ಬೆಂಗಳೂರು: ದೀಪಾವಳಿ ಹಬ್ಬದ ಆಚರಣೆ ಮಧ್ಯೆ ಬೆಂಗಳೂರಿನ ಜನತೆಗೆ ಇಂದು ಬೆಳ್ಳಂಬೆಳಗ್ಗೆಯೇ ವರುಣನ ದರ್ಶನವಾಗಿದೆ. ಬೆಂಗಳೂರು ನಗರದ ಬಹುತೇಕ ಕಡೆ ಶೀತ ಗಾಳಿಯೊಂದಿಗೆ ತುಂತುರು ಮಳೆ ಸುರಿದಿದೆ. ಚುಮುಚುಮು ಚಳಿ ಮಧ್ಯೆ ಜಿಟಿಜಿಟಿ ಮಳೆ ಸುರಿಯುತ್ತಿದ್ದು ಸದ್ಯ ಕೊಂಚ ವಿಶ್ರಾಂತಿ ಕಂಡು ಮೋಡ ಕವಿದ ವಾತಾವರಣವಿದೆ.
ದೀಪಾವಳಿಗೆ ಮಳೆಯ ಸಿಂಚನ
ದೀಪಾವಳಿ ಹಬ್ಬದ ಆಚರಣೆಯಲ್ಲಿರುವವರಿಗೆ ವರುಣ ತಂಪೆರಿದಿದ್ದಾನೆ. ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗಾಗಿ ಬೆಂಗಳೂರು ಜನತೆ ಹೊರಗೆ ಹೋಗುವಾಗ ಕೊಡೆ, ರೈನ್ ಕೋಟ್ ತೆಗೆದುಕೊಂಡು ಹೋಗುವುದು ಒಳ್ಳೆಯದು.