ಸಾಂದರ್ಭಿಕ ಚಿತ್ರ  
ರಾಜ್ಯ

ಬೈಕ್ ನಲ್ಲಿ ಡ್ರಾಪ್ ಕೊಡಿಸುವ ನೆಪದಲ್ಲಿ ಮಹಿಳೆ ಕರೆದೊಯ್ದು ಅತ್ಯಾಚಾರ: ಆರೋಪಿಗಳ ಬಂಧನ

ಕಳೆದ ಶುಕ್ರವಾರ ಈ ಘಟನೆ ನಡೆದಿದ್ದರೂ, ನಿನ್ನೆ ಸೋಮವಾರ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಸಿಕಂಥರ್ ಆಕೆಯ ಬಳಿ ಬೈಕ್ ನಿಲ್ಲಿಸಿ ಬಾ ನಿನ್ನೂರಿಗೆ ಬಿಟ್ಟು ಬರುತ್ತೇನೆ ಎಂದಿದ್ದಾನೆ.

ಚಿಕ್ಕಬಳ್ಳಾಪುರ: ಜಿಲ್ಲೆಯ ಹೆದ್ದಾರಿ 69 ರ ಗೌರಿಬಿದನೂರು-ಚಿಕ್ಕಬಳ್ಳಾಪುರ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಬೈಕ್ ಮೆಕ್ಯಾನಿಕ್ ಮತ್ತು ಅವನ ಸ್ನೇಹಿತ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಆಕೆಯ ಬಳಿ ಹಣ ಅಥವಾ ಆಧಾರ್ ಕಾರ್ಡ್ ಇಲ್ಲದ ಕಾರಣ ಬಸ್ ನಲ್ಲಿ ಸಂಚರಿಸಲು ಸಾಧ್ಯವಾಗದೆ ತನ್ನೂರಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ಮೆಕ್ಯಾನಿಕ್ ಸಿಕಂಥರ್ ಮತ್ತು ಆತನ ಸ್ನೇಹಿತ ಜನಾರ್ಧನ ಆಚಾರಿ ಎಂದು ಗುರುತಿಸಲಾಗಿದೆ.

ಕಳೆದ ಶುಕ್ರವಾರ ಈ ಘಟನೆ ನಡೆದಿದ್ದರೂ, ನಿನ್ನೆ ಸೋಮವಾರ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಸಿಕಂಥರ್ ಆಕೆಯ ಬಳಿ ಬೈಕ್ ನಿಲ್ಲಿಸಿ ಬಾ ನಿನ್ನೂರಿಗೆ ಬಿಟ್ಟು ಬರುತ್ತೇನೆ ಎಂದಿದ್ದಾನೆ.

ಮಹಿಳೆ ನಂಬಿ ಬೈಕ್ ಹತ್ತಿದ ಮೇಲೆ ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದಾನೆ. ನಂತರ ಜನಾರ್ಧನನನ್ನು ಸ್ಥಳಕ್ಕೆ ಬರಲು ಹೇಳಿ ಇಬ್ಬರೂ ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.ನಂತರ ಮಹಿಳೆಯನ್ನು ಆಕೆಯ ಊರಿನ ಬಳಿ ಇಳಿಸಿ ಹೋಗಿ ಪರಾರಿಯಾಗಿದ್ದಾರೆ.

ಅತ್ಯಾಚಾರಕ್ಕೆ ಒಳಗಾದ ಮಹಿಳೆ ಹರಿದ ಬಟ್ಟೆಯೊಂದಿಗೆ ಇರುವುದನ್ನು ಕಂಡ ಸಾಮಾಜಿಕ ಕಾರ್ಯಕರ್ತೆ ಶಿಲ್ಪಾ ವಿಚಾರಿಸಿದಾಗ ಘಟನೆ ಬೆಳಕಿಗೆ ಬರುತ್ತದೆ. ಸಂತ್ರಸ್ತೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಸಹಾಯ ಮಾಡುತ್ತಾರೆ.

ಪೊಲೀಸರು ವಿಶೇಷ ತಂಡವನ್ನು ರಚಿಸಿ ಹೆದ್ದಾರಿಯಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾದ ವಿಡಿಯೊ ದೃಶ್ಯಗಳ ಸಹಾಯದಿಂದ ಆರೋಪಿಗಳನ್ನು ಬಂಧಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಟ್ರಂಪ್ ಗೇ ಠಕ್ಕರ್: ವಿರೋಧದ ನಡುವೆಯೇ ಭಾರತದಲ್ಲಿ ಗೂಗಲ್ ಭಾರಿ ಹೂಡಿಕೆ, ಪ್ರಧಾನಿ ಮೋದಿಗೆ ಸುಂದರ್ ಪಿಚೈ ವಿವರಣೆ!

ಟ್ರಂಪ್‌ರನ್ನು Pak PM ಹೊಗಳುತ್ತಿದ್ದಾಗ ಹಿಂದೆ ನಿಂತಿದ್ದ Italy ಪ್ರಧಾನಿ ಜಾರ್ಜಿಯಾ ಮೆಲೋನಿ ರಿಯಾಕ್ಷನ್ Video Viral!

ಬೇಗ ಹೋಗು, ನನ್ನ ಉಳಿಸಿಕೊಡು: ರಾಜು ತಾಳಿಕೋಟೆಯ ಕೊನೆಯ 6 ನಿಮಿಷದ ಘಟನೆ ವಿವರಿಸಿದ Biggboss ವಿಜೇತ ಶೈನ್ ಶೆಟ್ಟಿ!

ಸದ್ಯಕ್ಕಿಲ್ಲ ಬ್ರೇಕ್.. 'ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಅ.18ರವರೆಗೂ ಭಾರಿ ಮಳೆ': ಹವಾಮಾನ ಇಲಾಖೆ!

ಕಳಂಕಿತ ಸಿಎಂ, ಸಚಿವರನ್ನು ಪದಚ್ಯುತಗೊಳಿಸುವ ಮಸೂದೆ ಕುರಿತ JPCಗೆ ಇಂಡಿಯಾ ಬಣ ಬಹಿಷ್ಕಾರ

SCROLL FOR NEXT