ಬೆಂಗಳೂರು: ನಗರದ ಟ್ರಾಫಿಕ್ ಸಿಗ್ನಲ್‌ಗಳ ಬಳಿ ಇರುವ ಬಸ್ ನಿಲ್ದಾಣಗಳು ಸಂಚಾರ ದಟ್ಟಣೆಗೆ ಕಾರಣವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಚಾರದ ಮೇಲೆ ಪರಿಣಾಮ ಬೀರುವ ನಿಲ್ದಾಣಗಳನ್ನು ಸ್ಥಳಾಂತರಗೊಳಿಸಲು ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಮತ್ತು ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಮುಂದಾಗಿದೆ.
ಸಮಸ್ಯೆ ಪರಿಹಾರಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಮತ್ತು ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) 110 ಬಸ್ ನಿಲ್ದಾಣಗಳನ್ನು ಸ್ಥಳಾಂತರಿಸಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಬಸ್ ನಿಲ್ದಾಣ ಸ್ಥಳಾಂತರ ಕುರಿತು ಬಿಎಂಟಿಸಿ ಹಾಗೂ ಬಿಟಿಪಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಂಸ್ಥೆಗೆ ಪತ್ರ ಬರೆದಿತ್ತು. ಆದರೆ, ಬಿಬಿಎಂಪಿ ಅಂತ್ಯಗೊಂಡು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಇದರ ಪ್ರಗತಿಗೆ ಅಡ್ಡಿಯಾಗಿದೆ ಎಂದು ತಿಳಿದುಬಂದಿದೆ.
ಜಿಬಿಎಯ ಕಾರ್ಯನಿರ್ವಾಹಕ ಎಂಜಿನಿಯರ್ ಹರಿಪ್ರಸಾದ್ ಅವರು ಮಾತನಾಡಿ, ಯೋಜನೆಯನ್ನು ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು. ಬಸ್ ನಿಲ್ದಾಣ ಸ್ಥಳಾಂತರದ ಉಸ್ತುವಾರಿಯನ್ನು ಶೆಲ್ಟರ್ ಏಜೆನ್ಸಿಗಳು ಮತ್ತು ಸ್ಥಳೀಯ ಬಿಎಂಟಿಸಿ ಅಧಿಕಾರಿಗಳು ವಹಿಸುತ್ತಾರೆ. ಈ ಕುರಿತು ಏಜೆನ್ಸಿಗಳಿಗೆ ತಿಳಿಸಿದ್ದೆವು, ಆದರೆ, ಬಿಬಿಎಂಪಿ ವಿಸರ್ಜಿಸಲ್ಪಟ್ಟ ನಂತರ, ಈ ಬಗ್ಗೆ ನಿಗಾ ಇರಿಸಲಾಗಿಲ್ಲ. ಜಿಬಿಎ ಅಡಿಯಲ್ಲಿ ಸ್ಥಳಾಂತರಕ್ಕೆ ಹೊಸ ಸ್ಥಳಗಳನ್ನು ನಿಯೋಜಿಸಲಾಗಿದೆ. ಈ ವಿಚಾರವನ್ನು ತ್ವರಿತಗೊಳಸಲಾಗುತ್ತಿದೆ ಎಂದು ಹೇಳಿದ್ದಾರೆ.
ಲೋವರ್ ಆಗರಂ ರಸ್ತೆ ಮತ್ತು 80 ಅಡಿ ರಸ್ತೆ ಸೇರಿದಂತೆ ನಗರದ ಹಲವು ಪ್ರಮುಖ ರಸ್ತೆಗಳು ಕಿರಿದಾಗಿದ್ದು, ಈ ರಸ್ತೆಗಳಲ್ಲಿ ಬಸ್ ಗಳು ನಿಲ್ಲುವುದರಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಬಾಳೇಕುಂದ್ರಿ ಸರ್ಕಲ್ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.
ಟ್ಯಾಕ್ಸಿಗಳು ಮತ್ತು ಆಟೋರಿಕ್ಷಾಗಳು ಬಸ್ ನಿಲ್ದಾಣಗಳಲ್ಲಿ ಪಾರ್ಕಿಂಗ್ ಮಾಡುವುದರಿಂದ ಮತ್ತು ಬಸ್‌ಗಳಿಗೆ ಸ್ಥಳಾವಕಾಶ ನೀಡದಿರುವುದು ಸಂಚಾರಕ್ಕೆ ಕಾರಣವಾಗಿದೆ ಎಂದು ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ (ಕಾರ್ಯಾಚರಣೆ) ಜಿಟಿ ಪ್ರಭಾಕರ್ ರೆಡ್ಡಿ ಹೇಳಿದ್ದಾರೆ.
ಯಾದೃಚ್ಛಿಕವಾಗಿ ನಿಲ್ಲುವ ಬಸ್‌ಗಳಿಂದ ಸಂಚಾರಕ್ಕೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ನಮ್ಮಲ್ಲಿ ಗಸ್ತು ವಾಹನಗಳಿವೆ. ತಪ್ಪು ಮಾಡುವ ಚಾಲಕರಿಗೆ ನೋಟಿಸ್ ಮತ್ತು ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಬಸ್ ನಿಲ್ದಾಣ ಸೇರ್ಪಡೆ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ನಗರದಲ್ಲಿ ಬಸ್ ನಿಲ್ದಾಣಗಳ ನಡುವಿನ ಸರಾಸರಿ ಅಂತರ 500 ಮೀಟರ್ ಆಗಿದ್ದು, ಹೆಚ್ಚಿನದನ್ನು ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.