ಸಾಂದರ್ಭಿಕ ಚಿತ್ರ 
ರಾಜ್ಯ

ರಾಜ್ಯದಲ್ಲಿ 'PPP' ಮಾದರಿಯಲ್ಲಿ ಎಂಟು ವೈದ್ಯಕೀಯ ಕಾಲೇಜುಗಳು: ಸರ್ಕಾರದ ಪ್ರಸ್ತಾವನೆಗೆ ಶಿಕ್ಷಣ ತಜ್ಞರ ಆಕ್ಷೇಪ!

PPP ಮಾದರಿ ವಂಚನೆ ಶಿಕ್ಷಣ ಮತ್ತು ಆರೋಗ್ಯದಂತಹ ಪ್ರಮುಖ ಕ್ಷೇತ್ರಗಳಿಗೆ ಸೂಕ್ತವಲ್ಲ ಎಂದು ಶಿಕ್ಷಣ ತಜ್ಞ ವಿ. ಪಿ. ನಿರಂಜನಾರಾಧ್ಯ ಹೇಳಿದ್ದಾರೆ.

ಬೆಂಗಳೂರು: ಕೋಲಾರ, ತುಮಕೂರು, ವಿಜಯಪುರ, ದಾವಣಗೆರೆ, ಉಡುಪಿ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸರ್ಕಾರಿ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಎಂಟು ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ನಗರ ಮೂಲದ ಶಿಕ್ಷಣ ತಜ್ಞರು ತೀವ್ರವಾಗಿ ಟೀಕಿಸಿದ್ದಾರೆ.

PPP ಮಾದರಿ ವಂಚನೆ ಶಿಕ್ಷಣ ಮತ್ತು ಆರೋಗ್ಯದಂತಹ ಪ್ರಮುಖ ಕ್ಷೇತ್ರಗಳಿಗೆ ಸೂಕ್ತವಲ್ಲ ಎಂದು ಶಿಕ್ಷಣ ತಜ್ಞ ವಿ. ಪಿ. ನಿರಂಜನಾರಾಧ್ಯ ಹೇಳಿದ್ದಾರೆ. ಖಾಸಗಿ ಸಂಸ್ಥೆಗಳು ಹತೋಟಿ ತೆಗೆದುಕೊಂಡಾಗ, ಶಿಕ್ಷಣವು ಸಾಮಾಜಿಕ ಹಕ್ಕಿಗಿಂತ ವ್ಯಾಪಾರವಾಗುತ್ತದೆ. ಇದು ದುರ್ಬಲ ಸಮುದಾಯಗಳ ಪ್ರವೇಶವನ್ನು ಕಸಿದುಕೊಳ್ಳುತ್ತದೆ ಮತ್ತು ಕಲಿಕೆಯನ್ನು ಶ್ರೀಮಂತರ ಸವಲತ್ತುಗಳಾಗಿ ಪರಿವರ್ತಿಸುತ್ತದೆ. ಇದು ಅತ್ಯಂತ ಅಮಾನವೀಯ ಮತ್ತು ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಸ್ವಾಭಾವಿಕ ನ್ಯಾಯ ಎಲ್ಲಿದೆ? ಅವಕಾಶಗಳ ಸಮಾನತೆ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.

ವೈದ್ಯಕೀಯ ಶಿಕ್ಷಣದಲ್ಲಿ ಖಾಸಗೀಕರಣ ವಿದ್ಯಾರ್ಥಿಗಳಲ್ಲಿ ಲಾಭದಾಯಕ ಮನಸ್ಥಿತಿಯನ್ನು ಪ್ರೋತ್ಸಾಹಿಸುತ್ತದೆ. ಯಾರೇ ಆಗಲಿ ವೈದ್ಯಕೀಯ ಅಧ್ಯಯನವನ್ನು ಪೂರ್ಣಗೊಳಿಸಲು ಕೋಟಿಗಟ್ಟಲೆ ಖರ್ಚು ಮಾಡಿದಾಗ, ಜನರಿಗೆ ಸೇವೆ ಮಾಡುವ ಬದಲು ಆ ಹಣವನ್ನು ಹಿಂಪಡೆಯುವ ಉದ್ದೇಶ ಹೆಚ್ಚಾಗಿರುತ್ತದೆ. ಶಿಕ್ಷಣ ರಾಜ್ಯ ಸರ್ಕಾರದ ನಿರ್ವಹಣೆಯಾಗಿರಬೇಕು. ತಾರತಮ್ಯವಿಲ್ಲದೆ ಎಲ್ಲರಿಗೂ ದೊರೆಯುವಂತಾಗಬೇಕು. ಇಲ್ಲದಿದ್ದರೆ ಸಂಪೂರ್ಣ ವ್ಯವಸ್ಥೆಯೇ ಹದಗೆಟ್ಟು ಹೋಗುತ್ತದೆ. ಹಣ ಇಲ್ಲದವರು ಮೂಲಭೂತ ಹಕ್ಕುಗಳನ್ನು ಕಳೆದುಕೊಳ್ಳುವಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ವೈದ್ಯಕೀಯ ಕಾಲೇಜುಗಳ ಸರ್ಕಾರದ ಪ್ರಸ್ತಾಪವು ಖಂಡಿತವಾಗಿಯೂ ಖಾಸಗೀಕರಣಕ್ಕೆ ಕಾರಣವಾಗುತ್ತದೆ. ಅನುಮತಿ ನೀಡುವಾಗ ಶೇ. 50 ರಷ್ಟು ಸೀಟುಗಳನ್ನು ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳಿಗೆ ಹಂಚುವುದು ಅಥವಾ ಸರ್ಕಾರಿ ಪ್ರವೇಶ ಪರೀಕ್ಷೆಯ ಶೇ. 50 ರಷ್ಟು ಮೀಸಲು ಮುಂತಾದ ಷರತ್ತುಗಳನ್ನು ವಿಧಿಸಬೇಕು ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತ ವಾಸುದೇವ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಶಿಕ್ಷಣದ ಖಾಸಗೀಕರಣ ವಾಣಿಜ್ಯೀಕರಣದತ್ತ ಒಂದು ಹೆಜ್ಜೆಯಾಗಲಿದೆ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (AIDSO) ಸದಸ್ಯರು ಆರೋಪಿಸಿದ್ದಾರೆ. PPP ಮಾದರಿಯು ಅಭಿವೃದ್ಧಿಯ ಹೆಸರಿನಲ್ಲಿ "ಸಾರ್ವಜನಿಕ ಸಂಪನ್ಮೂಲಗಳನ್ನು ಖಾಸಗಿ ಲಾಭಕೋರರಿಗೆ ಹಸ್ತಾಂತರಿಸುವ ಸಾಧನವಾಗಿದೆ. ಇಂತಹ ವ್ಯವಸ್ಥೆಗಳಿಂದ ಅತಿಯಾದ ಶುಲ್ಕ, ಶೈಕ್ಷಣಿಕ ಗುಣಮಟ್ಟ ಕುಸಿಯುವುದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಣೆ ಮಾಡುತ್ತದೆ ಎಂದು ಸಂಘಟನೆ ಎಚ್ಚರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'INS Vikrant ಪಾಕಿಗಳ ನಿದ್ರೆಗೆಡಿಸಿತ್ತು.. ಬ್ರಹ್ಮೋಸ್, ಆಕಾಶ್‌ ಕ್ಷಿಪಣಿಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಬಂದಿದೆ': ಆಪರೇಷನ್ ಸಿಂದೂರ ಕುರಿತು ಪ್ರಧಾನಿ ಮೋದಿ

Bihar Polls: ನಾಮಪತ್ರ ಸಲ್ಲಿಕೆಗೆ ಕಡೆಯ ದಿನ, ಆರ್ ಜೆಡಿಯ 143 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ!

'96 ಲಕ್ಷ ನಕಲಿ ಮತದಾರರ ಸೇರ್ಪಡೆ': ಚುನಾವಣಾ ಆಯೋಗದ ವಿರುದ್ಧ ರಾಜ್ ಠಾಕ್ರೆ ಕಿಡಿ

ಶಿಮ್ಲಾದಲ್ಲಿ ಪಂಚಾಯತ್ ಮುಖ್ಯಸ್ಥನಿಂದ ಬಾಲಕಿ ಮೇಲೆ ಅತ್ಯಾಚಾರ!

'ಸಂಬಳ ನೀಡದೇ ಕಿರುಕುಳ': ಡೆತ್‌ ನೋಟ್‌ ಬರೆದು ಬೆಂಗಳೂರಿನಲ್ಲಿ ಓಲಾ ಎಂಜಿನಿಯರ್ ಆತ್ಮಹತ್ಯೆ, ಭವೀಶ್ ಅಗರ್ವಾಲ್ ವಿರುದ್ಧ ಪ್ರಕರಣ!

SCROLL FOR NEXT