ಬೆಂಗಳೂರು: ಬೆಂಗಳೂರು ನಗರದ ರಸ್ತೆಗುಂಡಿ, ಟ್ರಾಫಿಕ್ ದಟ್ಟಣೆ, ಕಸದ ಸಮಸ್ಯೆ ಬಗ್ಗೆ ಉದ್ಯಮಿಗಳಾದ ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರುಗಳ ಮಧ್ಯೆ ಮಾತಿನ ಚಕಮಕಿ ಮುಂದುವರಿದಿದೆ.
ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಉದ್ಯಮಿ ಕಿರಣ್ ಮಜೂಂದಾರ್ ಶಾ ಅವರು ಮೂಲಭೂತಸೌಕರ್ಯಗಳ ಬಗ್ಗೆ ಮಾತನಾಡಿರುವುದಕ್ಕೆ ಡಿಸಿಎಂ ಆಕ್ಷೇಪ ವ್ಯಕ್ತಪಡಿಸಿ ಅವರಿಗೆ ವೈಯಕ್ತಿಕ ಅಜೆಂಡಾ ಇರಬೇಕು, ಬಿಜೆಪಿ ಆಡಳಿತಾವಧಿಯಲ್ಲಿ ಅವರು ಯಾಕೆ ಬಾಯಿ ತೆರೆಯಲಿಲ್ಲ. ಅವರೊಂದಿಗೆ ಇವರು ಕೆಲವು ವೈಯಕ್ತಿಕ ಅಜೆಂಡಾ ಹೊದಿದ್ದಾರೆ ಎಂದಿದ್ದರು.
ಈ ಬಗ್ಗೆ ತಿರುಗೇಟು ನೀಡಿರುವ ಉದ್ಯಮಿ ಕಿರಣ್ ಮಜೂಂದಾರ್ ಶಾ, ಡಿಕೆ ಶಿವಕುಮಾರ್ ಮಾತು ಸತ್ಯವಲ್ಲ. ಪೈ ಮತ್ತು ನಾನು ಇಬ್ಬರೂ ಈ ಹಿಂದಿನಿಂದಲ್ಲೂ ಟೀಕಿಸುತ್ತಾ ಬಂದಿದ್ದೇವೆ. ಈಗಲೂ ಹೇಳುತ್ತಿದ್ದೇವೆ, ಇದರಲ್ಲಿ ಯಾವುದೇ ವೈಯಕ್ತಿಕ ಅಜೆಂಡಾ ಇಲ್ಲ ಎಂದರು.