಿದರೆ ನಾವು ಸ್ವಾಗತಿಸುತ್ತೇವೆ. ಅದೇ ವೆಚ್ಚದಲ್ಲಿ ಬಿಎಂಟಿಸಿ ನಿರ್ಧರಿಸುವ ಮಾರ್ಗಗಳಲ್ಲಿ ನಾವು ಖಾಸಗಿ ಬಸ್‌ಗಳನ್ನು ಓಡಿಸುತ್ತೇವೆ. ನಾವು ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತೇವೆ ಎಂದು ಖಚಿತಪಡಿಸುತ್ತೇವೆ. ನಮಗೆ ಅನುಮತಿ ನೀಡಿದ್ರೆ ಶೇ. 100 ರಷ್ಟು ಸಾರ್ವಜನಿಕ ಸೇವೆಗಳಿಗೆ ಹೋಗುತ್ತೇವೆ ಮತ್ತು ನಾವು ಖಂಡಿತವಾಗಿಯೂ ಉತ್ತಮ ಬಸ್‌ಗಳನ್ನು ಒದಗಿಸುತ್ತೇವೆ ಎಂದು ಭರವಸೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್‌ಐಆರ್ ಕರ್ತವ್ಯಕ್ಕೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ರಾಜ್ಯಗಳಿಗೆ ಸುಪ್ರೀಂ ನಿರ್ದೇಶನ; ಒತ್ತಡ ಕಡಿಮೆ ಮಾಡಲು ಆದೇಶ

ಇಂಡಿಗೋದಲ್ಲಿ ಭಾರಿ ಅಸ್ತವ್ಯಸ್ತತೆ; ಗುರುವಾರ 300ಕ್ಕೂ ಹೆಚ್ಚು ದೇಶಿ, ಅಂತರರಾಷ್ಟ್ರೀಯ ವಿಮಾನಗಳು ರದ್ದು

ಬೆಂಗಳೂರಿನಲ್ಲಿ ಮಧ್ಯದ ಬೆರಳು ತೋರಿ ಶಾರುಖ್ ಖಾನ್ ಪುತ್ರನ ಉದ್ಧಟತನ; ನಲಪಾಡ್, ಜಮೀರ್ ಪುತ್ರ ಸಾಥ್! Video Viral

ಕುಕ್ಕುಟ ಆಹಾರ ಉತ್ಪಾದಕರಿಗೆ ನೇರವಾಗಿ ರೈತರಿಂದ ಮೆಕ್ಕೆಜೋಳ ಖರೀದಿಸಲು ರಾಜ್ಯ ಸರ್ಕಾರ ಅನುಮತಿ

ಕೊಹ್ಲಿ, ರೋಹಿತ್ ಗೆ ತೊಂದರೆ: ಆಯ್ಕೆ ಸಮಿತಿ, ಟೀಮ್ ಮ್ಯಾನೇಜ್ ಮೆಂಟ್ ಗೆ ಖಡಕ್ ವಾರ್ನಿಂಗ್ ನೀಡಿದ ರವಿಶಾಸ್ತ್ರಿ! ಹೇಳಿದ್ದೇನು?

SCROLL FOR NEXT