ಲವ್ ಜಿಹಾದ್ ಕೇಸ್ ಆರೋಪಿ ಮಹಮ್ಮದ್ ಇಶಾಕ್ 
ರಾಜ್ಯ

Love Jihad ಆರೋಪಿ ಬಂಧನ: ಮತಾಂತರವಾಗದ್ದಕ್ಕೆ ಯುವತಿಗೆ ಕೈ ಕೊಟ್ಟಿದ್ದ ಮಹಮ್ಮದ್ ಇಶಾಕ್!

ಲವ್ ಜಿಹಾದ್ (Love Jihad) ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತಹಳ್ಳಿ ಪೊಲೀಸರು ಆರೋಪಿ ಮೊಹಮ್ಮದ್​​​​ ಇಶಾಕ್​​ನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಲವ್ ಜಿಹಾದ್ ಪ್ರಕರಣದ ಆರೋಪಿ ಮಹಮ್ಮದ್ ಇಶಾಕ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಲವ್ ಜಿಹಾದ್ (Love Jihad) ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತಹಳ್ಳಿ ಪೊಲೀಸರು ಆರೋಪಿ ಮೊಹಮ್ಮದ್​​​​ ಇಶಾಕ್​​ನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿ ಮಹಮ್ಮದ್ ಇಶಾಕ್ ಹಾಗೂ ಆತನ ಬಾವ ಸಂತ್ರಸ್ಥೆಗೆ ಪದೇ ಪದೇ ಮತಾಂತರಕ್ಕೆ ಒತ್ತಾಯ ಮಾಡಿರುವ ಆರೋಪ ಕೇಳಿಬಂದಿತ್ತು.

ಮತಾಂತರಕ್ಕೆ ಒಪ್ಪದಿದ್ದಕ್ಕೆ ಪ್ರಿಯತಮೆಗೆ ಕೈಕೊಟ್ಟಿದ್ದ ಆರೋಪದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಮಹಮದ್ ಇಶಾಕ್ ಬೇರೊಬ್ಬ ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿದ್ದ. ಈ ಸಂಬಂಧ ಹೆಚ್​ಎಸ್​ಆರ್ ಲೇಔಟ್​​​ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಳು.

ಏನಿದು ಪ್ರಕರಣ?

2024ರ ಅಕ್ಟೋಬರ್​​ 17ರಂದು ಯುವತಿಗೆ ಮೊಹಮ್ಮದ್ ಇಶಾಕ್‌ನ ಪರಿಚಯವಾಗಿತ್ತು. ಈ ಪರಿಚಯ ಸ್ನೇಹ ಮತ್ತು ಪ್ರೀತಿಯಾಗಿ ಬೆಳೆದಿತ್ತು. 2024ರ ಅಕ್ಟೋಬರ್​​ 30ರಂದು ಥಣಿಸಂದ್ರದ ಮಾಲ್‌ನಲ್ಲಿ ಇಬ್ಬರೂ ಭೇಟಿಯಾಗಿದ್ದರು. ನಂತರ ಯುವತಿ ಜೊತೆ ಇಶಾಕ್ ಸಲುಗೆ ಬೆಳೆಸಿಕೊಂಡಿದ್ದ. ಆರೋಪಿ ಇಶಾಕ್, ಮದುವೆಯಾಗುವುದಾಗಿ ಸಂತ್ರಸ್ಥೆಗೆ ನಂಬಿಸಿದ್ದ. ಬಳಿಕ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎನ್ನಲಾಗಿದೆ.

ಇಷ್ಟೆಲ್ಲ ಆದಮೇಲೆ ಆಕೆಯನ್ನ ಮತಾಂತರ ಮಾಡಲು ಪ್ರಯತ್ನಿಸಿದ್ದ ಎನ್ನಲಾಗಿದ್ದು, ಆದರೆ ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿದ್ದಾಳೆ. ಅಲ್ಲದೇ, 2025ರ ಸೆ.14ರಂದು ಮುಸ್ಲಿಂ ಯುವತಿಯೊಬ್ಬರ ಜೊತೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯ ತಿಳಿದು ಪ್ರಶ್ನೆ ಮಾಡಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.

ಇನ್ನು, ಆರೋಪಿ ಇಶಾಕ್ ಹಾಗೂ ಆತನ ಬಾವ ಸಂತ್ರಸ್ಥೆಗೆ ಪದೇ ಪದೇ ಮತಾಂತರಕ್ಕೆ ಒತ್ತಾಯ ಮಾಡಿರುವ ಆರೋಪ ಕೇಳಿಬಂದಿದೆ. ಸಂತ್ರಸ್ಥೆ ಜೊತೆ ಒಪ್ಪಿತ ಲೈಂಗಿಕ ಸಂಪರ್ಕ ಬೆಳಸಿ, ಮೋಸ ಮಾಡಲು ಯತ್ನಿಸಿದ್ದಾನೆ. ಈ ಕುರಿತು ಸಂತ್ರಸ್ಥೆ ಹೆಚ್​ಎಸ್​ಆರ್​ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕೃತ್ಯವು ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ್ದರಿಂದ, ಅಮೃತಹಳ್ಳಿ ಠಾಣೆಗೆ ಪ್ರಕರಣ ವರ್ಗಾವಣೆಗೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ವಾಯುಮಾಲಿನ್ಯ ತಡೆಗೆ ಸುಪ್ರೀಂ ಕೋರ್ಟ್ ಕಠಿಣ ಕ್ರಮ: BS-6 ವಾಹನಗಳಿಗೆ ಮಾತ್ರ ಪ್ರವೇಶ; ಪೆಟ್ರೋಲ್ ಖರೀದಿಗೆ PUC ಕಡ್ಡಾಯ!

ಒಂದೆಡೆ ಹುಟ್ಟಿದ ಈ ಮೂರು ಮತಗಳ ನಡುವಿನ ತಕರಾರುಗಳಿಗೆ ಮೂಲವೆಲ್ಲಿದೆ? (ತೆರದ ಕಿಟಕಿ)

ಕಬಡ್ಡಿ ಪಟು ಹತ್ಯೆ ಪ್ರಕರಣ: ಪೊಲೀಸ್ ಎನ್‌ಕೌಂಟರ್ ನಲ್ಲಿ ಪ್ರಮುಖ ಆರೋಪಿ ಹತ!

ಟೀಂ ಇಂಡಿಯಾಗೆ ಆಘಾತ: ಶುಭ್ ಮನ್ ಗಿಲ್, ಜೈಸ್ವಾಲ್ ಗೆ ಗಾಯ; ಟಿ20 ಸರಣಿಯಿಂದ ಗಿಲ್ ಔಟ್!

IPL: ಢಾಕಾದಲ್ಲಿ ಭಾರತ ವಿರೋಧಿ ಪ್ರತಿಭಟನೆ; 9 ಕೋಟಿಗೆ ಮುಸ್ತಾಫಿಜುರ್ ಖರೀದಿಸಿದ KKR; BCCI ವಿರುದ್ಧ ನೆಟ್ಟಿಗರ ಆಕ್ರೋಶ!

SCROLL FOR NEXT